ಬೆಂಗಳೂರು: ಹೈವೋಲ್ಟೇಜ್ ಕ್ಷೇತ್ರ ಎಂದೇ ಪರಿಗಣಿತವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆ ಅವರ ರಾಜಕೀಯ ಭವಿಷ್ಯಕ್ಕೆ ಆತಂಕವನ್ನು ತಂದೊಡ್ಡುತ್ತದೆ ಎಂದು ಗುಪ್ತಚರ ಇಲಾಖೆ ವರದಿ ಮಾಡಿರುವುದಾಗಿ ಹೇಳಲಾಗಿದೆ.
ಈ ಕುರಿತಂತೆ ಬಲ್ಲ ಮೂಲಗಳಿಂದ ವರದಿಯಾಗಿದ್ದು, ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್’ನ ಕೆಲವು ನಾಯಕರು ಅವರಿಗೆ ಬೆಂಬಲ ನೀಡುತ್ತಿರುವುದರಿಂದ ಸಮಲತಾ ಪರ ಅಲೆ ಇದೆ. ಇದರೊಂದಿಗೆ ಸಚಿವ ಡಿ.ಸಿ. ತಮ್ಮಣ್ಣ ಹಾಗೂ ರೇವಣ್ಣ ಹೇಳಿಕೆಗಳು ಸೇರಿದಂತೆ ಅಂಬರೀಶ್ ಅನುಕಂಪದ ಅಲೆ ಸುಮಲತಾ ಅವರತ್ತ ಒಲವು ಹೆಚ್ಚಾಗುತ್ತಿದ್ದು, ನಿಖಲ್’ಗೆ ಭಾರೀ ಅಂತರದಲ್ಲಿ ಸೋಲುಂಟಾಗುವ ಭೀತಿಯಿದೆ ಎನ್ನಲಾಗಿದೆ.
ಮಂಡ್ಯದಲ್ಲಿ ಎಲ್ಲ 7 ವಿಧಾನಸಭಾ ಕ್ಷೇತ್ರಗಳದಲ್ಲಿ ಜೆಡಿಎಸ್ ಶಾಸಕರಿದ್ದು, ಮಂಡ್ಯ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದೆ. ಆದಾಗ್ಯೂ ಕುಮಾರಸ್ವಾಮಿ ಅವರಿಗೆ ತಮ್ಮ ಪುತ್ರನ ಸೋಲಿನ ಭಯ ಶುರುವಾಗಿದೆ. ವಿಧಾನಸಭೆಯಲ್ಲಿ ಇದ್ದ ಅಲೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್’ಗೆ ಪೂರಕವಾದ ವಾತಾವರಣವಿಲ್ಲ. ಕಾರಣ ಕುಟುಂಬ ರಾಜಕಾರಣ ಎಂಬ ಹಣೆಪಟ್ಟಿ ಅಂಟುಕೊಂಡಿದೆ. ಇದರೊಂದಿಗೆ ಸುಮಲತಾ ಸ್ಪರ್ಧೆಗೆ ಅಂಬರೀಶ್ ಅಭಿಮಾನಿಗಳ ಬೆಂಬಲವೂ ಇರುವುದಿರಂದ ನಿಖಿಲ್’ಗೆ ಸಂಕಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
Discussion about this post