ಶಿಕಾರಿಪುರ: ಭಾರತ ಹಾಗೂ ಪಾಕಿಸ್ಥಾನ ಯುದ್ಧ ಕಾರ್ಮೋಡ ಮುಸುಕಿರುವ ಬೆನ್ನಲ್ಲೇ ದೇಶದೊಳಗೇ ಇದ್ದುಕೊಂಡು ದೇಶದ್ರೋಹದ ಕಾರ್ಯ ಮಾಡುತ್ತಿರುವವ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಯುವಕನೊಬ್ಬ ಸೇರಿದ್ದಾನೆ.
ಸಂಡ ಗ್ರಾಮದ ಇರ್ಷಾದ್ ಎಂಬ ಯುವಕನೊಬ್ಬ ಪಾಕಿಸ್ಥಾನದ ಸೇನೆ ಪರವಾಗಿ ಜೈಕಾರ ಹಾಕುವ ರೀತಿಯಲ್ಲಿ ಪೋಸ್ಟ್ ಮಾಡಿದ್ದು, ಉರ್ದು ಭಾಷೆಯಲ್ಲಿ ಪಾಕಿಸ್ಥಾನದ ಪರವಾದ ಘೋಷಣೆ ಬಳಕೆ ಮಾಡಿರುವ ಘಟನೆ ತಾಲೂಕಿನ ಸಂಡ ಗ್ರಾಮದಲ್ಲಿ ನಡೆದಿದೆ.
ಇರ್ಷಾದ್ ತನ್ನ ಫೇಸ್’ಬುಕ್ ಖಾತೆಯಲ್ಲಿ ಈ ರೀತಿ ಪೋಸ್ಟ್ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆತನ ಪೋಸ್ಟ್ ಗಮನಿಸಿದ ಗ್ರಾಮಸ್ಥರು ಅತನನ್ನು ಥಳಿಸಿ ಶಿಕಾರಿಪುರ ಗ್ರಾಮಾಂತರ ಪೋಲಿಸ್ ಠಾಣೆ ಒಪ್ಪಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇರ್ಷಾದ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಈ ರೀತಿ ಪೋಸ್ಟ್ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆತನ ಪೋಸ್ಟ್ ಗಮನಿಸಿದ ಗ್ರಾಮಸ್ಥರು ಅತನನ್ನು ಥಳಿಸಿ ಶಿಕಾರಿಪುರ ಗ್ರಾಮಾಂತರ ಪೋಲಿಸ್ ಠಾಣೆ ಒಪ್ಪಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಗ್ರಾಮಸ್ಥರು,ಈತ ಈ ರೀತಿ ಪೋಸ್ಟ್ ಹಾಕಿರುವುದನ್ನು ಸುಮಾರು 30-40 ಮಂದಿ ಈತನ ಬಳಿ ಪ್ರಶ್ನಿಸಿದೆವು. ಆದರೆ, ಇದಕ್ಕೆ ದುರಹಂಕಾರದ ಉತ್ತರ ನೀಡಿದ ಆತ ನನ್ನ ಮೊಬೈಲ್ ನನ್ನ ಇಷ್ಟ. ಯಾರನ್ನು ಬೇಕಾದರೂ ಬೆಂಬಲಿಸುತ್ತೇನೆ, ಯಾವ ದೇಶವನ್ನು ಬೇಕಾದರೂ ಬೆಂಬಲಿಸುತ್ತೇನೆ. ನೀವ್ಯಾರು ಕೇಳಲು. ಪುಲ್ವಾಮಾದಲ್ಲಿ ದಾಳಿ ನಡೆದಾಗಿ ಪಟಾಕಿ ಹೊಡೆದು ಸಂಭ್ರಮಿಸಿದ್ದೆ. ಆದರೆ, ಅಂದು ಯಾತಕ್ಕಾಗಿ ಹೊಡೆದೆ ಎಂದು ಯಾರಿಗೂ ತಿಳಿಯಲಿಲ್ಲ ಎಂದು ದೇಶದ ವಿರುದ್ಧ ಅಪಹಾಸ್ಯ ಮಾಡಿದ ಎಂದು ದೂರಿದ್ದಾರೆ.
ದೇಶದಲ್ಲಿ ಜನಿಸಿ, ದೇಶದ ಅನ್ನ ತಿಂದು, ನಮ್ಮ ದೇಶದ ಯೋಧರಿಗೆ ಹಾಗೂ ದೇಶಕ್ಕೆ ದ್ರೋಹ ಮಾಡುವ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಸ್ಥರು ಥಳಿಸಿರುವ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿರುವ ಇರ್ಷಾದ್’ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕುರಿತಂತೆ ಇಂದು ಮುಂಜಾನೆಯವರೆಗೂ ದೂರು ಹಾಗೂ ಎಫ್‘ಐಆರ್ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಭಾರತದ ಭೂಮಿಯಲ್ಲಿ ಜನಿಸಿ ಪಾಕಿಸ್ಥಾನದ ಪರ ಪೋಸ್ಟ್ ಹಾಕುವ ಪ್ರಸಂಗಗಳು ಇತ್ತೀಚೆಗೆ ಹೆಚ್ಚಾಗಿದ್ದು, ಈ ರೀತಿ ಪೋಸ್ಟ್ ಮಾಡುವ ದೇಶದ್ರೋಹಿಗಳ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಭಾರತೀಯರ ಆಶಯವಾಗಿದೆ.
ಒಟ್ಟಿನಲ್ಲಿ ಈ ರೀತಿಯ ಪ್ರಕರಣಗಳಿಂದ ಸಮಾಜದ ಶಾಂತಿಗೆ ಮತ್ತು ಐಕ್ಯತೆಗೆ ದಕ್ಕೆ ತರುವ ಸಮಾಜದ ಸ್ವಸ್ಥತೆಯನ್ನು ಹಾಳು ಮಾಡವ ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೋಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಇಡಿಯ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕದಡದೇ, ಚುನಾವಣೆಯನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ದಯಾನಂದ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಅವರು ಸೇರಿದಂತೆ ಇಡಿಯ ಜಿಲ್ಲಾ ವ್ಯವಸ್ಥೆ ಹಗಲಿರುಳು ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇಂತಹ ಕಿಡಿಗೇಡಿಗಳ ಕೃತ್ಯ ಶಾಂತಿಗೆ ಭಂಗ ತರುವ ಸಾಧ್ಯತೆಯಿದೆ. ಹೀಗಾಗಿ, ಜಿಲ್ಲಾ ಪೊಲೀಸ್ ಇಲಾಖೆ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post