ನಮಸ್ಕಾರ ಪ್ರಿಯ ಓದುಗರೇ ನಾನು ನಿಮ್ಮ ರೋಹನ್ ಪಿಂಟೋ. ಒಂದು ನೈಜ ಪ್ರೇಮಕತೆಯೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ.
ಈ ಪ್ರೇಮಕಥೆ ಯಾವದೇ ಸಿನೆಮಾ ಕತೆಗೂ ಕಡಿಮೆ ಇಲ್ಲ… ಆದರೆ ಈ ಕತೆಗೂ ಸಿನೆಮಾ ಕತೆಯ ನಡುವೆ ಎರಡು ವ್ಯತ್ಯಾಸಗಳಿವೆ. ಅವುಗಳೆಂದರೆ ಬಹುತೇಕ ಪ್ರೇಮಕತೆಗೆ ಸುಖಾಂತ್ಯವೊ, ಇಲ್ಲ ದುಃಖಾಂತ್ಯವೋ ಇರುತ್ತದೆ. ಆದರೆ ಈ ಪ್ರೇಮಕತೆ ಒಂದು ರೀತಿಯಲ್ಲಿ ಅಪೂರ್ಣವಾಗಿದೆ. ಇನ್ನೊಂದು ಅಂಶವೆಂದರೆ ಈ ಕತೆಯ ನಾಯಕ ಮತ್ತು ನಾಯಕಿ ಇಬ್ಬರೂ ನನ್ನ ಅತ್ಮೀಯರು. ಈಗ ಕತೆ ಆರಂಭ ಮಾಡುತ್ತೇನೆ.
ಈ ಕತೆಯ ಆರಂಭದ ಬೇರುಗಳು ಇರುವುದು ನನ್ನ ಹೈಸ್ಕೂಲ್ ಜೀವನದಲ್ಲಿ. ಓದಿ ಗೊಂದಲಕ್ಕೆ ಒಳಗಾಗಬೇಡಿ. ಮುಂದೆ ಓದಿ ಅರ್ಥ ಆಗುತ್ತದೆ.
ಅದು ನನ್ನ ಹೈಸ್ಕೂಲ್ ಜೀವನದ ಆರಂಭಿಕ ದಿನಗಳು. ನನಗೆ ಒಬ್ಬ ಗೆಳೆಯನಾದ. ಆತನ ಹೆಸರು ಮೈಕಲ್. (ಹೆಸರು ಬದಲಾವಣೆ ಮಾಡಲಾಗಿದೆ). ಈತನೇ ಈ ಕತೆಯ ನಾಯಕ. ಸ್ನೇಹ ಒಂದಿಷ್ಟು ಮಟ್ಟಿಗೆ ಗಾಢವೂ ಆಗಿತ್ತು. ಇದಕ್ಕೆ ಕಾರಣ ಬಹುಶಃ ಧರ್ಮವೂ ಆಗಿರಬಹುದು. ಆತ ನನ್ನ ಸೀನಿಯರ್ ಆಗಿದ್ದ. ಒಂದು ವರ್ಷದ ಬಳಿಕ ಆತ ಹೈಸ್ಕೂಲ್ ಮುಗಿಸಿ ಹೊರಟು ಹೋದ. ಆದರೆ ಸ್ನೇಹದ ನೆನಪು ಮಾತ್ರ ಜೀವಂತವಾಗಿತ್ತು.
ಆ ನೆನಪುಗಳ ಜೊತೆ ನನ್ನ ಪದವಿ ಶಿಕ್ಷಣ ಸಹ ಮುಗಿಯುತ್ತ ಬಂತು. ಆದರೆ ಗೆಳೆಯ ನನಗೆ ಮರಳಿ ಸಿಗಲೇ ಇಲ್ಲ. ಹಾಗೇ ನನ್ನ ಕಾಲೇಜು ದಿನಗಳು ಮುಗಿಯೋದಕ್ಕೆ ಒಂದು ಸೆಮಿಸ್ಟರ್ ಇರುವಾಗ ನನ್ನ ಗೆಳತಿಯೊಬ್ಬಳು ನನ್ನನ್ನು ವಾಟ್ಸಾಪ್ ಗ್ರೂಪ್’ಗೆ ಸೇರಿಸಿದಳು.
ಆ ಗ್ರೂಪ್ ನಲ್ಲಿ ನನಗೆ ಒಬ್ಬ ಹುಡುಗಿ ಪರಿಚತವಾದಳ್ು. ಆಕೆಯ ಹೆಸರು ಸ್ಟೆಲ್ಲಾ (ಹೆಸರು ಬದಲಾಯಿಸಿದೆ) ಈಕೆಯೇ ಕಥೆಯ ನಾಯಕಿ. ಆ ಪರಿಚಯ ಸ್ನೇಹಕ್ಕೆ ತಿರುಗಿತು. ಅವಳಿಗೆ ಆಗಾಗ ತಲೆ ತಿನ್ನಲಾಂಭಿಸಿದೆ. ಹೀಗೆ ಇಬ್ಬರೂ ಉತ್ತಮ ಗೆಳಯರಾದೆವು. ಅದಾದ ಕೆಲ ದಿನಗಳ ಬಳಿಕ ನಾನೊಂದು ದಿನ ಫೇಸ್’ಬುಕ್ ಓಪನ್ ಮಾಡಿದೆ. ಅಲ್ಲಿ ಒಂದು ನನಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಪ್ರೊಫೈಲ್ ನೋಡಿದಾಗ ಅದು ನನ್ನ ಹೈಸ್ಕೂಲ್’ನ ಗೆಳೆಯ ಮೈಕಲ್’ನದೆ ಎಂದು ಖಾತ್ರಿ ಆಗಿತ್ತು. ಕೊನೆಗೆ ಚಾಟ್ ಆರಂಭಿಸಿ ವಾಟ್ಸಾಪ್ ನಂಬರ್ ಸಹ ವಿನಿಮಯ ಮಾಡಿಕೊಂಡೆವು. ಹಲವು ವರ್ಷಗಳಿಂದ ಸಂಪರ್ಕವೇ ಇಲ್ಲದ ಗೆಳೆಯ ಮರಳಿ ದೊರೆತ್ತದ್ದು ನನಗೆ ಸಂತೋಷ ಉಂಟು ಮಾಡಿತ್ತು.
ನನಗೆ ಒಂದು ಅಭ್ಯಾಸವಿದೆ ಅದೇನೆಂದರೆ ನನ್ನ ಆತ್ಮೀಯರ ಫೋಟೋವನ್ನು ಸ್ಟೇಟಸ್’ಗೆ ಆಗಾಗ ಹಾಕುವುದು.. ಹೀಗೆ ಹಲವು ದಿನಗಳ ಕಾಲ ಅವಳ ಒಪ್ಪಿಗೆ ಪಡೆದು ಫೊಟೊವನ್ನು ಸ್ಟೇಟಸ್’ಗೆ ಹಾಕಿದೆ. (ಮೈಕಲ್ ಮರಳಿ ಪರಿಚಯವಾಗುವ ಮುನ್ನ)
ಒಂದು ದಿನ ಹೀಗೆ ಸ್ಟೇಟಸ್ ಗೆ ಅವಳ ಫೊಟೋ ಹಾಕಿದೆ. ಅದು ಮೈಕಲ್ ಪರಿಚಯ ಆದ ಬಳಿಕ ಮೊದಲ ಬಾರಿ ಹಾಕಿದ್ದು. ಇದನ್ನು ನೋಡಿ ಆತ ಏಕೋ ಸ್ವಲ್ಪ ಅಸಮಾಧಾನಗೊಂಡ ಕಾರಣ ಕೇಳಿದ ಕೂಡಲೇ ನನಗೆ ಒಂದು ರೀತಿಯಲ್ಲಿ ಆಶ್ಚರ್ಯ ಕಾದಿತ್ತು. ಕಾರಣ ಅವರಿಬ್ಬರೂ ಪ್ರೀತಿಸುತ್ತಿದ್ದರು. ಕೊನೆಗೆ ಅವರಿಬ್ಬರಿಂದ ಅವರ ಪ್ರೇಮ ಕತೆ ತಿಳಿದುಕೊಂಡೆ. ಪರಸ್ಪರ ದೂರದ ಸಂಬಂಧಿಕರಾದರೂ ಫೇಸ್’ಬುಕ್ ಮೂಲಕ ಪರಿಚಯವಾಗಿ ಪರಸ್ಪರ ಭೇಟಿಯೂ ಆಗದೆ ಪ್ರೀತಿಸುತ್ತಿರುವ ವಿಚಾರ ಸಹ ತಿಳಿಯಿತು.
ಇವರಿಬ್ಬರ ಬದುಕಿನಲ್ಲಿ ಭಗವಂತ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಮಾತು ನಿಜವಾಯಿತು. ಅರ್ಥಾತ್ ಬಹುತೇಕ ಪ್ರೇಮಕತೆಗಳಲ್ಲಿ ಆಗುವ ರೀತಿಯಲ್ಲೇ ಈ ಕತೆಗೂ ವಿರೋಧ ವ್ಯಕ್ತಪಡಿಸಿದ್ದು ಹುಡುಗಿಯ ಕುಟುಂಬಸ್ಥರು. ಹೌದು ಹುಡುಗಿ ಎಷ್ಟೇ ಕೇಳಿಕೊಂಡರೂ ಒಪ್ಪಿಗೆ ನೀಡದ ಅಪ್ಪ ಅಮ್ಮ ಆ. ಹುಡುಗನನ್ನು ಮರೆಯುವಂತೆ ಒತ್ತಡ ಹಾಕಿದ್ದೂ ಈಗಲೂ ಅದೇ ನಿಲುವು ಹೊಂದಿದ್ದಾರೆ. ಆದರೆ ಹುಡುಗನ ಕುಟುಂಬ ಈ ಹುಡುಗಿಯನ್ನು ಸೊಸೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ.
ಗುಣದಲ್ಲಿ ಮತ್ತು ನೋಡಲು ಹುಡುಗ ಚೆನ್ನಾಗಿಯೆ ಇದ್ದು ವಿದೇಶದಲ್ಲಿ ಕೆಲಸದಲ್ಲಿ ಸಹ ಇದ್ದಾನೆ. ಇಷ್ಟಾದರೂ ದೂರದ ಸಂಬಂಧ ಎಂಬ ಕಾರಣ ನೀಡಿ ಇಬ್ಬರು ಪ್ರೇಮಿಗಳನ್ನು ದೂರ ಮಾಡುವುದು ಎಷ್ಟು ಸರಿ?
ಏನೇ ಆದರೂ ತನ್ನ ಪ್ರೀತಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಹುಡುಗ… ಇತ್ತ ಕುಟುಂಬದ ವಿರುದ್ಧ ಹೋಗಲು ಆಗದೆ ಇತ್ತ ಪ್ರೀತಿಸಿದ ಹುಡುಗನನ್ನು ಬಿಟ್ಟಿರಲಾರದೆ ಚಡಪಡಿಸುತ್ತಿರುವ ಹುಡುಗಿ ಒಂದೆಡೆ. ಇವರಿಬ್ಬರ ಪ್ರೀತಿ ಗೆಲ್ಲಬೇಕೆಂಬ. ಆಸೆ ಹೊತ್ತಿರುವ ನಾನೊಂದೆಡೆ…. ಮೂವರೂ ಸಹ ಮುಂದೇನಾಗುವುದೋ ಎಂಬ ಭಯದೊಂದಿಗೆ ನಮ್ಮ ಮೂವರ ಬದುಕು ಸಾಗಿದೆ…
ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವ ಜನಕ್ಕೆ ಇವರಿಬ್ಬರ ನಿಷ್ಕಲ್ಮಷ ಪ್ರೀತಿ ನಿಜಕ್ಕೂ ಒಂದು ಉದಾಹರಣೆ. ಇಬ್ಬರೂ ಒಂದಾಗಲಿ ಎನ್ನುವ ಮಹದಾಸೆ ನನ್ನದು. ಓದುಗರಾದ ನಿಮ್ಮ ಅನಿಸಿಕೆಯೇನು? ತಿಳಿಸಿ.
ನಮಸ್ಕಾರ….
ಬರೆಹ: ರೋಹನ್ ಪಿಂಟೋ ಗೇರುಸೊಪ್ಪ
Discussion about this post