ಕೊಪ್ಪಳ: ಜಿಲ್ಲೆಯ ಹೆಸರಾಂತ ಕಾರ್ಖಾನೆಗಳಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್’ನಲ್ಲಿ 48ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಾರಂಭದಿಂದಲೂ ಕಾರ್ಖಾನೆಯ ಅಭಿವೃದ್ಧಿಯ ಜೊತೆ ಜೂತೆಗೆ ಉದ್ಯೋಗಿಗಳಿಗೆ ಮತ್ತು ಎಲ್ಲಾ ಕಾರ್ಮಿಕರ ಸುರಕ್ಷತೆ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಕೆಲಸಮಾಡುತ್ತಿರುವ ಕಾರ್ಖಾನೆಯಾಗಿದೆ.
ಪ್ರಾರಂಭದಿಂದಲೂ ಅಂದರೆ 1993 ರಿಂದಲೂ ಪ್ರತಿವರ್ಷವೂ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕಳೆದ 12 ವರ್ಷದಲ್ಲಿ ಗುಲ್ಬರ್ಗ ವಲಯ ಮತ್ತು ಬಳ್ಳಾರಿ ಕೊಪ್ಪಳ ವಲಯ ಸುರಕ್ಷತಾ ಸಮಿತಿಯ ಸಹಯೋಗದಿಂದ ವಲಯ ಮಟ್ಟದಲ್ಲಿ ಸುರಕ್ಷತಾ ದಿನಾಚರಣೆಯನ್ನು 4 ಬಾರಿ ಆಚರಿಸಲಾಗಿದೆ.
2006-07 ನೆಯ ಸಾಲಿನಲ್ಲಿ ಜಿಂದಾಲ್ ಕಾರ್ಖಾನೆಯ ಸಹಾಯದಿಂದ ಒಂದು ಬಾರಿ ರಾಜ್ಯ ಮಟ್ಟದ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗಿದೆ. ಇದರ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವುದರ ಮೂಲಕ ಜಾಗೃತಿ ಮೂಡಿಸುವ ಒಂದು ಪ್ರಯತ್ನ ಮತ್ತು ಕಾರ್ಖಾನೆಗಳಲ್ಲಿ ಅಪಘಾತವನ್ನು ತಗ್ಗಿಸಿ, ಶೂನ್ಯ ಅಪಘಾತಕ್ಕೆ ತರುವುದು ಮುಖ್ಯ ಉದ್ದೇಶ ಹೊಂದಿದೆ. ಅದರಂತೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯಲ್ಲಿ ವಿವಿಧ ಹಂತಗಳಲ್ಲಿ ವಿಭಿನ್ನ ರೀತಿಯಲ್ಲಿ 48 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಯನ್ನು ಆಚರಿಸಲಾಯಿತು.
ಪ್ರತಿದಿನ ಸುರಕ್ಷತಾ ಪ್ರತಿಜ್ಞೆ, ಸುರಕ್ಷತಾ ಕಾರ್ಯಸ್ಥಾನ ದ ಬಗ್ಗೆ ಒಟ್ಟಾಗಿ ಸೇರಿ ಮಾತನಾಡುವುದು, ವಿಭಾಗಗಳಲ್ಲಿ ಅಸುರಕ್ಷಿತ ಕಾರ್ಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವುದು. ಹಿರಿಯ ಆಡಳಿತ ಅಧಿಕಾರಿಗಳ ಸಮೇತ ವಿಭಾಗಳ ವೀಕ್ಷಣೆ ಮಾಡಿ ಸುರಕ್ಷತೆ ಬಗ್ಗೆ ಸಲಹೆ ಪಡೆಯುವುದರ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಯಿತು.
ಸುರಕ್ಷತಾ ಪ್ರೋತ್ಸಾಹಕ್ಕಾಗಿ ವಿವಿಧ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳಿಗೆ ಮತ್ತು ಕೆಲಸಗಾರರಿಗೆ ಬಹುಮಾನಗಳನ್ನು ನೀಡಿ ಸಿಹಿ ಹಂಚಲಾಯಿತು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ, ಕಾರ್ಖಾನೆಯ ಪ್ರೆಸಿಡೆಂಟ್ ಎನ್.ಬಿ. ಏಕತಾರೆ ಮತ್ತು ಕಾರ್ಮಿಕ ಮುಖಂಡರಾದ ಹನುಮಪ್ಪ ಕಲಮಂಗಿ ಇವರುಗಳನ್ನು ವಿಶೇಷವಾಗಿ ಆಹ್ವಾನಿಸಿ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಸಮಾರಂಭ ಕಾರ್ಯಕ್ರಮ ಆಚರಿಸಲಾಯಿತು.
ಸಭೆಯಲ್ಲಿ ಎಲ್ಲಾ ವಿಭಾಗದ ಹಿರಿಯ ಅಧಿಕಾರಿಗಳು, ಕಾರ್ಮಿಕ ವರ್ಗ, ಆಡಳಿತ ಮಂಡಳಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷ ರಾದ ಪಿ. ನಾರಾಯಣ, ಹಣಕಾಸು ವಿಭಾಗದ ಇ.ವಿ.ಪಿ ಆರ್.ಎಸ್. ಶ್ರೀವತ್ಸನ್ ಮತ್ತು ಬೀಡು ಕಬ್ಬಿಣ ವಿಭಾಗದ ಉಪಾಧ್ಯಕ್ಷ ಎಂ.ಜಿ.ನಾಗರಾಜ್ ಹಾಗೂ ಎರಕ ವಿಭಾಗದ ಹಿರಿಯ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.
ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ, ಸುರಕ್ಷತೆಯಲ್ಲಿ ಕೆಲಸ ನಿರ್ವಹಣೆ ಮಾಡಿದ ಬಹುಮುಖಿಗಳಿಗೆ ಅವಾರ್ಡ್ ಕೊಡಲಾಯಿತು. ಸುರಕ್ಷತಾ ವಿಭಾಗದ ಅಧಿಕಾರಿಗಳು ಒಂದುವರ್ಷದ ಸಾಧನೆಯನ್ನು ತಿಳಿಸಿಕೊಟ್ಟರು. ವೇದಿಕೆಯ ಮೇಲೆ ಇದ್ದ ಆಹ್ವಾನಿತರು ತಮ್ಮ ತಮ್ಮ ಭಾಷಣದಲ್ಲಿ ಸುರಕ್ಷತೆ, 5 ಎಸ್, ಉತ್ಪಾದನೆ, ಮತ್ತು ಪರಿಸರ, ಆರೋಗ್ಯದ ಬಗ್ಗೆ ಮಾಹಿತಿ ನೀಡಿ. ಕಾರ್ಖಾನೆಯ ಬೆಳವಣಿಗೆ ಸುರಕ್ಷತೆ ಒಹಳ ಮುಖ್ಯ ಎಂದು ತಿಳಿಸಿ ಶುಭಾಷಯ ತಿಳಿಸಿದರು.
ಅಚ್ಚುಕಟ್ಟಾದ ಸಭೆಯನ್ನು ಸುರಕ್ಷತಾ ವಿಭಾಗದ ಅಧಿಕಾರಿಗಳಾದ ರವಿಕುಮಾರ್ ಯಾದವ್ ಮತ್ತು ಮುರಳೀಧರ್ ನಾಡಿಗೇರ್ ರವರು ಮಾನವ ಸಂಪನ್ಮೂಲ ವಿಭಾಗ ಮತ್ತು ಇತರ ವಿಭಾಗದ ಸಹಾಯದಿಂದ ಆಯೋಜಿಸಿದ್ದರು.
ಮಾಹಿತಿ: ಮುರಳೀಧರ್ ನಾಡಿಗೇರ್
ಹಿರಿಯ ಸುರಕ್ಷತಾ ಅಧಿಕಾರಿ
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್
Discussion about this post