ಬೆಂಗಳೂರು: ಜೆಡಿಎಸ್ ನಾಯಕರ ನಿವಾಸದ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಇಲಾಖೆ ವಿರುದ್ಧ ಕೀಳುಮಟ್ಟದಲ್ಲಿ ಮಾತನಾಡಿರುವ ಜೆಡಿಎಸ್-ಕಾಂಗ್ರೆಸ್ ನಾಯಕರಿಗೆ ಆದಾಯ ತೆರಿಗೆ ಇಲಾಖೆ ತಿರುಗೇಟು ನೀಡಿದೆ.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಇಲಾಖೆ, ನಾವು ಯಾವುದೇ ಶಾಸಕ ಅಥವಾ ಸಂಸದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ, ಕಾನೂನು ಅಡಿಯಲ್ಲಿ ಮಾಡಿದ್ದೇವೆ. ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಹಿಂಸೆಗೆ ಪ್ರಚೋದಿಸುವಂತ ಹೇಳಿಕೆ ನೀಡಿರುವುದು ವಿಷಾದಕರ ಎಂದಿದೆ.
ವಿಶ್ವಾಸಾರ್ಹ ಮೂಲಗಳ ಆಧಾರದ ಮೇಲೆ ದಾಳಿ ನಡೆಸಿದ್ದು, ಕಾನೂನು ಚೌಕಟ್ಟಿನಲ್ಲಿಯೇ ನಮ್ಮ ಪ್ರಕ್ರಿಯೆ ನಡೆದಿದೆ. ಈ ಹಂತದಲ್ಲಿ ನಾವು ಭದ್ರತೆಗಾಗಿ ಹಾಗೂ ಗೌಪ್ಯತೆಗಾಗಿ ಸಿಆರ್’ಪಿಎಫ್ ಪಡೆಯನ್ನು ಕರೆಸಿಕೊಂಡಿದ್ದೇವೆ ಎಂದಿದೆ.

















