ಭದ್ರಾವತಿ: ವರ್ಷದಿಂದ ವರ್ಷಕ್ಕೆ ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಜನಸಾಮಾನ್ಯರು ಹಾಗೂ ಆಡಳಿತ ವ್ಯವಸ್ಥೆ ಪ್ರಾಕೃತಿಕ ಅಸಮತೋಲನಕ್ಕೆ ಮಹತ್ವ(!)ದ ಕೊಡುಗೆ ನೀಡುತ್ತಿದೆ.
ತಮ್ಮ ಸ್ವಾರ್ಥಕ್ಕಾಗಿ ಪ್ರಾಕೃತಿಕ ಸಂಪತ್ತನ್ನು ನಾಶ ಮಾಡುತ್ತಿರುವ ವರ್ಗ ಒಂದೆಡೆಯಾದರೆ, ಇದೇ ಸಂಪತ್ತನ್ನು ಉಳಿಸಿ, ಬೆಳೆಸುವ ಪ್ರಯತ್ನಗಳನ್ನು ಪರಿಸರ ಪ್ರೇಮಿಗಳ ಇನ್ನೊಂದು ವರ್ಗ ಪ್ರಯತ್ನ ಮಾಡುತ್ತಲೇ ಇದೆ. ಇಂತಹ ಪ್ರಯತ್ನವೊಂದನ್ನು ಭದ್ರಾವತಿಯ ತಂಡವೊಂದು ಮಾಡುತ್ತಿದೆ.
ಸಾಮಾನ್ಯವಾಗಿ ಎಪ್ರಿಲ್ ತಿಂಗಳನ್ನು April fool ಮಾಡುವ ಮೂಲಕ ಆಚರಿಸುವವರೇ ಹೆಚ್ಚು. ಆದರೆ, ಇಲ್ಲಿನ ಇರುವೆ ಟ್ರಸ್ಟಿನ ಸದಸ್ಯರು ಭದ್ರಾವತಿಯ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಜನಸಾಮಾನ್ಯರು, ಹಿರಿಯ ನಾಗರಿಕರು ಎಲ್ಲರನ್ನು ಸಂಪರ್ಕಿಸಿ April Cool ಎಂಬ ಒಂದು ಸಣ್ಣ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ.
ಇರುವೆ ಟ್ರಸ್ಟ್ ಅಧ್ಯಕ್ಷರು ಬಿ.ಎಂ. ಶಾಂತಕುಮಾರ್, ಉಪಾಧ್ಯಕ್ಷರು ಬಿ. ಕಿರಣ್ ಕುಮಾರ್, ಕಾರ್ಯದರ್ಶಿ ಮತ್ತು ಪರಿಸರವಾದಿ ಕಾರ್ತಿಕ್ ಜಿ. ಕೆದಿಲಾಯ, ಸದಸ್ಯರು ಮತ್ತು ಪರಿಸರ ಪ್ರೇಮಿಗಳಾದ ಬಿ.ಎಂ. ಧರ್ಮೇಂದ್ರ ತಂಬಿ, ವಸಂತ್ ಕುಮಾರ್ ರೆಡ್ಡಿ ಮತ್ತು ಸುಮಂತ್, ಭದ್ರಾವತಿಯ ಉಪವಲಯ ಅರಣ್ಯಾಧಿಕಾರಿ ದಿನೇಶ್ ಕುಮಾರ್ ಭಾಗವಹಿಸಿದ್ದರು.
ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಕೆ.ಎಸ್. ರಂಗಸ್ವಾಮಿ, ಜಿ. ಹಾಲಪ್ಪ, ತಮ್ಮಣ್ಣ ಎಸ್. ಜಂಬಗಿ ಮತ್ತು ರೇವಣ್ಣ ಸಿದ್ದಪ್ಪ ಗೌಡ, 29ನೆಯ ವಾರ್ಡಿನ ಮಾಜಿ ನಗರಸಭಾ ಸದಸ್ಯ ವೇಣುಗೋಪಾಲ್, ಮೆಸ್ಕಾಂ ಉದ್ಯೋಗಿ ಸ್ವಾಮಿ ಮತ್ತು ಜನಸಾಮಾನ್ಯರು ಉಪಸ್ಥಿತರಿದ್ದರು.







Discussion about this post