ಭದ್ರಾವತಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಟವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ ಇದಕ್ಕಾಗಿ ಎಲ್ಲ ಕಡೆಗಳಲ್ಲಿ ಚೆಕ್’ಪೋಸ್ಟ್’ಗಳನ್ನು ಸ್ಥಾಪಿಸಿ, ಹಲವು ದಿನಗಳೇ ಕಳೆದಿದೆ.
ಇಂತಹುದ್ದೊಂದು ಚೆಕ್’ಪೋಸ್ಟ್’ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾರು ತಡೆದು, ತಪಾಸಣೆ ನಡೆಸಿರುವ ಘಟನೆ ನಡೆದಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳಲು ಇಂದು ಕುಮಾರಸ್ವಾಮಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ತರೀಕೆರೆಯಿಂದ ಭದ್ರಾವತಿ ಬೈಪಾಸ್ ಮೂಲಕ ಆಗಮಿಸಿ ಭದ್ರಾವತಿಯ ಪಿಡಬ್ಲ್ಯೂಡಿ ಅತಿಥಿ ಗೃಹದಲ್ಲಿ ಕೊಂಚ ವೇಳೆ ತಂಗಿದ್ದರು.
ಇಲ್ಲಿಂದ ಹೊರಟ ಅವರ ಕಾರನ್ನು ಭದ್ರಾವತಿಯ ಕಾರೆಹಳ್ಳಿ ಚೆಕ್’ಪೋಸ್ಟ್ ’ನಲ್ಲಿ ಮುಖ್ಯಮಂತ್ರಿಯವರ ಕಾರನ್ನು ತಡೆದ ಚುನಾವಣಾ ಅಧಿಕಾರಿಗಳು ಸಂಪೂರ್ಣ ತಪಾಸಣೆ ನಡೆಸಿ, ಮುಂದಕ್ಕೆ ಕಳುಹಿಸಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

















