ಶಿವಮೊಗ್ಗ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕ್ಷೇತ್ರದಾದ್ಯಂತ ನಿರಂತರವಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದು, ಇದಕ್ಕೆ ಪಕ್ಷದ ಪ್ರಮುಖರು ಸಾಥ್ ನೀಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತ್ತೂರಿನಲ್ಲಿ ಪ್ರಚಾರ ಪ್ರವಾಸ ಮಾಡಿ ಮತ ಯಾಚನೆ ಮಾಡಿದರು.
ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಪ್ರಮುಖರಾದ ಎಸ್. ದತ್ತಾತ್ರಿ, ಎಸ್.ಎನ್. ಚೆನ್ನಬಸಪ್ಪ, ಸುಭಾಷ್, ಸುವರ್ಣ ಶಂಕರ್, ಶಿವನಂಜಪ್ಪ ಇದ್ದರು.
ಇಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಸೂಡಿ ಶಕ್ತಿ ಕೇಂದ್ರದ ಹಾರೋಬೆನವಳ್ಳಿಯಲ್ಲಿ ಸಭೆ ನಡೆಸಿ ಮತ ಯಾಚನೆ ಮಾಡಿದರು.
ಶಾಸಕ ಕೆ.ಬಿ. ಅಶೋಕ್ ನಾಯ್ಕ, ಪ್ರಮುಖರಾದ ಎಸ್. ದತ್ತಾತ್ರಿ, ಮಂಡಲದ ಅಧ್ಯಕ್ಷ ಜಿ.ಈ. ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ವೀರಭದ್ರಪ್ಪ ಪೂಜಾರ್, ಮಹಾನಗರ ಪಾಲಿಕೆಯ ಸದಸ್ಯ ಧೀರಾಜ್ ಹೊನ್ನವಿಲೆ, ತಾಲೂಕು ಪಂಚಾಯಿತಿ ಸದಸ್ಯ ಕೆ.ಜಿ. ಶ್ರೀಧರ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷೆ ಪವಿತ್ರ ರಾಮಯ್ಯ ಇದ್ದರು.
ಇನ್ನು ಅನವಟ್ಟಿಯ ಕೋಟಿಪುರದಲ್ಲಿ ಬಿ.ವೈ. ರಾಘವೇಂದ್ರ ಪ್ರಚಾರ ನಡೆಸಿದ್ದು, ಶಾಸಕ ಕುಮಾರ್ ಬಂಗಾರಪ್ಪ, ಪದ್ಮನಾಭ್ ಭಟ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ಉಪಸ್ಥಿತರಿದ್ದರು.

















