ಶಿವಮೊಗ್ಗ: ಈವರೆಗೂ ಪ್ರತ್ಯೇಕ ಹೆಸರಿನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಕಾವೇರಿ ಗ್ರಾಮೀಣ ಬ್ಯಾಂಕ್ ವಿಲೀನಗೊಂಡು ಇಂದಿನಿಂದ ನೂತನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೆಸರಿನೊಂದಿಗೆ ಆರಂಭಗೊಂಡಿದೆ.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಕಾವೇರಿ ಗ್ರಾಮೀಣ ಬ್ಯಾಂಕ್ ವಿಲೀನಗೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೆಸರಿನೊಂದಿಗೆ ಪ್ರಾರಂಭವಾಗಿದೆ.
ರಾಜ್ಯದಲ್ಲಿ ಒಟ್ಟು 1164 ಶಾಖೆಯನ್ನು ಹೊಂದಲಿರುವ ಕರ್ನಾಟಕ ಗ್ರಾಮಿಣ ಬ್ಯಾಂಕ್ ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ 43 ಶಾಖೆಗಳನ್ನು ಹೊಂದಿದೆ.
21 ಎಟಿಎಂಗಳನ್ನು ಹೊಂದಿದ್ದು ಅವುಗಳಲ್ಲಿ ಶೇ. 80ರಷ್ಟು ಎಟಿಎಂಗಳು ಗ್ರಾಮಾಂತರ ಪ್ರದೇಶಗಳಲ್ಲಿ ಇವೆ ಮತ್ತು ಅವುಗಳು ಎಲ್ಲಾ ದಿನಗಳಲ್ಲಿ ಕಾರ್ಯಾಚರಿಸುತ್ತಿವೆ ಎನ್ನುವುದು ಹೆಮ್ಮೆಯ ವಿಚಾರ.
ಮಲೆನಾಡಿನ ಕುಗ್ರಾಮಗಳಲ್ಲಿ ಜನಸಾಮಾನ್ಯರು ವಿದ್ಯುಶ್ಚಕ್ತಿ ಮತ್ತು ದೂರ ಸಂಪರ್ಕ ವ್ಯವಸ್ಥೆಯಿಂದ ವಂಚಿತರಾಗಿರುವುದು ಸರ್ವೇ ಸಾಮಾನ್ಯ ಅಂತಹ ಹಳ್ಳಿಗಳಲ್ಲಿ ಗ್ರಾಮೀಣ ಬ್ಯಾಂಕ್ ಶಾಖೆಗಳನ್ನು ಹೊಂದಿದ್ದು ಇಂದು ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದೆ.
ವಿಲೀನದ ನಂತರ ಬ್ಯಾಂಕು 1164 ಶಾಖೆಗಳನ್ನು ಹೊಂದಿದೆ. ಪ್ರವರ್ತಕ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿಯೇ ಉಳಿಯಲಿದೆ.
ರಾಜ್ಯದ 21 ಜಿಲ್ಲೆಯಲ್ಲಿ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ವಿದ್ಯುನ್ಮಾನ ಮತ್ತು ಇಂಟರ್ನೆಟ್ ವ್ಯವಸ್ಥೆ ಬಂದ ಮೇಲೆ ಗ್ರಾಮೀಣ ಬ್ಯಾಂಕ್ ವ್ಯವಹಾರ ಪದ್ಧತಿಯೆ ಬದಲಾಗಿದೆ. ಈ ನೂತನ ವ್ಯವಸ್ಥೆಯಿಂದ ಕ್ಷಣಮಾತ್ರದಲ್ಲಿ ದಿನದ 24 ಗಂಟೆಯೂ ಬ್ಯಾಂಕಿಂಗ್ ವ್ಯವಹಾರ ಮನೆಯಲ್ಲೇ ಕುಳಿತು ಮಾಡಬಹುದಾಗಿದೆ.
ಆಧುನಿಕ ಯುಗದಲ್ಲಿ ವಿದ್ಯುನ್ಮಾನ ತಂತ್ರಜ್ಞಾನ ಅಳವಡಿಸಿಕೊಂಡು ಈ ಕೆಳಗಿನ ಸೇವೆ ಒದಗಿಸುತ್ತಿದೆ. ಬ್ಯಾಂಕ್ ಮಿತ್ರರಿಂದ ಆಧಾರ್ ನಂಬರ್’ಗಳಿಗೆ ಪಾವತಿ ಸೌಲಭ್ಯ ದಿನದ 24 ಗಂಟೆಯೂ ಲಭ್ಯ. ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯಿಂದ ತುರ್ತು ಹಣದ ವರ್ಗಾವಣೆ ದಿನದ 24 ಗಂಟೆಯೂ ಲಭ್ಯವಿದ್ದು, ಗ್ರಾಮೀಣಾಭಿವೃದ್ಧಿಯಲ್ಲಿ ಮತ್ತು ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲು ಗ್ರಾಮೀಣ ಬ್ಯಾಂಕ್’ನೊಂದಿಗೆ ವ್ಯವಹರಿಸಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್’ನ ಮುರಳೀಧರ್ ತಿಳಿಸಿದ್ದಾರೆ.
















