ಬೆಂಗಳೂರು: ರಾಜ್ಯ ರಾಜಧಾನಿಯ ಪ್ರಖ್ಯಾತ ಪ್ರಣವ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್ ವಸಂತ ಕುಕಿಲು 2019 ವಾರ್ಷಿಕೋತ್ಸವ ಎಪ್ರಿಲ್ 7ರಂದು ನಡೆಯಲಿದೆ.
ತ್ಯಾಗರಾಜ ನಗರ 3ನೆಯ ಬ್ಲಾಕ್’ನಲ್ಲಿರುವ ಶ್ರೀಪಾದ ಶ್ರೀವಲ್ಲಭ ಭವನದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ಕಲಾಕ್ಷಿತಿ ಕಲಾ ಸಂಸ್ಥೆಯ ನಿರ್ದೇಶಕರಾದ ನಾಟ್ಯಾಚಾರ್ಯ ಡಾ. ಎಂ.ಆರ್. ಕೃಷ್ಣಮೂರ್ತಿ ಅವರಿಗೆ ಪ್ರಣವಶ್ರೀ ಗೌರವ ಪ್ರದಾನ ಮತ್ತು ಗುರುವಂದನೆಯನ್ನು ಹಮ್ಮಿಕೊಂಡಿದೆ.
ಮುಖ್ಯ ಅತಿಥಿಗಳಾಗಿ ಆಕಾಶವಾಣಿ ಕಾರ್ಯಕ್ರಮಗಳ ಸಹ ನಿರ್ದೇಶಕರಾದ ಎನ್. ರಘು ಮತ್ತು ವಿಶೇಷ ಆಹ್ವಾನಿತರಾಗಿ ಸಂಗೀತ ಸಂಯೋಜಕ ನಿಖಿಲ್ ಕುಮಾರ್, ನಟ ಅಮಿತ್‌ರಾವ್, ರೇಡಿಯೋ ಜಾಕಿ ರಜಸ್ ಭಾಗವಹಿಸುವ ಸಮಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಚಕ್ರ ವಿಶೇಷ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಶಾಲೆಯ ನಿರ್ದೇಶಕಿ ಭಾರ್ಗವಿ ಸುರೇಶ್ ತಿಳಿಸಿರುತ್ತಾರೆ.
ಮಾಹಿತಿಗೆ 9740241620 ಗೆ ಸಂಪರ್ಕಿಸಬಹುದು.

















