ಕುಪ್ವಾರಾ: ಕಣಿವೆ ರಾಜ್ಯದ ಕುಪ್ವರಾ ಜಿಲ್ಲೆಯಲ್ಲಿ ಭಾರತೀಯ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ ಸಂಭವಿಸಿದ್ದು, ಇಬ್ಬರು ಯೋಧರಿಗೆ ತೀವ್ರತರವಾಗಿ ಗಾಯಗಳಾಗಿವೆ.
15 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್’ನಲ್ಲಿ ಸಂಭವಿಸಿದ್ದು, ಸ್ಫೋಟಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ.
ಮೂಲಗಳ ಪ್ರಕಾರ, ಕುಪ್ವಾರಾ ಜಿಲ್ಲೆಯ ಹೊಂಡ್ವಾರಾ ಪ್ರದೇಶದಲ್ಲಿ ಲಕ್ಮೊಪೋರಾ ರಾಜ್ವರ್’ನಲ್ಲಿರುವ 15 ರಾಷ್ಟ್ರೀಯ ರೈಫಲ್ಸ್ ಶಿಬಿರಗಳಲ್ಲಿ ಈ ನಿಗೂಢ ಸ್ಫೋಟ ಸಂಭವಿಸಿದೆ. ಈ ಸ್ಫೋಟವು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಹೇಳಲಾಗಿದೆ.
ಸ್ಫೋಟದ ಹಿನ್ನೆಲೆಯಲ್ಲಿ ಇಡಿಯ ಪ್ರದೇಶದಲ್ಲಿ ಸೇನೆಯನ್ನು ಹೈ ಅಲರ್ಟ್ ಸ್ಥಿತಿಯಲ್ಲಿರಿಸಲಾಗಿದೆ.

















