ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ.
ವಿವಿಧ ಬಡಾವಣೆ, ಗ್ರಾಮಗಳಿಗೆ ಭೇಟಿ ನೀಡಿ, ವಿವಿಧ ವರ್ಗದ ಮತದಾರರ ಅಭಿಪ್ರಾಯಗಳನ್ನು ನಾವು ಸಂಗ್ರಹಿಸಿದ್ದೇವೆ. ಅಲ್ಲದೇ ಅಭ್ಯರ್ಥಿಗಳ ಕುರಿತಾಗಿ ತಮ್ಮ ಅಭಿಪ್ರಾಯವನ್ನೂ ಸಹ ಹಲವರು ವ್ಯಕ್ತಪಡಿಸಿದ್ದಾರೆ.
ಈ ಸಮೀಕ್ಷೆಗೂ ಯಾವುದೇ ರಾಜಕೀಯ ಪಕ್ಷಗಳಿಗೂ ಸಂಬಂಧವಿರುವುದಿಲ್ಲ ಹಾಗೂ ಯಾವ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ಇದು ಮತದಾರನ ಮನದಾಳದ ಅಭಿಪ್ರಾಯ ಸಂಗ್ರಹವಷ್ಟೇ ಆಗಿದ್ದು, ನಮ್ಮ ಡಿಜಿಟಲ್ ಮೀಡಿಯಾದ ಪ್ರಾಮಾಣಿಕ ಪ್ರಯತ್ನವಾಗಿದೆ. ಈ ಅನಿಸಿಕೆಗಳನ್ನು ನಿಯಮಿತವಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ಪ್ರಕಟಿಸಲಾಗುತ್ತದೆ. ಇಲ್ಲಿ ಕೆಲವು ಅನಿಸಿಕೆಗಳನ್ನು ಪ್ರಕಟಿಸಿ, ಕೊನೆಯಲ್ಲಿ ಒಟ್ಟಾರೆ ಸಮೀಕ್ಷೆಯ ಕುರಿತಾಗಿ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇವೆ.
ಸಾಗರ ಭಾಗದ ಉಳ್ಳೂರು, ಹೆಗ್ಗೋಡು, ಗೆಣಸಿನಕುಣಿ ಆವಿನಹಳ್ಳಿ, ಅತ್ತಿಸರಗಳಲ್ಲಿ ಮತದಾರರ ಒಲವು-ನಿಲುವು ಹೀಗಿದೆ:
ಉಳ್ಳೂರು ಗ್ರಾಮ ಪಂಚಾಯತ್ ಸುಮಾರು ನಾಕುಸಾವಿರ ಮತಗಳುಳ್ಳ ಪ್ರದೇಶ. ಹಿಂದೆ ಬೇಳೂರು ಗೋಪಾಲಕೃಷ್ಣ ಅವರ ಶಾಸಕತ್ವ ಅವಧಿಯಲ್ಲಿ ಉಳ್ಳೂರು ಕೆರೆಗೆ 12 ರೂ. ಮಂಜೂರಾಗಿತ್ತು. ಆದರೆ 2 ಲಕ್ಷ ರೂ.ನಷ್ಟು ಸಹ ಕೆಲಸ ಆಗಿರಲಿಲ್ಲ. ಕಾಗೋಡು ಅವರ ಅವಧಿಯಲ್ಲಿ ಕೆರೆಯ ಕಲಸ ಶುರುವಾಗಲೇ ಇಲ್ಲ.ಆದರೆ ಅವರು ಕೂಲಿ ಕಾರ್ಮಿಕರ ಬಗ್ಗೆ ಮನೆ, ಶೆಡ್ಡುಗಳ ನಿರ್ಮಾಣ ಮಾಡಿ ಸ್ಪಂದಿಸಿದ್ದರು. ವೈಯಕ್ತಿಕ ಕಾರಣಗಳಿಂದ ಸೋತರು.
““““““““““““`
ಆವಿನಹಳ್ಳಿ ಗ್ರಾಮ ಪಂಚಾಯತ್’ನಲ್ಲಿ ಸುಮಾರು ಏಳುಸಾವಿರ ಮತದಾರರಿದ್ದಾರೆ. ನಮ್ಮ ಆತ್ಮದಲ್ಲಿ ಹೇಳತ್ತೆ ಯಡ್ಯೂರಪ್ಪನ ಮಗ ರಾಘವೇಂದ್ರ ಬರ್ಬೇಕು. ನೋಡ್ರೀ ನೀವು ಏನೇ ಹೇಳ್ರೀ ಜಾತೀನೇ ನಡೆಯೋದು. ಇಲ್ಲಿ ಬಿಜೆಪಿಗೇ ಲಿಂಗಾಯತರ ಮತ. ಅಲ್ಲದೇ ಮೋದಿ ಹವಾ ಇದೆ.
““““““““““““`
ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್’ಗೆ ಸಮ ಸಮ ಇದೆ.
-ಪುಟ್ಟ ಅಂಗಡಿ ನಡೆಸುವ ಮಹಿಳೆ,
ಗೆಣಸಿನಕುಣಿ
““““““““““““`
ನಮ್ಮೂರಿಗೆ ಇವತ್ತಿಗೂ ಸರಿಯಾದ ರಸ್ತೆ ಇಲ್ಲ. ಜನರಿಗೆಲ್ಲ ತೊಂದರೆಯಾಗಿದೆ. ಶಾಸಕರು ಬಗೆಹರಿಸುತ್ತಾರೆಂಬ ಭರವಸೆಯಿದೆ. ಆದರೂ ಮೋದಿ ಹವಾ ಇದೆ. ಬಿಜೆಪಿಗೆ ನಮ್ಮ ಒಲವು.
““““““““““““`
ಮೋದೀನೇ ಸರ್ ನಮ್ಮ ದೇಶಾನ ಸರಿಯಾಗಿ ನಡೆಸೋರು. ರಕ್ಷಣೆ ಮಾಡೋವ್ರು. ಅವರಿಗೇ ನಮ್ಮ ಮತ(ಹರ್ಷಚಿತ್ತರಾಗಿ)
““““““““““““`
ಹಾಲಿ ಸಂಸದರ ಜನಸಂಪರ್ಕ ಕಡಿಮೆ. ಅವರು ಸರಿಯಾಗಿ ಜನರಿಗೆ ರೀಚ್ ಆಗಿಲ್ಲ. ಕೇವಲ ರೈಲು ತಂದ್ರು, ಸೇತುವೆ ಕೆಲಸ ..ಅಂತಾನೇ ಗುರುತು ಮಾಡಿ ಹೇಳೋಹಂಗಿಲ್ಲ. ಏನೋ ಒಂದು ಬಾರಿ ಸಂಸದನ ಅವಧಿಯಲ್ಲಿದ್ದೆ. ಮತ್ತೆ ಚುನಾಯಿತನಾಗಿದ್ದೆ ಅನ್ನೋ ಓವರ್ ಕಾನ್ಫಿಡೆನ್ಸ್ ಅಷ್ಟೆ. ಆದರೆ ಈ ನಮ್ಮ ಯುವ ಜನ ಇದ್ದಾರಲ್ಲ ಅವಕ್ಕೆ ಯಾವ ಜಾತಿ ಇಲ್ಲ. ಅವರಿಗೆ ಮೋದೀನೇ ಬೇಕು. ಹಾಗಾಗಿ ಬಿಜೆಪಿಗೆ ಇಲ್ಲಿ ಭರವಸೆಯಿದೆ. ಇಲ್ಲಿ ಜನ ದೇಶ, ಮೋದಿ ಅವರತ್ತ ನೋಡ್ತಾರೆ.
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಈಗ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಗ್ರಾಮ ಪಂಚಾಯತ್’ನಲ್ಲಿನ ಮತದಾರನ ಒಲವೇ ಬೇರೆಯದಾಗಿದೆ. ಮೈತ್ರಿ ಪಕ್ಷದ ಅಭ್ಯರ್ಥಿಯ ಜಾತಿಯವರೇ ಸಾಗರದ ಶಾಸಕರಾಗಿದ್ದಾರೆ. ಆದರೆ ಹಾಲಪ್ಪನವರು ಶ್ರಮ ಹಾಕಿದರೆ ಇಡೀ ಪಂಚಾಯತ್ ಪೂರ್ಣಮತಗಳನ್ನು ಬಿಜೆಪಿ ಕೊಳ್ಳೆ ಹೊಡೆಯಲು ಸಾಧ್ಯವಿದೆ. ಈಡಿಗರೇ ಅಧಿಕವಿದ್ದರೂ ವಿನ್ನಿಂಗ್ ವೋಟ್ಸ್ ಇರುವುದು ಲಿಂಗಾಯತ ಮತ್ತು ಬ್ರಾಹ್ಮಣರ ಮತಗಳಲ್ಲಿ. ಹೀಗಾಗಿ ಬಿಜೆಪಿ ಈ ಎರಡೂ ಪಂಗಡಗಳ ಒಲವು ಪಡೆದಿದೆ. ಜೊತೆಗೆ ಮೋದಿಯನ್ನು ಮೆಚ್ಚುವ ಯುವ ಜನರಿದ್ದಾರೆ. ಅವರೆಲ್ಲರ ಮತ ಪೂರ್ಣ ಬಿಜೆಪಿಗೆ.
ಹಾಲಿ ಸಂಸದ ಬಿವೈಆರ್ ಅವರು ತುಮರಿ ಸೇತುವೆ ಕಾಮಗಾರಿಯನ್ನು ಸಚಿವ ಗಡ್ಕರಿಯವರ ಕೈಯಲ್ಲಿ ಉದ್ಘಾಟನೆ ಮಾಡಿದ್ದು ಇನ್ನೂ ಹಸಿರಾಗಿದೆ. ಮತ್ತೂ ಒಂದು ಪ್ಲಸ್ ಪಾಯಿಂಟ್ ಅಂದರೆ ಹಾಲಿ ಶಾಸಕರು ಮತ್ತು ಸಂಸದರು ಜನಕ್ಕೆ ಸುಲಭ ಸಿಗುತ್ತಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಒಟ್ಟಾರೆಯಾಗಿ ನೋಡುವುದಾರೆ, ಈ ಭಾಗದಲ್ಲಿ ಮಿಶ್ರ ಅಭಿಪ್ರಾಯವಿದ್ದು, ಜನಮತ ತೆರೆದು ಪುಸ್ತಕದಂತಿದೆ ಎಂದಷ್ಟೇ ನಾವು ಹೇಳಬಹುದು.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Discussion about this post