ಬೆಳಗಾವಿ: ವಿಶ್ವದಾದ್ಯಂತ ವೈರಲ್ ಆಗಿರುವ ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರ ತಯಾರಿಸಿದರೆ ಅದರಲ್ಲಿ ನಟಿಸಲು ನಾನು ಸಿದ್ದ ಎಂಬ ಮಾತನ್ನು ನಟಿ ತಾರಾ ಹೇಳಿದ್ದಾರೆ.
ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್’ನಲ್ಲಿ ಸಿನಿಮಾ ಮಾಡಲು ಹಲವರು ಪ್ಲಾನ್ ಮಾಡಿದ್ದು, ಅಲ್ಲದೆ ಚಿತ್ರದ ಶೀರ್ಷಿಕೆಗಾಗಿ 7 ರಿಂದ 8 ಮಂದಿ ಟೈಟಲ್ ಕೊಡುವಂತೆ ಫಿಲಂ ಚೇಂಬರ್ ಗೆ ಮನವಿ ಮಾಡಿದ್ದಾರೆ. ಆದರೆ ಇದೆಲ್ಲಾ ರಾಜಕೀಯಕ್ಕೆ ಸಂಬಂಧಿಸುವುದರಿಂದ ವಾಣಿಜ್ಯ ಮಂಡಳಿ ಯಾರಿಗೂ ಟೈಟಲ್ ನೀಡಲು ನಿರಾಕಿಸಿದೆ.
ಈ ಕುರಿತಂತೆ ಮಾತನಾಡಿರುವ ನಟಿ ತಾರಾ, ಚಿತ್ರದಲ್ಲಿ ಪಾತ್ರ ಚೆನ್ನಾಗಿದ್ದರೆ ಕಥೆ ಇಷ್ಟವಾದರೇ ಖಂಡಿತವಾಗಿಯೂ ನಾನು ಅಭಿನಯಿಸುತ್ತೇನೆ. ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವ್ಯ ಸಿಕ್ಕರೆ ಚಿತ್ರದಲ್ಲಿ ನಟಿಸುತ್ತೇನೆ ಎಂದಿದ್ದಾರೆ.
Discussion about this post