No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Friday, May 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಬೈಂದೂರಿನ ಕಡಲತೀರದ ಮಂದಿ ಯಾರಿಗೆ ಒಲಿಯಲಿದ್ದಾರೆ ಗೊತ್ತಾ?

ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಲ್ಪ ನ್ಯೂಸ್ ವಿನೂತನ ಪ್ರಯತ್ನ : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ವಾಸ್ತವ ಸಮೀಕ್ಷಾ ವರದಿ-8

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 18, 2019
in Special Articles
0
ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಬೈಂದೂರಿನ ಕಡಲತೀರದ ಮಂದಿ ಯಾರಿಗೆ ಒಲಿಯಲಿದ್ದಾರೆ ಗೊತ್ತಾ?
Share on FacebookShare on TwitterShare on WhatsApp

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.

ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಲವು-ನಿಲುವು ಹೀಗಿದೆ:

ಮಲೆನಾಡಾದ ಶಿವಮೊಗ್ಗ ಲೋಕಸಭಾ ಕ್ರೇತ್ರಕ್ಕೆ ಸೇರ್ಪಡೆಗೊಂಡ(ದಕ್ಷಿಣ ಕನ್ನಡ …ಈಗ ಉಡುಪಿ ಜಿಲ್ಲೆಯ) ಕರಾವಳಿಯ ಭಾಗ.

ಬೂತ್ ಗಳ ಸಂಖ್ಯೆ (2019 ರಲ್ಲಿ) ಒಟ್ಟು 246

ಒಟ್ಟು ಮತದಾರರು: 2,26,587

ಮಹಿಳೆಯರು: 1,16,349

ಪುರುಷರು: 1,10,237

ಮೈತ್ರಿ ಪಕ್ಷ ಮತ್ತು ಬಿಜೆಪಿಗೆ ಸಮಸಮ ಕಾದಾಟ. ಎಂತ ಆಗ್ತದೋ ನೋಡಬೇಕು, ಹೇಳೋದು ಕಷ್ಟ.
-ಬಾಲಕೃಷ್ಣ, ಕ್ಯಾಂಟೀನ್ ಮಾಲಿಕ, ಕೊಲ್ಲೂರು

ಈಗ ಮೋದಿ ಅಲೆ ಜೋರಾಗಿದೆ. ಶೇ, 75 ಯುವಜನ ಮೋದೀಜಿಯವರ ಕೈ ಬಲಪಡಿಸುವ ದೃಷ್ಟಿಯಿಂದ  ಬಿಜೆಪಿಗೇ ಮತ ನೀಡುತ್ತಾರೆ. ಮೈತ್ರಿ ಪಕ್ಷದ ಅಭ್ಯರ್ಥಿ ಇಲ್ಲಿ ಸಂಪರ್ಕದಲ್ಲೇ ಇಲ್ಲ. ಹೀಗಾಗಿ ಜೆಡಿಎಸ್’ಗೆ ಸಾಂಪ್ರದಾಯಿಕ ಕಾಂಗ್ರೆಸ್ ಮತಗಳು ಬೀಳುವುದು ಅನುಮಾನ. ಅವರೂ ಕೂಡ ಬಿಜೆಪಿಗೇ ಮತ ನೀಡುತ್ತಾರೆ.

-ರಾಮಚಂದ್ರ ಕಾರಂತ್, ಮೆಡಿಕಲ್ ಸ್ಟೋರ್ ಮಾಲಿಕ, ಬೈಂದೂರು

ಇನ್ನು… ಯಡ್ಯೂರಪ್ಪ ಅವರ ಜನಪ್ರಿಯತೆ ಸೇರಿ ಇಲ್ಲಿ ಬಿಜೆಪಿಗೆ ಲೀಡ್ ಕೊಡಲು ವಿಪುಲ ಅವಕಾಶವಿದೆ. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಇದೆ. ಶಿರೂರು ಫಾಲ್ಸ್’ನಿಂದ ಸಂಪರ್ಕ ಪಡೆದು ಯೋಜನೆ ತರಲು ಸಾಧ್ಯವಿದೆ. ಇಲ್ಲಿ ಜೆಡಿಎಸ್ ಆಕ್ಟಿವ್ ಇಲ್ಲ. ಕರಾವಳಿ ಜನತೆಗೆ ಅವರು ಸ್ಪಂದಿಸುವುದಿಲ್ಲ.

-ಚಂದ್ರಶೇಖರ್, ಪುಟ್ಟ ಅಂಗಡಿ ಮಾಲಿಕ, ಬೈಂದೂರು

ಇಲ್ಲಿ ಮೋದಿ ಅಲೆಯಿದೆ. ಬಿಜೆಪಿಗೇ ಬಹಳ ಮತಗಳು.

-ಸುಧೀರ್, ಮೊಬೈಲ್ ಅಂಗಡಿ ಮಾಲಿಕರು

ಬಿಜೆಪಿಗೆ ಇಲ್ಲಿ ಬಹಳ ಮಂದಿ ಇಷ್ಟಪಡುತ್ತಾರೆ. ಹೀಗಾಗಿ ಬಿವೈಆರ್ ಗೆಲ್ಲುತ್ತಾರೆ.(ಅವರು ಅಳೆದೂ ಸುರಿದೂ ಕೊನೆಗೆ ಮಾತಾಡಿದರು)
-ದಿನೇಶ್, ಅಂಗಡಿ ಮಾಲಿಕರು, ವಂಡ್ಸೆ 

ಬಿಜೆಪಿಯ ಪ್ರಾಬಲ್ಯವನ್ನು ಒಪ್ಪಿಕೊಂಡು ಬಿಜೆಪಿಗೇ ಜನರ ಗಟ್ಟಿಯಾದ  ಒಲವಿದೆ.
-ಜನಾರ್ಧನ್, ಸಂಗಡ ಕುಂದಾಪುರ ಹೊಟೇಲ್ ಮಾಲಿಕ

ಇಲ್ಲಿ ಬಿಜೆಪಿಯದ್ದೇ ಹವಾ ಜಾಸ್ತಿ. ಮೋದಿ ಪಕ್ಷಕ್ಕೆ ನಮ್ಮಲ್ಲಿ ಗೆಲುವು ನಿಶ್ಚಿತ ಎಂದು ಇಲ್ಲಿ ಜನ ಮಾತನಾಡುತ್ತಾರೆ.

-ವೆಂಕಟರಮಣ ಗಾಣಿಗೇರ್ ಹಾಗೂ ಗೋಪಾಲ್, ಇಡೂರು ಕುಂಜಾಡಿ

ಮೋದಿ ಅಲೆಯ ಮುಂದೆ ಇಲ್ಲಿ ಏನೂ ನಡೆಯಲ್ಲ. ಇಲ್ಲಿ ಬಿಜೆಪಿ ಅಭ್ಯರ್ಥಿಗೇ ಲೀಡ್ ಸಿಗುತ್ತದೆ.

-ವಿಜಯ್ ಮತ್ತು ಶರಣ್, ಮಾರಣಗಟ್ಟೆಯ ಬ್ರಹ್ಮಲಿಂಗೇಶ್ವರ  ದೇವಾಲಯದ ವ್ಯಕ್ತಿಗಳು

ಇಲ್ಲಿ ಸಂಪೂರ್ಣ ಮೋದಿ ಅಲೆಯಿದೆ ಎಂದಷ್ಟೇ ಹೇಳುತ್ತೇನೆ.

-ಶಂಕರ ಶೆಟ್ಟಿ, ಇಡೂರು ಕುಂಜಾಡಿ

ಸರ್, ಯಾರು ಏನೇ ಹೇಳಲಿ ಇಲ್ಲಿ ಈಕ್ವಲ್ ಫೈಟ್ ಇದೆ. ಇಬ್ಬರೂ ಸಮ ಸಮ ಮತ ಪಡೆಯಬಹುದು.
-ಆನಂದ ಪೂಜಾರಿ, ಬೈಂದೂರು

ನಾನು ಜೆಡಿಎಸ್ ಬೆಂಬಲಿಸುತ್ತೇನೆ. ಆದರೆ ಅಲ್ಲಿ ಸದ್ಯ ಮೋದಿ ಅಲೆಯಿದೆ ಮಾರಾಯ್ರೆ ಏನು ಮಾಡೋದು? ನಾನು ಒಳ್ಳೇ ಕೆಲಸ ಮಾಡಬೇಕು ಅಂದ್ರೆ ಈ ಪಕ್ಷ  ರಾಜಕೀಯ ಅಡ್ಡ ಬರುತ್ತೆ.
-ಸರ್ವೋತ್ತಮ ಶೆಟ್ಟಿ, ವಕೀಲರು

ದೇಶದ ವಿಚಾರದಲ್ಲಿ ಬೇಡ. ನಮ್ಮಲ್ಲಂತೂ ಮೋದಿ ಅಲೆ ಇದೆ ಎನ್ನುವುದು ನಿಶ್ಚಿತ.
-ಗೋವರ್ಧನ್

ನಮ್ಮಲ್ಲೆಲ್ಲಾ ಬಿಜೆಪಿಯದ್ದೇ ಜೋರು ಸರ್. ಅಲ್ಲದೇ ಮೋದಿ ಅಲೆ ಬೇರೆ ಇದೆ.

-ಸಚಿನ್, ಹಾರ್ಡ್’ವೇರ್ ಶಾಪ್ ಮಾಲಿಕ, ಹಾಲ್ಕಲ್

ಒಂದೇಮಾತು ಇಲ್ಲಿ ಮೋದಿ ಅಲೆ ಇದೆ. ಜನ ಕೇಂದ್ರದಲ್ಲಿ ಮತ್ತೆ ಮೋದಿ, ಪ್ರಧಾನಿಯಾಗಲು ಬಯಸುತ್ತಾರೆ.

-ಚಂದ್ರಶೇಖರ್ ಶೆಟ್ಟಿ, ಹೊಟೇಲ್ ಮಾಲಿಕ, ಹಾಲ್ಕಲ್

ದೇಶದಲ್ಲೇ ಮೋದಿ ಹವಾ ಇದೆ ಸರ್. ಹಾಗೆಯೇ ಇಲ್ಲೂ ಮೋದಿ ಹವಾ ಇದೆ. ಅದೇ ಮುಖ್ಯವಾಗುತ್ತೆ ಈ ಬಾರಿಯ ಚುನಾವಣೇಲಿ.

-ವಿಶ್ವನಾಥ್ ಹಾಗೂ ಸ್ನೇಹಿತರು, ಕೊಲ್ಲೂರು

ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:

ಇಲ್ಲಿ ಶೇ.90 ಬಿಜೆಪಿ ಪರ ಮತ ಬೀಳುತ್ತವೆ. ಮೋದಿ ಅಲೆ ಮಜಬೂತಾಗಿದೆ. ಜೆಡಿಎಸ್’ಗೆ ಇಲ್ಲಿ ನೆಲೆಯೇ ಇಲ್ಲ. ಮೈತ್ರಿ ಪಕ್ಷ ಕಾಂಗ್ರೆಸ್ ಮತಗಳೇ ಇಲ್ಲಿ ಅದಕ್ಕೆ ಆಧಾರ. ರಾಜ್ಯದ ಬಗ್ಗೆ ಬೇರೆ ಆಲೋಚನೆ ಕೇಂದ್ರದ ಬಗ್ಗೆ ಬೇರೆ ಆಲೋಚನೆ. ಇಲ್ಲಿಯ ಮತದಾರರು ಬಹಳ ವಿವೇಚನಾಶೀಲರು ಎಂಬುದು ನಮ್ಮ ಸಮೀಕ್ಷೆಯಲ್ಲಿ ಕಂಡು ಬಂದ ಅಂಶ.

ಈಗ ಬೈಂದೂರಿಗೆ  500  ಕೋಟಿ ರೂ. ಯೋಜನೆ ಮಂಜೂರಾಗಿದೆ. ಅದನ್ನು ಬಂದರು ಅಭಿವೃದ್ಧಿಗೆ ಬಳಸಲಾಗುತ್ತದೆ. ನಂತರ ಗುಂಡೂರು ಕುಡಿಯುವ ಸರಬರಾಜು ಯೋಜನೆಗೆ 153 ಕೋಟಿ ರೂ. ಬಂದಿದೆ. 86 ಕೋಟಿ ರೂ. ವೆಚ್ಚದ ಡ್ಯಾಮ್ ಆಗಿದೆ.

ಇವೆಲ್ಲವೂ ಯಡ್ಯೂರಪ್ಪ ಮತ್ತು ರಾಘವೇಂದ್ರ ಅವರ ಸಂಸದ್ ಅವಧಿಯಲ್ಲಿ ಮಂಜೂರಾದ ಜನೋಪಯೋಗಿ ಯೋಜನೆಗಳಾಗಿವೆ ಎಂಬುದನ್ನು ಸ್ಥಳೀಯರು ಹಲವು ಮಂದಿಯ ಬಾಯಲ್ಲಿ ಬಂದ ವಿಚಾರಗಳು. ಈ ದೃಷ್ಟಿಯಿಂದ ಇಲ್ಲಿನ ಒಟ್ಟಾರೆ ಮತ ಚಲಾವಣೆ ಶೇ.80 ತಲುಪುವ ನಿರೀಕ್ಷೆಯಿದೆ.

ಅಷ್ಟೇ ಅಲ್ಲದೆ ಪ್ರಸ್ತುತ ಶಾಸಕರಾಗಿರುವ ಬಿಜೆಪಿ ಶ್ರೀ ಸುಕುಮಾರ ಶೆಟ್ಟಿ ಅವರ ಪ್ರಯತ್ನದಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ 30 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳು ನಿರ್ಮಾಣವಾಗಿವೆ. ಮರವಂತೆ ಬೀಚಿನಲ್ಲಿ ಕಡಲಕೊರೆತ ತಪ್ಪಿಸಲು 30 ಕೋಟಿ ರೂ. ಯೋಜನೆ ಹಾಗೂ ಸಣ್ಣ ನೀರಾವರಿಗೆ 30 ಕೋಟಿ ರೂ. ಮಂಜೂರಾಗಿದೆ.

ಶ್ರೀ ಸುಕುಮಾರ ಶೆಟ್ಟಿ

ಈ ಎಲ್ಲ ಅಂಶಗಳು ಮತದಾರರ ಗಮನದಲ್ಲಿವೆ ಎಂಬುದು ಸ್ಥಳೀಯರ ಮಾತಿನಿಂದಲೇ ತಿಳಿಯುತ್ತಿತ್ತು. ಇಂತಹ ಅಂಕಿಅಂಶಗಳನ್ನು ಜನರೇ ನೀಡುತ್ತಿದ್ದುದು ನಮ್ಮ ಸಮೀಕ್ಷೆಯಲ್ಲಿ ಕಂಡುಬಂದಿದ್ದು ಇದೇ ಮೊದಲು.

ಶಾಸಕರು 24ಸ7 ಕ್ಷೇತ್ರದ ಸೇವೆಗೆ ಸಿದ್ಧರಾಗಿರುವುದೂ ಒಂದು ಪ್ಲಸ್ ಪಾಯಿಂಟ್ ಆಗಿದೆ ಎಂಬುದು ಒಂದು ಸುತ್ತು ಸಾರ್ವಜನಿಕರೊಂದಿಗೆ ನಮ್ಮ ತಂಡ ನಡೆಸಿದ ಸಂವಾದದಲ್ಲಿ ದೃಢಪಟ್ಟಿದೆ.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ

ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Tags: BJPbyndoorcongressElection Survey in KannadaJDSKalpa News Digital MediaKannada NewsLok Sabha election 2019Malnad Newsಕಲ್ಪನ್ಯೂಸ್ ಲೋಕಾಯಾತ್ರೆಚುನಾವಣಾ ಸಮೀಕ್ಷಾಬೈಂದೂರು
Share196Tweet123Send
Previous Post

ಚಿತ್ರದುರ್ಗ ಲೋಕಸಭೆ ಚುನಾವಣೆ ಪ್ರಕ್ರಿಯೆ ಹೇಗಿದೆ ಗೊತ್ತಾ?

Next Post

ಯಡಿಯೂರಪ್ಪನವರಿಗೆ ಸಿಎಂ ಆಗಲು ಇರುವ ಆಸಕ್ತಿ, ರೈತರ ಬಗ್ಗೆ ಇಲ್ಲ: ಸಿಎಂ ಎಚ್’ಡಿಕೆ ಕಿಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಯಡಿಯೂರಪ್ಪನವರಿಗೆ ಸಿಎಂ ಆಗಲು ಇರುವ ಆಸಕ್ತಿ, ರೈತರ ಬಗ್ಗೆ ಇಲ್ಲ: ಸಿಎಂ ಎಚ್’ಡಿಕೆ ಕಿಡಿ

ಯಡಿಯೂರಪ್ಪನವರಿಗೆ ಸಿಎಂ ಆಗಲು ಇರುವ ಆಸಕ್ತಿ, ರೈತರ ಬಗ್ಗೆ ಇಲ್ಲ: ಸಿಎಂ ಎಚ್’ಡಿಕೆ ಕಿಡಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧ: ಸಂಸದ ರಾಘವೇಂದ್ರ

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧ: ಸಂಸದ ರಾಘವೇಂದ್ರ

May 8, 2026
ಕೋಣಂದೂರು ಲಿಂಗಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಕೋಣಂದೂರು ಲಿಂಗಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

May 8, 2026
ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯ: ಸಚಿವ ಮಧು ಬಂಗಾರಪ್ಪ

ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯ: ಸಚಿವ ಮಧು ಬಂಗಾರಪ್ಪ

May 8, 2026
SIR & ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಸತ್ಯ | ನಿಜಕ್ಕೂ ಐತಿಹಾಸಿಕ ತೀರ್ಪುಗೆ ಇವೇ ಕಾರಣ

SIR & ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಸತ್ಯ | ನಿಜಕ್ಕೂ ಐತಿಹಾಸಿಕ ತೀರ್ಪುಗೆ ಇವೇ ಕಾರಣ

May 8, 2026
ರಾಷ್ಟ್ರ ಮಟ್ಟದ ಜೆಇಇ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ಸಹನ್ ಕುಮಾರ್‌ಗೆ ರ್‍ಯಾಂಕ್

ರಾಷ್ಟ್ರ ಮಟ್ಟದ ಜೆಇಇ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ಸಹನ್ ಕುಮಾರ್‌ಗೆ ರ್‍ಯಾಂಕ್

May 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL