ಬೆಂಗಳೂರು: 2018-19ನೆಯ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ರಾಜ್ಯಕ್ಕೆ ಹಾಸನ ಮೊದಲ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.
ಎಸ್’ಎಸ್’ಎಲ್’ಸಿ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಫಲಿತಾಂಶ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹಾಗೂ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ, ಈ ಬಾರಿ ರಾಜ್ಯದಲ್ಲಿ ಶೇ.73.70ಯಷ್ಟು ಫಲಿತಾಂಶ ದಾಖಲಾಗಿದೆ ಎಂದರು.
2019ರಲ್ಲಿ ಶೇ 73.70 ಫಲಿತಾಂಶ ಬಂದಿದೆ. ಇನ್ನು ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಶೇ 79.59 ರಷ್ಟು ಬಾಲಕಿಯರು ಉತೀರ್ಣರಾಗಿದ್ದು, ಶೇ.68.46 ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ ಎಂದರು.
ಇದುವರೆಗೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದುಕೊಳ್ಳುತ್ತಿತ್ತು. ಈ ಬಾರಿ ಜಿಲ್ಲಾವಾರು ಫಲಿತಾಂಶದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನ, ರಾಮನಗರ ಎರಡನೇ ಸ್ಥಾನ, ಬೆಂಗಳೂರು ಗ್ರಾಮಾಂತರ ಮೂರನೆಯ ಸ್ಥಾನ ಮತ್ತು ಉತ್ತರ ಕನ್ನಡ ಜಿಲ್ಲೆ ನಾಲ್ಕನೇ, ಉಡುಪಿ ಜಿಲ್ಲೆ 5ನೆಯ ಸ್ಥಾನ ಪಡೆದುಕೊಂಡಿವೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿ ಏಳನೆಯ ಸ್ಥಾನ ಬಂದಿದೆ.
ಜಿಲ್ಲಾವಾರು ಫಲಿತಾಂಶ:
ಹಾಸನ ಜಿಲ್ಲೆಗೆ ಶೇ. 89.33
ರಾಮನಗರ ಶೇ. 88.49
ಬೆಂಗಳೂರು ಗ್ರಾಮಾಂತರ ಶೇ. 88.34
ಉತ್ತರ ಕನ್ನಡ ಶೇ. 88.12
ಉಡುಪಿ ಶೇ. 87.97
ಚಿತ್ರದುರ್ಗ ಶೇ. 87.46
ಮಂಗಳೂರು ಶೇ. 86.73
ಕೋಲಾರ ಶೇ. 86.71
ದಾವಣಗೆರೆ ಶೇ.85.94
ಮಂಡ್ಯ ಶೇ. 85.65
ಮಧುಗಿರಿ ಶೇ.84.81
ಶಿರಸಿ ಶೇ, 84.67
ಚಿಕ್ಕೋಡಿ ಶೇ. 84.09
ಚಿಕ್ಕಮಗಳೂರು ಶೇ. 82.76
ಚಾಮರಾಜನಗರ ಶೇ. 80.58
ಕೊಪ್ಪಳ ಶೇ. 80.45
ಮೈಸೂರು ಶೇ. 80.32
ತುಮಕೂರು ಶೇ. 79.92
ಹಾವೇರಿ ಶೇ. 79.75
ಚಿಕ್ಕಬಳ್ಳಾಪುರ ಶೇ. 79.69
ಶಿವಮೊಗ್ಗ ಶೇ. 79.13
ಕೊಡಗು ಶೇ. 78.81
ಬಳ್ಳಾರಿ ಶೇ. 77.98
ಬೆಳಗಾವಿ ಶೇ. 77.43
ವಿಜಯಪುರ ಶೇ.77.36
ಬೆಂಗಳೂರು ಉತ್ತರ ಶೇ. 76.21
ಬಾಗಲಕೋಟೆ ಶೇ. 75.28
ಧಾರವಾಡ ಶೇ.75.04
ಬೀದರ್ ಶೇ. 74.96
ಕಲಬುರಗಿ ಶೇ. 74.65
ಗದಗ ಶೇ. 74.05
ಬೆಂಗಳೂರು ದಕ್ಷಿಣ ಶೇ. 68.83
ರಾಯಚೂರು ಶೇ. 65.33
ಯಾದಗಿರಿ ಶೇ. 53.95
Discussion about this post