ನಾನು ಬರೆಯುವುದು ನಿಂದನೆ ಅಂತ ಕಾಣಬಹುದು. ಒಂದು ವಿಚಾರ ಹೇಳ್ತೀನಿ. ನಮಗೆ ಈ ದೇಶದಲ್ಲಿ ಹಕ್ಕು ಇದೆ. ಚುನಾವಣೆಗೆ ನಿಲ್ಲುವ ಹಕ್ಕೂ ಇದೆ, ಇಲ್ಲ ಎಂದು ಹೇಳುತ್ತಿಲ್ಲ. ಅದನ್ನು ಗೌರವದಿಂದಲೂ ನೋಡುತ್ತೇನೆ. ಆದರೆ ಆ ಹಕ್ಕಿನ ದುರುಪಯೋಗ ಆದರೆ ಅದನ್ನು ಗೌರವಿಸಬೇಕಾ?
ಮೋದಿಯವರಿಗೆ ಇದಿರಾಗಿ ಸ್ಪರ್ಧಿಸಿ ಗೆಲ್ಲುವ ಹಠ, ಸಾಧ್ಯತೆ ಇದ್ದರೆ ಮೋದಿಯವರಲ್ಲ, ಅದಕ್ಕಿಂತ ದೊಡ್ಡವರೆದುರು ನಿಲ್ಲಲಿ. ಎಲ್ಲೋ ಭೌಗೋಳಿಕ ಜ್ಞಾನವೇ ಇಲ್ಲದವರು, ರಾಜ ತಾಂತ್ರಿಕತೆಯ ಪರಿಜ್ಞಾನ ಇಲ್ಲದವರು, ಒಬ್ಬ ಅನುಭವಿ ರಾಜಕಾರಣಿ, ಸಾಧನೆ ಮಾಡಿದ ರಾಜಕಾರಣಿಗೆ ಪ್ರತಿಸ್ಪರ್ಧಿಯಾಗಿ ನಿಂತು ಪ್ರಜಾಪ್ರಭುತ್ವದ ಬುನಾದಿಯನ್ನೇ ಹಾಳು ಮಾಡುತ್ತಾನೆ ಎಂದಾದರೆ ಇಂತವರನ್ನು ಗೌರವಿಸಬೇಕೇ?
ಒಂದು ವೇಳೆ ಮೋದಿಯನ್ನು ವಿರೋಧಿಸುವ ಘಟ್’ಬಂದನ್ ಸದಸ್ಯರು ಮೋದಿಗೆ ಸ್ಪರ್ಧೆ ನೀಡಿದರೆ ಅದನ್ನು ಸ್ವಾಗತಿಸಲೇಬೇಕು. ಕರ್ನಾಟಕದ ದೇವೇಗೌಡರು, ಸಿದ್ಧರಾಮಯ್ಯನವರು ಮುಂತಾದ ನುರಿತ ರಾಜಕಾರಣಿಗಳು ಅಥವಾ ದೇಶದ ಅನೇಕ ಪಕ್ಷಗಳ ಆಡಳಿತಗಾರರು ಆಗಿದ್ದಲ್ಲಿ ಅವರು ಸ್ಪರ್ಧಿಸಿದರೆ ನಾವು ಗೌರವಿಸೋಣ.
ಮಂಡ್ಯದಲ್ಲೇ ನೋಡಿ. ನಿಖಿಲ್’ಗೆ ಇದಿರಾಗಿ ಸುಮಲತಾ ನಿಂತರು. ಇದು ಆಕ್ಷೇಪಾರ್ಹವಲ್ಲ. ಅವರಿಗೆ ಅಂಬರೀಶ್ ಅಭಿಮಾನಿಗಳು, ಚಿತ್ರನಟರ ಹಿನ್ನೆಲೆ ಇದೆ, ಜವಾಬ್ದಾರಿಯೂ ಇದೆ, ಇದು ಸರಿಯಾದ ಸ್ಪರ್ಧೆ. ಅದು ಬಿಟ್ಟು ಯಾರೋ ಕ್ಷೇತ್ರದ ಭೌಗೋಳಿಕ ಜ್ಞಾನವಿಲ್ಲದ, ಪಕ್ಷ ಹಿನ್ನೆಲೆ ಇಲ್ಲದ ಕೆಲವು ಸುಮಲತಾಗಳು ನಿಂತದ್ದು ದೇಶವನ್ನು ಆಡಳಿತ ನಡೆಸಲೋ ಅಥವಾ ಅಸ್ತಿರಗೊಳಿಸಲೋ? ನಾಮಪತ್ರ ತುಂಬಿಸಲು ಗೊತ್ತೇ ಇಲ್ಲದಂತವರು, ಚುನಾವಣಾ ನೀತಿ ಸಂಹಿತೆ ತಿಳಿಯದವರು ಸ್ಪರ್ಧಿಸಿ, ಅವರ ಅದೃಷ್ಟಕ್ಕೆ ಗೆದ್ದರೆ ದೇಶ ಏನಾದೀತು? ಇವರನ್ನು ಹುರಿದುಂಬಿಸಿ ಕಳುಹಿಸಿದ ಪಕ್ಷಗಳು ಎಂತಹ ಹೀನ ಕೆಲಸಕ್ಕೆ ಕೈ ಹಾಕಿವೆ ನೋಡಿ. ಇವರೆಲ್ಲರಿಗೂ ದೇಶದ ಕಲ್ಪನೆ ಇದೆಯೇ ಎಂದು ಪ್ರಜೆಗಳು ಹೇಳಲಿಕ್ಕಿಲ್ಲವೇ. ನನಗೂ ಹಕ್ಕು ಇದೆ ಎಂದು ಮಾಡಬಾರದ್ದನ್ನು ಮಾಡಿದ ಹಾಗಾಗುತ್ತದೆ.
ಮೊದಲಾಗಿ ಚುನಾವಣಾ ಆಯೋಗ ಇದಕ್ಕೆ ಕಡಿವಾಣ ಹಾಕಲೇಬೇಕು. ಇದಕ್ಕೊಂದು ಶಾಸನ ಆಗಲೇಬೇಕು. ನನ್ನ ತರಹ ಇಳುವಳಿಕೆಗೆ ತಕ್ಕಂತೆ ನಾನು ಕೆಲಸ ಮಾಡಬೇಕೇ ವಿನಾ, ನನಗೂ ಹಕ್ಕಿದೆ, Facebook, twitterನಲ್ಲಿ ಅಭಿಮಾನಿಗಳು ಇದ್ದಾರೆ ಎಂದು ನಾನು ಹಕ್ಕು ಇದೆ ಎಂದು ಚುನಾವಣೆಗೆ ಸ್ಪರ್ಧಿಸಿದರೆ, ಮತದಾರರು ಒದ್ದು ಕಳುಹಿಸಲೇಬೇಕು. ಇಂತಹ ಆಗ್ರಹದವರು, ಹಕ್ಕು ಪ್ರತಿಪಾದಿಸಿ ಗೆದ್ದುದರಿಂದಲೇ ಸರಕಾರ ಅತಂತ್ರವಾಗಿ, ರಾಜ್ಯವೂ ಅನಾಥವಾಗಿ ರೆಸಾರ್ಟ್ ರಾಜಕೀಯ ಶುರುವಾಗಿ ರಾಜ್ಯಾಭಿವೃದ್ಧಿ ಪಥನವಾಗುವುದು.
ಮುಂದಿನ ನೂತನ ಸರಕಾರ ರಚನೆಯಾದಾಗ ಮೊದಲು ಮಾಡಬೇಕಾದ ವಿಷಯವೇ ಇಂತಹ ಹಕ್ಕು ಚಲಾಯಿಸುವ ಕೃತ್ಯಗಳಿಗೆ ಕಡಿವಾಣ ಹಾಕುವಂತದ್ದು ಆಗಬೇಕು. ಇದು ದೇಶದ ಸ್ವಸ್ಥ್ಯ ಕಾಪಾಡುವಂತಹ ಮೊದಲ ಕೆಲಸವಾಗಬೇಕು.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post