ಶ್ರೀನಗರ: ಉಗ್ರವಾದಿಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿರುವ ಭಾರತೀಯ ಸೇನೆ ಮಹತ್ವದ ಹೆಜ್ಜೆಯೊಂದರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ತಾರೀಖ್ ಮೌಲ್ವಿಯನ್ನು ಅಕ್ಷರಶಃ ಅಟ್ಟಾಡಿಸಿ ಬೇಟೆಯಾಡಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್’ನ ಮನೆಯೊಂದರಲ್ಲಿ ಮೌಲ್ವಿ ಹಾಗೂ ಸಹಚರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಸೇನಾಪಡೆಗಳು ಮನೆಯನ್ನು ಸುತ್ತುವರೆದಿದ್ದವು. ಸ್ಥಳದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ತಾರೀಖ್ ಮೌಲ್ವಿಯನ್ನು ಹೆಮ್ಮೆಯ ಯೋಧರು ನಾಯಿ ನರಿಯಂತೆ ಅಟ್ಟಾಡಿಸಿ ಎನ್’ಕೌಂಟರ್ ಮಾಡಿದ್ದಾರೆ.
ಇನ್ನು, ಈ ಭಾಗದಲ್ಲಿ ಮತ್ತಷ್ಟು ಉಗ್ರರು ಅಡಗಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿವೆ.
34 ಆರ್ ಆರ್ ಹಾಗೂ ಎಸ್’ಒಜಿ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿವೆ.

















