ಹೊಸನಗರ: ಒಂದೆಡೆ ಬೇಸಿಗೆಯ ಧಗೆಯಿಂದ ಮಲೆನಾಡ ಮಂದಿ ಬಳಲುತ್ತಿದ್ದರೆ, ಇಲ್ಲಿನ ಕೋಡೂರು ಗ್ರಾಮದ ಮಂದಿ ವಿದ್ಯುತ್ ವ್ಯತ್ಯಯದಿಂದಾಗಿ ಬಳಲುತ್ತಿದ್ದಾರೆ.
ತಾಲೂಕಿನ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಮೆಸ್ಕಾಂ ಸಿಬ್ಬಂದಿಗಳು ಟ್ರಾನ್ಸ್’ಫಾರಂಗೆ ಅಳವಡಿಸಿದ ಕೇಬಲ್‌ಗಳನ್ನು ಕಿತ್ತು ಸಂಪರ್ಕ ಕಡಿತಗೊಳಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿ ಕೂಲಿ ಕೆಲಸ ಮಾಡುವ 10-12 ಪರಿಶಿಷ್ಠ ಪಂಗಡಕ್ಕೆ ಸೇರಿದ ವಾಸದ ಮನೆಗಳಿದ್ದು ಇಂದು ಕತ್ತಲೆಯಲ್ಲಿ ಕುಳಿತುಕೊಂಡಿವೆ. ಕೆಲವು ಮನೆಗಳಲ್ಲಿ ದೀಪದ ಬುಡ್ಡಿಗೆ ಸೀಮೆಎಣ್ಣೆಯೂ ಇಲ್ಲದೆ ಪರದಾಡುತ್ತಿದ್ದಾರೆ.
ಘಟನೆ: ಇಂದು ಮೆಸ್ಕಾಂ ಸಿಬ್ಬಂದಿಗಳು ಅರಣ್ಯ ಪ್ರದೇಶದಲ್ಲಿ ಒಬ್ಬರು ವ್ಯಕ್ತಿಯು ಗುಡಿಸಲು ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಹೊಸ ವಿದ್ಯುತ್ ಸಂಪರ್ಕ ಒದಗಿಸಲು ಬಂದಾಗ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದರು. ಆದ ಕಾರಣ ಮೆಸ್ಕಾಂ ಸಿಬ್ಬಂದಿಗಳು ಸಂಪರ್ಕ ಕಡಿತಗೊಳಿಸಿ ಗ್ರಾಮವೇ ಕತ್ತಲೆಗೆ ತಳ್ಳಿದೆ.
(ಮಾಹಿತಿ: ಮಹೇಶ್, ಹಿಂಡ್ಲೆಮನೆ, ಹೊಸನಗರ)

















