ಜನರಿಂದ ಜನರಿಗಾಗಿ ಜನರಿಗೋಸ್ಕರವೇ ಆಯ್ಕೆಯಾಗುವ ಜನಪ್ರತಿನಿಧಿಗಳು ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಮುಕ್ತಾಯವಾದ ನಂತರ ಜನರಿಂದಲೇ ದೂರವಾಗುವವರೇ ಅಧಿಕ. ಹೀಗಿರುವಾಗ ನಮ್ಮ ಉಡುಪಿಯ ಶಾಸಕ ರಘುಪತಿ ಭಟ್ರು ಜನರಿಗೆ ಇಷ್ಟವಾಗಲು ಕೆಲವೊಂದು ಕಾರಣಗಳನ್ನು ಕೊಡುತ್ತೇನೆ ಕೇಳಿ ಎಂಬ ಲೇಖನವೊಂದನ್ನು ಉಡುಪಿಯ ಗೌರೀಶ್ ಆವರ್ಸೆ ಅವರು ಬರೆದಿದ್ದಾರೆ… ಮುಂದೆ ಓದಿ…:
ಸೂರಾಲಿಗೆ ಹೋಗುವ ಮಾರ್ಗದಲ್ಲಿ ಸಿಗುವ ಕರ್ಜೆ ಗ್ರಾಮದಲ್ಲಿ ಇರುವ ಕಡಂಗೂಡು ನಿವಾಸಿ ಸರಸಜ್ಜಿಯ ಕಂಬನಿಯ ಕಥೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದಂತೆ ಮನೆಯ ಹಿರಿಯ ಮಗನಂತೆ ಅದೇ ದಿನ ಸಂಜೆ ಎಲ್ಲರಿಗಿಂತ ಮೊದಲು ಸಹಾಯಕ್ಕೆ ನಿಂತಿದ್ದು ಇದೆ ರಘುಪತಿ ಭಟ್ರು. ಸರಸಜ್ಜಿಗೆ ಸೂರು ಕಲ್ಪಿಸಿಕೊಟ್ಟ ಹೆಮ್ಮೆ ನಮ್ಮ ಶಾಸಕರದ್ದು.
ಮರಳಿನ ಸಮಸ್ಯೆ ಇದು ಕೇವಲ ಉಡುಪಿ ವಿಧಾನಸಭಾ ಕ್ಷೇತ್ರದ ಸಮಸ್ಯೆಯಲ್ಲ. ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಮರಳಿನ ಸಮಸ್ಯೆ ಇದೆ. ಅದರೆ ಕೊಟ್ಟ ಮಾತಿನಂತೆ ಹೇಗಾದರೂ ಮಾಡಿ ಮರಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತನ್ನ ಬೆಂಬಲಿಗರೊಂದಿಗೆ ನಡುರಾತ್ರಿ ಉಡುಪಿ ಡಿಸಿ ಕಛೇರಿ ಮುಂದೆ ತಾನೊಬ್ಬ ಶಾಸಕ ಎನ್ನುವುದನ್ನು ಬದಿಗಿಟ್ಟು ಒಂದು ವಾರ ಹಗಲು-ರಾತ್ರಿ ಎನ್ನದೇ ಧರಣಿಗೆ ಕುಳಿತದ್ದು ಇದೆ ರಘುಪತಿ ಭಟ್ರು.
ಭಟ್ರು ಧರಣಿಗೆ ಕುಳಿತಾಗ ದೀಪಾವಳಿ ಹಬ್ಬದ ಸಮಯವಾಗಿತ್ತು. ನಾನು ಭಟ್ರ ಹತ್ತಿರ ಹೇಳ್ದೆ-ದೀಪಾವಳಿ ಹಬ್ಬ ಬೇರೆ ಇದೆ, ರಾಜ್ಯ ಸರ್ಕಾರ ನಮ್ಮ ಹೋರಾಟಕ್ಕೆ ಬೆಲೆ ಕೊಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಬಾರಿ ದೀಪಾವಳಿ ಹಬ್ಬ ಆಚರಣೆ ಮಾಡುವುದಕ್ಕೆ ಸಾಧ್ಯವಾಗಲ್ವೇನೋ ಅಂತ. ಅದಕ್ಕೆ ರಘುಪತಿ ಭಟ್ರು ಹೇಳಿದ್ದೇನು ಗೊತ್ತಾ? ದೀಪಾವಳಿ ಹಬ್ಬ ಮುಂದಿನ ವರ್ಷ ಆಚರಣೆ ಮಾಡಬಹುದು. ಈ ಮರಳನ್ನೇ ನಂಬಿಕೊಂಡು ಮನೆ ಒಕ್ಕಲಿಗೆ ದಿನ ಇಟ್ಟವರು ಮುಂದಿನ ವರ್ಷಕ್ಕೆ ಮುಂದೂಡಲು ಆಗುತ್ತಾ ಅಂತ ಕೇಳಿದ್ರು. ಈ ಒಂದೇ ಒಂದು ಮಾತು ಸಾಕು ಅಲ್ವಾ ನಮ್ ಭಟ್ರ ವ್ಯಕ್ತಿತ್ವ ಹೇಗೆ ಅಂತ ಹೇಳುವುದಕ್ಕೆ??
ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರೆಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿದ್ದ 7 ಮಂದಿ ಮೀನುಗಾರರು ಕಾಣೆಯಾದಾಗ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಡವನ್ನು ಹೇರಲು ಒಂದು ಲಕ್ಷಕ್ಕೂ ಅಧಿಕ ಮೀನುಗಾರರನ್ನು ಸೇರಿಸಿ ಮಲ್ಪೆಯಲ್ಲಿ ಬೃಹತ್ ಮೀನುಗಾರರ ಸಮಾವೇಶವನ್ನು ಮಾಡಿದ್ದು ಇದೆ ರಘುಪತಿ ಭಟ್ರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ 4 ತಿಂಗಳಾದರೂ ಮೀನುಗಾರರನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಇದ್ದಾಗ ಕೇಂದ್ರ ರಕ್ಷಣಾ ಸಚಿವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರ ಮೂಲಕ ಒತ್ತಡವನ್ನು ಹೇರಿ ನೌಕಾದಳದೊಂದಿಗೆ ಸ್ವತಃ ರಘುಪತಿ ಭಟ್ ಅವರೇ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮುಳುಗಿದ ಸುವರ್ಣ ತ್ರಿಭುಜ ಬೋಟ್’ನ ಅವಶೇಷಗಳನ್ನು ಪತ್ತೆ ಹಚ್ಚಿದ್ದು ಇದೆ ರಘುಪತಿ ಭಟ್ರ ನೇತೃತ್ವದಲ್ಲಿ. ಉಡುಪಿಯಲ್ಲಿ ಯಾರಿಗೆ ಅನ್ಯಾಯವಾದರೂ ಮೊದಲು ಸಹಾಯಕ್ಕೆ ನಿಲ್ಲುವುದು ನಮ್ಮ ಶಾಸಕರಾದ ರಘುಪತಿ ಭಟ್ರು ಮಾತ್ರ.
ಮೊನ್ನೆ-ಮೊನ್ನೆ ರಾಜ್ಯ ಮೈತ್ರಿ ಸರ್ಕಾರದ ಕುಮ್ಮಕ್ಕಿನಿಂದ ನನ್ನ ಸ್ನೇಹಿತ ಅಜಿತ್ ಶೆಟ್ಟಿ ಹೆರಂಜೆ ಬಂಧನವಾದಾಗ ಕರಾವಳಿ ಹುಡುಗರ ತಂಟೆಗೆ ಬಂದರೆ ಎಚ್ಚರ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆಯನ್ನು ನೀಡಿದ್ದು ಇದೆ ನಮ್ಮ ಶಾಸಕರು.
ಉಡುಪಿಯಲ್ಲಿ ಈ ಬಾರಿ ನೀರಿಗೆ ಬಹಳ ತೊಂದರೆಯಾಗಿದೆ. ನಗರಸಭೆಯ ವಾರ್ಡುಗಳಿಗೆ ಹಾಗೂ ಹತ್ತಿರದ ಗ್ರಾಮಗಳಿಗೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಬಜೆ ಡ್ಯಾಮ್’ಗೆ ಹರಿದು ಬರುತ್ತಿದ್ದ ನೀರಿನ ಮಾರ್ಗ ಹೂಳು ಹಾಗೂ ಕಲ್ಲುಗಳಿಂದ ಮುಚ್ಚಿ ಹೋಗಿತ್ತು. ಜನರ ನೀರಿನ ಹಾಹಾಕಾರವನ್ನು ನೋಡಿದ ರಘುಪತಿ ಭಟ್ರು ನಗರಸಭಾ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ನದಿಯಿಂದ ಹೂಳೆತ್ತುವ ಕಾರ್ಯಕ್ಕೆ ಕೈ ಹಾಕಿದರು. ಕಾರ್ಯಕರ್ತರ ಸತತ ಮೂರೂ ದಿನಗಳ ಶ್ರಮದಾನದ ಫಲವಾಗಿ ನೀರು ಸರಾಗವಾಗಿ ಹರಿದು ಬರುತ್ತಿದೆ.
ಒಬ್ಬ ಶಾಸಕನಾಗಿ ಚಡ್ಡಿ ಬನಿಯನ್ ಹಾಕಿ ಮೇ ತಿಂಗಳ ಬಿರು ಬಿಸಿಲಿನಲ್ಲಿ ಕಾರ್ಯಕರ್ತರ ಜೊತೆ ನದಿಯಲ್ಲಿರುವ ಹೂಳೆತ್ತುತ್ತಾರೆ ಅಂದರೆ ಒಮ್ಮೆ ಯೋಚನೆ ಮಾಡಿ ಸ್ನೇಹಿತರೆ ನಮ್ಮ ಶಾಸಕರು ಇತರ ಶಾಸಕರಿಗಿಂತ ಎಷ್ಟು ಭಿನ್ನ ಅಂತ? ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಜನರ ನೋವಿಗೆ ಸ್ಪಂದಿಸುವ ಶಾಸಕರನ್ನು ನಾನೆಂದು ನೋಡಿಲ್ಲ.
ರಘುಪತಿ ಭಟ್ ಅವರು ಶಾಸಕರಾಗಿರುವ ಈ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದರೆ ನಮ್ಮ ಉಡುಪಿ ಮಾದರಿ ಜೆಲ್ಲೆಯಾಗುತಿದ್ದುದರಲ್ಲಿ ಸಂಶಯವಿಲ್ಲ. ಉಡುಪಿಯ ಸರ್ವತೋಮುಖ ಅಭಿವೃದ್ಧಿಗೆ ರಘುಪತಿ ಭಟ್ ಅವರಂತ ಮಾಸ್ ಹಾಗೂ ಕ್ಲಾಸ್ ಲೀಡರ್ ಅತ್ಯಾವಶ್ಯಕ. ಒಟ್ಟಾರೆ ಹೇಳಬೇಕೆಂದರೆ ಎಲ್ಲರಂತಲ್ಲ ನಮ್ಮ ಶಾಸಕರು…
ಲೇಖನ: ಗೌರೀಶ್ ಆವರ್ಸೆ
Discussion about this post