ಅನೇಕ ಜನರು ಅನೇಕ ರೀತಿಯ ಧ್ಯಾನಾಸಕ್ತರು ಇರುವುದು ಸಹಜ. ಕೆಲವರು ಹೇ ಭಗವಂತಾ ನನ್ನನ್ನು ಗೆಲ್ಲಿಸು ಎಂದು ಮೊದಲು ಹೇಳಿ, ನಂತರ ನನ್ನ ಪಕ್ಷ ಗೆಲ್ಲಲಿ, ನಂತರ ಉನ್ನತ ಸ್ಥಾನ ದೊರಕಲಿ ಎಂದು ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಇನ್ನು ಕೆಲವರು ಶತ್ರುಗಳು ನೆಲ ಕಚ್ಚಬೇಕು, ನನಗೆ ಉನ್ನತಾಧಿಕಾರ ಬೇಕು ಎಂದು ಧ್ಯಾನಿಸುತ್ತಾರೆ.
ಆದರೆ ನರೇಂದ್ರ ಮೋದಿ ಹಾಗಲ್ಲ ಎಂದು ಅವರ ಜಾತಕ ಹೇಳುತ್ತದೆ. ಈವರೆಗಿನ ಅವರ ನಿಸ್ವಾರ್ಥ ಶ್ರಮವೇ ಇದಕ್ಕೆ ಪುಷ್ಟಿ ಕೊಡುತ್ತದೆ. ಚುನಾವಣಾ ಪ್ರಚಾರ ಪ್ರಕ್ರಿಯೆ ಮುಗಿದ ಬಳಿಕ, ಕೇದಾರನಾಥಕ್ಕೆ ತೆರಳಿ, ದೇವತಾ ದರ್ಶನಗೈದು, ಗುಹೆಯೊಳಗೆ ಕುಳಿತು ಧ್ಯಾನಾಸಕ್ತರಾದರು.
ಅವರ ಉದ್ದೇಶವು ‘ಹೇ ಭಗವಾನ್, ಅನಿವಾರ್ಯವಾಗಿ ದೇಶದ ಹಿತಕಾರ್ಯ ಮಾಡುವಾಗ ಅನೇಕ ವಿಪಕ್ಷ ನಾಯಕರುಗಳಿಗೆ ನನ್ನ ಮಾತಿನಿಂದ ನೋವಾಗಿರಬಹುದು. ಅಲ್ಲದೆ ಅವರೆಲ್ಲರೂ ನೊಂದುಕೊಂಡೂ ಇರಬಹುದು. ಆದರೆ ದೇಶದ ಹಿತಕ್ಕಾಗಿ ನಾನು ಇಳಿದಿರುವುದರಿಂದ ನನ್ನ ಇಂತಹ ನಡೆಗಳು ಅನಿವಾರ್ಯವಾಗಿತ್ತು. ಅದಕ್ಕಾಗಿ ನಾನು ನನ್ನಲ್ಲಿರುವ ಇಂತಹ ಲೋಪ ನ್ಯೂನತೆಗಳಿಂದ ನೊಂದಿದ್ದೇನೆ. ಅದರ ಪರಿಮಾರ್ಜನೆಗಾಗಿ ಇದೋ ನನ್ನ ದೇಹ ದಂಡನೆಯ ಈ ಧ್ಯಾನವನ್ನು ಸ್ವೀಕರಿಸಿ, ಅವರೆಲ್ಲರಿಗೂ, ಇಡೀ ಭಾರತದ ಸಕಲ ಪ್ರಜೆಗಳಿಗೂ ಮಂಗಳವನ್ನು ನೀಡು. ಈ ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಕೊಡು’ ಎಂಬ ಪ್ರಾರ್ಥನೆ ಇರಬಹುದಾಗಿದೆ.
ನನಗೆ ಇಂತಹ ಚಿಂತನೆಗಳು ಹೀಗಿರಬಹುದು ಎಂದು ಯೋಚನೆ ಬಂದದ್ದು ಒಂದನೆಯದ್ದಾಗಿ ಮೋದಿಯವರ ಜಾತಕ, ಎರಡನೆಯದ್ದಾಗಿ ಈವರೆಗಿನ ಅವರ ನಡೆನುಡಿಗಳು. ಇದು ಊಹಾಪೋಹ ಪಟುತ್ವ ಅಲ್ಲ. ಕೇವಲ ಒಂದು ಚಿಂತನೆಯಷ್ಟೆ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post