ಕೇದಾರನಾಥ: ಲೋಕಸಭಾ ಚುನಾವಣೆಗೆ ಇಂದು ಕೊನೆಯ ಹಂತದ ಮತದಾನ ನಡೆಯುತ್ತಿರುವಂತೆಯೇ ಎರಡು ದಿನಗಳ ತೀರ್ಥಕ್ಷೇತ್ರದ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೇದಾರನಾಥದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದರು.
ಕೇದಾರನಾಥ ದೇವಾಲಯ ಹಾಗೂ ಅಲ್ಲಿನ ಪ್ರಾಕೃತಿಕ ಸೌಂದರ್ಯ ಕಂಡು ಭಾವುಕರಾದ ಮೋದಿ, ಇಂತಹ ಸ್ಥಳಗಳಿಗೆ ನಮ್ಮ ದೇಶವಾಸಿಗಳು ಭೇಟಿ ನೀಡಬೇಕು ಎಂದು ಕರೆ ನೀಡಿದರು.
#WATCH PM Modi in Kedarnath, "I have had a special relationship with Kedarnath. After 2013 natural tragedy, we have made a master-plan for the re-development for Kedarnath." pic.twitter.com/s2jla0XnFW
— ANI (@ANI) May 19, 2019
ದೇಶವಾಸಿಗಳು ನಮ್ಮ ದೇಶದ ಇಂತಹ ಪ್ರದೇಶಗಳನ್ನು ನೋಡಬೇಕು. ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಆಸ್ವಾದಿಸುವುದರ ಕುರಿತು ನನ್ನ ವಿರೋಧವಿಲ್ಲ. ಆದರೆ, ನಮ್ಮ ದೇಶದಲ್ಲಿರುವ ಇಂತಹ ಹಲವು ಪ್ರದೇಶಗಳನ್ನು ದೇಶವಾಸಿಗಳು ಒಮ್ಮೆಯಾದರೂ ಕಂಡು ಧನ್ಯರಾಗಬೇಕು ಎಂದರು.
Prayed at the Kedarnath Temple. Har Har Mahadev! pic.twitter.com/ox7LMCZmfi
— Chowkidar Narendra Modi (@narendramodi) May 18, 2019
ಶ್ರೇಷ್ಠವಾದ ಅಧ್ಯಾತ್ಮಿಕ ಚೇತನಗಳು ಜನಿಸಿ, ಸಾಧನೆ ಮಾಡಿದ ಪುಣ್ಯ ಭೂಮಿಯಲ್ಲಿ ನಾನು ಜನಿಸಿರುವುದು ನನ್ನ ಸೌಭಾಗ್ಯವೇ ಸರಿ. ಇಂತಹ ಭೂಮಿಯನ್ನು ಅಭಿವೃದ್ಧಿಪಡಿಸುವ ಅವಕಾಶ ದೊರೆತದ್ದು ನನ್ನ ಪೂರ್ವ ಜನ್ಮದ ಸುಕೃತ ಎಂದರು.
Reviewing aspects of the ongoing Kedarnath Development Project. pic.twitter.com/bVOFnCozug
— Chowkidar Narendra Modi (@narendramodi) May 18, 2019
#WATCH Prime Minister Narendra Modi greets devotees at Kedarnath temple. pic.twitter.com/7ExtXokdw4
— ANI (@ANI) May 19, 2019
ಇನ್ನು, ಕೇದಾರನಾಥಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ಇಡಿಯ ಪ್ರದೇಶದಲ್ಲಿ ಅಭೂತಪೂರ್ವ ಭದ್ರತೆ ಏರ್ಪಡಿಸಲಾಗಿತ್ತು. ಆದರೂ, ಜನರ ಸನಿಹಕ್ಕೆ ತೆರಳಿದ ಪ್ರಧಾನಿಯವರು ಅವರತ್ತ ಕೈಬೀಸಿ, ಮುಂಜಾನೆಯ ಶುಭ ಕೋರಿದ್ದು ವಿಶೇಷವಾಗಿತ್ತು.
ವೀಡಿಯೋ ನೋಡಿ:
#WATCH Prime Minister Narendra Modi greets devotees at Kedarnath temple. pic.twitter.com/7ExtXokdw4
— ANI (@ANI) May 19, 2019
Prime Minister Narendra Modi in Kedarnath: Mera saubhagya raha hai ki adhyatmik chetna ki bhoomi pe jaane ka mujhe kai varshon se awsar milta raha hai. Yahan ka mera jo development mission hai usmein prakriti, paryavaran aur paryatan hain. pic.twitter.com/NYLvtKQERU
— ANI (@ANI) May 19, 2019
Discussion about this post