ತಮಿಳಲ್ಲಿ ರೌಡಿ ಬೇಬಿ ಹಾಡು ಬಂದು ಈಗಾಗಲೇ ಹೊಸ ಇತಿಹಾಸವನ್ನು ನಿರ್ಮಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ತಮಿಳಿನ ರೌಡಿ ಬೇಬಿಯನ್ನು ನೋಡಿ ನಮ್ಮ ಕುಂದಾಪುರದ ಹೊಸ ಹುರುಪಿನ ಕಲತ್ವ ಪ್ರೊಡಕ್ಷನ್ ತಂಡ ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ರೌಡಿ ಬೇಬಿ ಕನ್ನಡ ವರ್ಷನ್ ಅನ್ನುವ ಹಾಡನ್ನು ನಿರ್ಮಿಸಿದ್ದಾರೆ.
ಈ ಕನ್ನಡ ರೌಡಿ ಬೇಬಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡ್ತಾ ಇದೆ. ಬಿಡುಗಡೆಯಾಗಿ ಕಡಿಮೆ ಅವಧಿಯಲ್ಲಿ 7 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿ ಕರ್ನಾಟಕದಾದ್ಯಂತ ಜನರ ಮೆಚ್ಚುಗೆ ಗಳಿಸಿ ದಾಖಲೆಯ ಗೆಲುವನ್ನುಸಾಧಿಸಿದೆ.
2019ರ ಸಾಲಿನಲ್ಲಿ ಯೂಟ್ಯೂಬ್’ನಲ್ಲಿ ಬಿಡುಗಡೆಯಾಗಿರುವ ಕನ್ನಡದ ಆಲ್ಬಮ್ ಹಾಡುಗಳ ಸಾಲಿನಲ್ಲಿ ಅತಿ ಹೆಚ್ಚು ವೀಕ್ಷಣೆ ಗಳಿಸಿದ ಆಲ್ಬಮ್’ಗಳ ಪಟ್ಟಿಯಲ್ಲಿ 5ನೆಯ ಸ್ಥಾನವನ್ನು ರೌಡಿ ಬೇಬಿ ಗಳಿಸಿದೆ. ಅಷ್ಟೇ ಅಲ್ಲದೆ ಕರಾವಳಿಯಲ್ಲಿ ಇದುವರೆಗೂ ಬಿಡುಗಡೆಯಾಗಿರುವ ಆಲ್ಬಮ್ ಸಾಲುಗಳ ಪಟ್ಟಿಯಲ್ಲಿ 7 ಲಕ್ಷ ವೀಕ್ಷಣೆಯನ್ನು ಬಹುಬೇಗ ಗಳಿಸಿದ ಮೊದಲ ಆಲ್ಬಮ್ ಎನ್ನುವ ಪಟ್ಟವನ್ನೂ ಸಹ ಮುಡಿಗೇರಿಸಿಕೊಂಡಿದೆ.
ಈ ಹಾಡಿಗೆ ಕಲತ್ವ ತಂಡದ ಸದಸ್ಯರೇ ಆದ ಜಿಡಿಕೆ ಕಂಚಿಕಾನ್ ಅವರು ಕ್ಯಾಮೆರಾ ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದ್ದರೆ, ಮನೀಶ್ ಮೊಯ್ಲಿ ಸಾಹಿತ್ಯ ರಚಿಸಿದ್ದಾರೆ. ಸನತ್ ಉಪ್ಪುಂದ ಮತ್ತು ಶೀತಲ್ ಎಸ್.ಎಂ. ಅವರು ಈ ಹಾಡಿಗೆ ಕಂಠದಾನ ಮಾಡಿದ್ದಾರೆ.
ಈಗಾಗಲೇ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕನ್ನಡ ರೌಡಿ ಬೇಬಿ ವಿಶೇಷವಾಗಿ ಟಿಕ್ ಟಾಕ್ ಡಬ್ ಸ್ಟಾರ್ ಗಳ ಹಾಟ್ ಫೆವೆರೆಟ್ ಆಗಿದೆ. ಈ ಹಾಡಿಗೆ ಈಗಾಗಲೇ 5 ಸಾವಿರಕ್ಕೂ ಅಧಿಕ ಟಿಕ್ ಟಾಕ್ ಡಬ್ ಆಗಿರುವುದು ಇನ್ನೊಂದು ವಿಶೇಷ.
ಧಾತ್ರೀ ಡೆವಲಪ್ಪರ್ಸ್ ಅವರ ನಿರ್ಮಾಣದಲ್ಲಿ ಮೂಡಿ ಬಂದ ಈ ಹಾಡಿಗೆ ನಟನೆ ಹಾಗೂ ಡ್ಯಾನ್ಸ್ ಕೊರಿಯೋಗ್ರಫಿ ವಿಭಾಗದಲ್ಲಿ ಕಿರಣ್ ಎಂ.ಜೆ. ನಿರ್ವಹಿಸಿದ್ದಾರೆ ಹಾಗೂ ನಿರ್ದೇಶನ ನಂದಿರಾಜ್, ಸಹ ನಿರ್ದೇಶನ ರವಿರಾಜ್ ಪೂಜಾರಿ ಹಾಗೂ ಪವನ್ ಹಟ್ಟಿಕುದ್ರು ನಿರ್ವಹಿಸಿದ್ದಾರೆ.
ಪೋಸ್ಟರ್ ಎಡಿಟಿಂಗ್ ವಿನಯ್ ಚಂದ್ರ ಐತಾಳ್ ಅವರ ಕೈಚಳಕದಲ್ಲಿ ಮೂಡಿ ಬಂದಿದೆ. ಈ ಹಾಡಿನಲ್ಲಿ ವಿಶೇಷವಾಗಿ ಈ ಸಲ ಕಪ್ ನಮ್ದೇ, ಪಬ್ ಜಿ ಹಾಗೂ ಟಿಕ್ ಟಾಕ್ ಟ್ರೆಂಡ್ ಪದಗಳನ್ನು ಬಳಸಿ ಸಾಹಿತ್ಯ ರಚಿಸಿರುವುದು ವಿಶೇಷವಾಗಿದೆ. ಇದಕ್ಕೂ ಈ ಹಿಂದೆ ಇದೆ ಕಲತ್ವ ತಂಡದಿಂದ ಪ್ರೇಮಿಗಳ ದಿನದ ಪ್ರಯುಕ್ತ ನೀನಿರದೆ ಆಲ್ಬಮ್ ಹಾಡಿನಲ್ಲೂ ಕೂಡ ಸದ್ದು ಮಾಡಿದ್ದರು. ಮುಂದೆಯೂ ಸಹ ಈ ಕುಂದಾಪುರದ ಯುವ ಪ್ರತಿಭೆಗಳ ತಂಡದಿಂದ ಹಲವು ಆಲ್ಬಮ್ ಹಾಡು ಮತ್ತು ಶಾರ್ಟ್ ಫಿಲಂಗಳು ನಿರ್ಮಿಸುವ ಯೋಜನೆಯಿದೆ ಎನ್ನುತ್ತಾರೆ ತಂಡದ ಪ್ರಮುಖರು.
Discussion about this post