ಬೆಂಗಳೂರು: ಲೋಕಸಭಾ ಚುನಾವಣೆಗೆ ಮತದಾನ ಸಂಪೂರ್ಣ ಮುಕ್ತಾಯವಾಗಿದ್ದು, ದೇಶದಾದ್ಯಂತ ಮೋದಿ ನೇತೃತ್ವದ ಎನ್’ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.
ಇದರ ಬೆನ್ನಲ್ಲೇ ರಾಜ್ಯದ 28 ಸ್ಥಾನಗಳಲ್ಲಿ ಬಿಜೆಪಿ 27 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಇದರಲ್ಲಿ ಎಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಚರ್ಚೆಗಳು ಆರಂಭವಾಗಿದೆ.
ಈ ಕುರಿತಂತೆ ವಿಶೇಷ ಎಕ್ಸಿಟ್ ಪೋಲ್ ಸಮೀಕ್ಷೆಯ ವರದಿ ಬಹಿರಂಗಗೊಂಡಿದ್ದು, ಇದರಂತೆ ಬಿಜೆಪಿ ಸುಮಾರು 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಮೈತ್ರಿ ಪಕ್ಷ ಹಿಂದೆ ಬೀಳಲಿದೆ ಎನ್ನಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು 20 ಸೀಟು ಗೆಲ್ಲುವುದಾಗಿ ಕೈ ಮುಖಂಡರು ಹೇಳಿದ್ದರು. ಬಿಜೆಪಿ ನಿರ್ಧಿಷ್ಟವಾಗಿ 22 ಸೀಟು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ ವರದಿಯಂತೆ, ಬಿಜೆಪಿ 18 ರಿಂದ 20 ಸ್ಥಾನಗಳನ್ನು ಗಳಿಸಲಿದೆ.
ಆದರೆ, ಐಎನ್ ಎನ್-ಎಸ್-ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಆಡಳಿತಾರೂಢ ಮೈತ್ರಿ ಪಕ್ಷಕ್ಕೆ ಹಿನ್ನಡೆಯಾಗುವುದು ನಿಶ್ಚಿತ ಎನ್ನಲಾಗಿದೆ.
Discussion about this post