ಚಳ್ಳಕೆರೆ: ಖಾಸಗಿ ಬ್ಯಾಂಕೊಂದರ ಎಟಿಎಂ ದರೋಡೆ ಯತ್ನ ವಿಫಲವಾದ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ನಗರದ ಬೆಂಗಳೂರು ರಸ್ತೆಯಲ್ಲಿರುವ ವೃತ್ತ ನಿರೀಕ್ಷಕರ ಕಚೇರಿ ಕೂಗಳತೆ ದೂರದಲ್ಲಿರುವ ಐಡಿಬಿಎಲ್ ಬ್ಯಾಂಕ್’ನ ಎಟಿಎಂನಲ್ಲಿ ಸೋಮವಾರ ರಾತ್ರಿ 11.30 ರ ಸುಮಾರಿನಲ್ಲಿ ಒಬ್ಬ ವ್ಯಕ್ತಿ ಕಳವು ಮಾಡಲು ಹೋಗಿ ಸಾಧ್ಯವಾಗದೇ ಎಟಿಎಂ ಯಂತ್ರವನ್ನು ಜಖಂ ಮಾಡಲಾಗಿದೆ.
ಘಟನೆ ಸ್ಥಳಕ್ಕೆ ಪಿಎಸ್‌ಐ ಗುಡ್ಡಪ್ಪ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಎಟಿಎಂ ನಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಒಬ್ಬ ವ್ಯಕ್ತಿ ಟವಲ್ ಸುತ್ತಿಕೊಂಡು ಒಳ ಪ್ರವೇಶ ಮಾಡಿ ಎಟಿಎಂ ಯತ್ರವನ್ನು ಜಖಂ ಗೊಳಿಸಿದ್ದಾನೆ. ಒಬ್ಬನಿಂದ ಸಾಧ್ಯವಾಗದ ಕಾರಣ ಬಿಟ್ಟು ಹೋಗಿದ್ದಾನೆ. ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
ಪದೆ ಪದೇ ನಗರದಲ್ಲಿ ಸರಗಳ್ಳತನ, ಬ್ಯಾಂಕ್ ದರೋಡೆ ಯತ್ನ ವಿಫಲಗಳಿಂದ ನಗರದ ಸಾರ್ವಜನಿಕರಲ್ಲಿ ಆತಂಕದ ಛಾಯೆ ಮೂಡಿದ್ದು ಇನ್ನು ಮುಂದೆಯಾದರೂ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಪೊಲೀಸ್ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
(ವರದಿ: ಸುರೇಶ್ ಬೆಳೆಗೆರೆ, ಚಳ್ಳಕೆರೆ)
Discussion about this post