ಮೊದಲಿಗೆ ಮೋದಿಯವರ ಜಾತಕ ಇದಿರು ಇಟ್ಟುಕೊಂಡು, ಆ ಗ್ರಹಸ್ಥಿತಿಗಳ ರಷ್ಮಿ ಸಂಖ್ಯೆಗಳ ಲೆಕ್ಕಾಚಾರ ಮಾಡಬೇಕು. ಈ ಜಾತಕದ ಪ್ರಧಾನ ಪ್ರತಿಸ್ಪರ್ಧಿಯ ಜಾತಕದ ಗ್ರಹ ರಷ್ಮಿಯನ್ನೂ ನೋಡಬೇಕು. ಇಲ್ಲಿ ರಾಹುಲ್ ಗಾಂಧಿಯೇ ಪ್ರಧಾನ ಪ್ರತಿಸ್ಪರ್ಧಿ. ಮೋದಿಯವರ ಜಾತಕದ ಗ್ರಹರ ರಷ್ಮಿ ಸಂಖ್ಯೆಯ ಇದಿರು ರಾಹುಲ್ ಗಾಂಧಿಯವರ ಜಾತಕದ ರಷ್ಮಿ ಸಂಖ್ಯೆಯ ಬಲಾಬಲ ಹೇಗಿದೆ ಎಂದು ನೋಡಬೇಕು.
ರಷ್ಮಿ ಸಂಖ್ಯೆಯು ದುಸ್ಥಾನ, ಅಸ್ತ, ದುರ್ಬಲ, ದುಸ್ತಾನ ಸ್ಥಿತ ಗ್ರಹರಲ್ಲಿ ಕ್ಷೀಣವಿರುತ್ತದೆ. ಇದು ಬಲಿಷ್ಟ ಇರಬೇಕಾದರೆ, ಗ್ರಹರು ಸುಸ್ಥಾನ, ಅಸ್ತರಾಗದೆ ಇರುವುದು, ದುರ್ಬಲ ಕ್ಷೇತ್ರಗತ, ಗ್ರಹ ಯುದ್ಧ ಇಲ್ಲದೆ ಇರುವುದು ಇತ್ಯಾದಿಗಳಿಂದ ಬಲಿಷ್ಟತೆ ಬರುತ್ತದೆ. ಅಲ್ಲದೆ ಗ್ರಹರು ಪರಸ್ಪರ ವೀಕ್ಷಣೆಯಲ್ಲಿ, ಸ್ಥಾನಾದಿ ಸಪ್ತಬಲಗಳಲ್ಲಿ ಇದ್ದರೆ ಅಲ್ಲಿಯೂ ರಷ್ಮಿ ಸಂಖ್ಯೆ ವೃದ್ಧಿಸುತ್ತದೆ. ದುರ್ಬಲ ಆದರೆ ಕ್ಷೀಣಿಸುತ್ತದೆ. ಇದನ್ನು ಷಡ್ಬಲದ ಮೂಲಕ ತಿಳಿಯ ಬೇಕು. ಆದರೆ ಮೋದಿಯವರ ಜಾತಕದಲ್ಲಿ ದುಸ್ತ ಗ್ರಹರೂ ಇಲ್ಲ, ಮಹಾ ಯೋಗ ನೀಡುವ ಗ್ರಹರಿಂದ ರಷ್ಮಿ ಸಂಖ್ಯೆಯು ವೃದ್ಧಿ ಆಗಿದೆ. ಇದನ್ನು ಹರಣ- ಭರಣ ಎಂಬ ಲೆಕ್ಕಾಚಾರದಲ್ಲಿ ನೋಡಬೇಕು. ಇಂತಹ ಮೋದಿಯವರ ಜಾತಕದೆದುರು ರಾಹುಲ್ ಗಾಂಧಿಯವರ ಜಾತಕವು ಸೂರ್ಯನೆದುರು ಚಿಮಿಣಿ ದೀಪ ಇಟ್ಟಂತಾಗಿದೆ.
ಇಷ್ಟಕ್ಕೇ ಮುಗಿಯುವುದಿಲ್ಲ ಫಲ ಭಾಗ. ನಾನು ಕಳೆದ ವರ್ಷ ಲೆಕ್ಕಾಚಾರ ಮಾಡಿದ್ದು ಇಷ್ಟೇ ಎರಡು ಜಾತಕದ ಆಧಾರದಲ್ಲಿ ಮತ್ತು 2019 ರ ಚುನಾವಣಾ ವರ್ಷಾಧಾರಿತ ಲೆಕ್ಕಾಚಾರದಲ್ಲಿ ಮಾತ್ರ. ನಿಖರತೆಗೆ ನಾವು ವರ್ಷ, ತಾರೀಕು, ತಿಂಗಳುಗಳನ್ನು ತೆಗೆದುಕೊಂಡು ನೋಡಬೇಕು. ಕೆಲವೊಮ್ಮೆ ಪೂರ್ಣ ಲೆಕ್ಕಾಚಾರ ಮಾಡಲು ಹಲವು ಅನಿವಾರ್ಯತೆಗಳು ಬರುವುದರಿಂದ, ಯಾವ ಜ್ಯೋತಿಷ್ಯರಿಗೂ ನಿಖರ ಹೇಳುವುದು ಕಷ್ಟವೆ.
ಯಾರೋ ಜ್ಯೋತಿಷ್ಯವನ್ನು ಅರಿಯದವರು, ನಿಂದಿಸುವವರು ಯಾರು ಗೆಲ್ತಾರೆ ಹೇಳಿನೋಡೋಣ. ಹೇಳಿದರೆ ಕೋಟಿ ರುಪಾಯಿ ಕೊಡುತ್ತೇನೆ ಎಂದು ಹೇಳಬಹುದಷ್ಟೇ ವಿನಃ, ಜ್ಯೋತಿಷ್ಯದ ಬಗ್ಗೆ ಗೌರವ ಇರುವವರು, ನಂಬಿಕೆ ಇರುವವರು ಹಾಗೆ ಹೇಳುವುದಿಲ್ಲ. ನನಗೂ ಕೆಲ ಮೂರ್ಖರು ಚಾಲೆಂಜ್ ಹಾಕಿದ್ದಿದೆ. ನಾನು ಅಂತವರಿಗೆಲ್ಲ ಗೌರವ ಕೊಡೋದೇ ಇಲ್ಲ. ನಮ್ಮ ಪುರಾತನರು ಅವರ ಜೀವನವನ್ನೇ ಸವೆಸಿ ಮಾಡಿದಂತಹ ಶಾಸ್ತ್ರವನ್ನು ಏನೋ ಹಣದಾಸೆಗೆ, ಹೆಸರಿನ ಆಸೆಗೆ ಮಾರಿದರೆ ಮುಂದಿನ ಜನ್ಮದಲ್ಲಿ ಇವರಿಗಿಂತ ಬುದ್ಧಿಹೀನರಾಗಿ ಹುಟ್ಟಬಹುದು. ಗ್ರಹ ಸ್ಥಿತಿಯಲ್ಲೇ ಪೂರ್ವಾಪರ ಜನ್ಮ ವಿಚಾರ ತಿಳಿಸಿದೆ. ಅದನ್ನೆಲ್ಲ ಅಧ್ಯಯನ ಮಾಡಿದ ಜ್ಯೋತಿಷ್ಯರು ಎಂದೂ ಶಾಸ್ತ್ರಕ್ಕೆ ಕಳಂಕ ತರುವುದಿಲ್ಲ. ಯಾವುದೋ ಮಂತ್ರಿಗಳಿಗೆ ಸಲಹೆ ನೀಡಿ ರಾಜ ಗುರು, ರಾಜರ್ಷಿ ಬಿರುದು ಹಾಕಿಕೊಂಡವರು ಹೇಳಿದ ಚುನಾವಣಾ ಫಲಿತಾಂಶ ಏನಾಯ್ತು ಎಂಬುದನ್ನು ಜನರೇ ನೋಡುತ್ತಾರೆ.
ಇನ್ನೊಂದು ವಿಚಾರ ಇದೆ. ಎಷ್ಟೇ ರಷ್ಮಿ ಬಲ ಇದ್ದ ಜಾತಕನೂ, ಗೋಚರದಲ್ಲಿ ಅದಕ್ಕೆ ಸರಿಸಮಾನವಾಗುವ ಯೋಗ, ರಷ್ಮಿ ಗಳಿದ್ದರೆ ಮಾತ್ರ ರಾಜನಾಗುತ್ತಾನೆ. ರಾಜ ಯೋಗ ಇದ್ದಂತಹ ಪ್ರಭು ರಾಮ ಚಂದ್ರನೂ ಹದಿನಾಲ್ಕು ವರ್ಷ ವನವಾಸದಲ್ಲೇ ಕಳೆಯಬೇಕಾಯ್ತು ಎಂದರೆ ನಾವೇನು ಮಹಾ. ಇಲ್ಲಿ 23 ತಾರಿಕಿನ ರವಿಯ ಅಸ್ತಕಾಲದ ಕುಂಡಲಿ ತೋರಿಸಿದೆ. ಇದು ಒಂದು ನಿರ್ಧಾರದ ಸಮಯ. ಈವತ್ತಿನ ಗ್ರಹ ರಷ್ಮಿಯ ಧಾರಣಾ ಸಾಮರ್ಥ್ಯ ಈಗ ಇರುವವರಲ್ಲಿ ಮೋದಿಯವರಿಗೆ ಮಾತ್ರ. ರಾಹುಲ್ ಗಾಂಧಿಗೆ ಟನ್ ಭಾರ ಹೊರಿಸಿದಂತಾದೀತು ಎಂದೇ ಆತ ಸೋಲನ್ನನುಭವಿಸುವಂತಾಯ್ತು. ಒಟ್ಟಿನಲ್ಲಿ ಇದೊಂದು Modi Era.
ಮುಂದಿನ ಮಹಾ ಚುನಾವಣೆಯಲ್ಲೂ ಮೋದಿಯವರು ಇಂತಹದ್ದೇ ಗೆಲುವು ಸಾಧಿಸಿ ಮತ್ತೆರಡು ವರ್ಷಗಳ ಬಳಿಕ ಪೀಠವನ್ನು ಇನ್ನೊಬ್ಬ ಬಲಿಷ್ಟನಿಗೊಪ್ಪಿಸಿ ವಿಶ್ರಾಂತಿ ತೆಗುದುಕೊಳ್ಳುತ್ತಾರೆ. ಇದೊಂದು ಮೋದಿಯವರ ಅಖಂಡ ಸಾಮ್ರಾಜ್ಯ ಯೋಗವೂ, ರಾಜಸನ್ಯಾಸ ಯೋಗವೂ ಆಗುತ್ತದೆ. ಹಾಗಾಗಿ ಮೋದಿಯವರು ರಾಜನೂ ಹೌದು, ರಾಜ ಸನ್ಯಾಸಿಯೂ ಹೌದು. ಇದೇ ಭಾರತದ ಪುನರುತ್ಥಾನದ ಲಕ್ಷಣ. May 23, 2019 8:02:21 PM
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post