ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ದಾಖಲಿಸಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಹೊಸ್ತಿಲಿನಲ್ಲಿರುವ ವೇಳೆಯಲ್ಲಿ ವಿಶ್ವದ ಪ್ರಮುಖ ನಾಯಕರು ಮೋದಿಯವರನ್ನು ಅಭಿನಂದಿಸಿ, ಹಾಡಿ ಹೊಗಳಿದ್ದಾರೆ.
ಮೋದಿ ಅವರ ಪ್ರಚಂಡ ವಿಜಯದಿಂದ ಉಭಯತರ ನಡುವಿನ ಸ್ನೇಹ, ಸೌಹಾರ್ದದ ಸಂಬಂಧ ಇನ್ನಷ್ಟು ಗಟ್ಟಿಯಾಗುವುದೆಂಬ ವಿಶ್ವಾಸವಿದೆ. ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿರುವ ನನ್ನ ಸ್ನೇಹಿತನಿಗೆ ಹೃದಯದಾಳದ ಅಭಿನಂನೆಗಳು.
-ನೇತಾನ್ಯಾಹು, ಇಸ್ರೇಲ್ ಪ್ರಧಾನಿ
ನರೇಂದ್ರ ಮೋದಿಯವರಿಗೆ ದೊರೆತ ಅತಿದೊಡ್ಡದಾದ ಗೆಲುವು ಇದು. ನಮ್ಮ ದೇಶ ನಿಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿ, ಸಹಕಾರ ನೀಡುತ್ತ ಕೆಲಸ ಮಾಡಲು ಬಯಸುತ್ತದೆ.
-ರನಿಲ್ ವಿಕ್ರಮಸಿಂಘೆ, ಶ್ರೀಲಂಕಾ ಪ್ರಧಾನಿ
ಅಭೂತಪೂರ್ವ ಜಯ ದಾಖಲಿಸಿರುವ ಭಾರತದ ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು.
-ಕ್ಸಿ ಜಿನ್’ಪಿಂಗ್, ಚೀನಾ ಪ್ರಧಾನಿ
ನಿಮ್ಮ ಈ ವಿಜಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
-ಶಿಂಜೋ ಅಬೆ, ಜಪಾನ್ ಪ್ರಧಾನಿ
ನಿಮ್ಮ ಈ ದಿಗ್ವಿಜಯ ಸಂತಸವನ್ನು ಮೂಡಿಸಿದೆ. ನಮ್ಮೆರಡೂ ದೇಶಗಳ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ ಎಂಬ ನಂಬಿಕೆಯಿದೆ.
-ವ್ಲಾದಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು. ನಮ್ಮ ಎರಡೂ ದೇಶದ ಸರ್ಕಾರ ಹಾಗೂ ನಾಗರಿಕರ ನಡುವಿನ ವಿಶ್ವಾಸ ಹಾಗೂ ಸಂಬಂಧ ಮತ್ತಷ್ಟು ವೃದ್ಧಿಯಾಗುವುದು ಎಂದು ಬಯಸುತ್ತೇನೆ.
-ಆಶ್ರಫ್ ಘನಿ, ಆಫ್ಟನ್ ಅಧ್ಯಕ್ಷ
ಮೋದಿಯವರು ವಿಜಯಕ್ಕೆ ಅಭಿನಂದನೆಗಳು
-ಕೆ.ಪಿ. ಶರ್ಮಾ, ನೇಪಾಳ ಪ್ರಧಾನಿ
Discussion about this post