No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Sunday, April 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮೋದಿ ಅವರೊಂದಿಗೆ ನಾನೂ ಪ್ರಮಾಣವಚನ ಸ್ವೀಕರಿಸುತ್ತೇನೆ! ನೀವೂ ಸಿದ್ದರಾಗಿ: ಏನು ಪ್ರಮಾಣ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 30, 2019
in Special Articles
0
ಮೋದಿ ಅವರೊಂದಿಗೆ ನಾನೂ ಪ್ರಮಾಣವಚನ ಸ್ವೀಕರಿಸುತ್ತೇನೆ! ನೀವೂ ಸಿದ್ದರಾಗಿ: ಏನು ಪ್ರಮಾಣ?
Share on FacebookShare on TwitterShare on WhatsApp

ಒಂದು ಪ್ರೈಮರಿ ಶಾಲೆಯ ಪ್ರಾಂಶುಪಾಲರು ಪೋಷಕರ ಸಭೆ ಕರೆದು ‘ನಿಮ್ಮ ಮಕ್ಕಳನ್ನು ಪ್ರತಿದಿನ ನಾಲ್ಕು ಗಂಟೆಗೆ ಎದ್ದೇಳಿಸಿ ಓದಿಸಿ. ಆದರೆ ನೀವೂ ಸಹ ನಿದ್ದೆ ಮಾಡುವಂತಿಲ್ಲ, ಬದಲಾಗಿ ನೀವು ಸಹ ಅವರೊಂದಿಗೆ ಕುಳಿತು ಓದಿಗೆ ಪೂರಕ ವಾತಾವರಣ ಸೃಷ್ಠಿಸಿ’. ಇಂತಹ ಸಂದರ್ಭದಲ್ಲಿ ಇದರೊಂದಿಗೆ ನಿಮ್ಮಲ್ಲಿ ಮೂರು ಉದ್ದೇಶಗಳು ನೆನಪಿರಲಿ:
1. ನಿಮ್ಮ ಮಗು ಓದಿದ ಶಾಲೆಯ ಕೀರ್ತಿ
2. ನಿಮ್ಮ ಮಗುವಿನ ಕೀರ್ತಿ
3. ಹೆತ್ತದ್ದಕ್ಕೆ ಪೋಷಕರಿಗೆ ಕೀರ್ತಿ
ಇದೇ ಪ್ರಕಾರದಲ್ಲಿ ನಾವು ಆರಿಸಿ ಕಳುಹಿಸಿರುವ ನರೇಂದ್ರ ಮೋದಿಯವರು ಇಂದು ದೇಶದ 16ನೆಯ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ದೇಶದ ಅತ್ಯುನ್ನತ ಹುದ್ದೆಗೆ ಅವರು ಪ್ರತಿಜ್ಞಾವಿಧಿ ಪಡೆಯುತ್ತಿರುವ ಈ ವೇಳೆ ಅವರನ್ನು ಆರಿಸಿ ಕಳುಹಿಸಿರುವ ನಾವು ಅಂದರೆ ಸಾಮಾನ್ಯ ಜನಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ನಾವೇಕೆ ಪ್ರಮಾಣವಚನ ಸ್ವೀಕರಿಸಬಾರದು? 2014ರಂತೆಯೇ ಈಗಲೂ ಸಹ ಅತ್ಯುತ್ತಮ ವ್ಯಕ್ತಿಯನ್ನು ದೇಶದ ಪ್ರಧಾನಿಯನ್ನಾಗಿ ಆರಿಸಿ ಕಳುಹಿಸಿದ್ದೇವೆ. ಹೀಗಿರುವಾಗಿ, ಇಂತಹ ಪ್ರಧಾನಿಯ ದೇಶಾಭಿವೃದ್ಧಿ ಸತ್ಕಾರ್ಯಗಳಿಗೆ ನಿರಂತರ ಬೆಂಬಲವಾಗಿ ನಿಲ್ಲುವುದು, ಮೋದಿಯವರ ಚಿಂತನೆ ಹಾಗೂ ನಡೆಗಳಿಗೆ ಪೂರಕವಾಗಿ ನಮ್ಮ ಕಾರ್ಯಗಳನ್ನು ರೂಪಿಸಿಕೊಂಡು ಅವರಿಗೆ ಬೆಂಬಲ ನೀಡುವುದು ಈ ದೇಶದ ಪ್ರತಿ ಪ್ರಜೆಯ ಕರ್ತವ್ಯವೇ ಹೌದು. ಹೀಗಿರುವಾಗಿ, ಇಂತಹ ಒಂದು ಕಾರ್ಯಕ್ಕೆ ನಮ್ಮನ್ನು ನಾವೇ ಕಂಕಣಬದ್ಧಗೊಳಿಸಿಕೊಳ್ಳಲು ಮೋದಿ ಅವರೊಂದಿಗೇ ನಾವೂ ಸಹ ಅವರಿಗೆ ಬೆಂಬಲ ನೀಡುವ ಪ್ರಮಾಣವಚನವನ್ನು ಸ್ವೀಕರಿಸುವ ಅಗತ್ಯವಿದೆ. ಇಂತಹ ಒಂದು ಪರ್ವವನ್ನು ಇಂದು ಆರಂಭಿಸೋಣ.

ಸಾಮಾನ್ಯ ನಾಗರಿಕರು ಏನು ಪ್ರಮಾಣವಚನ ಮಾಡಬಹುದು?
................. ಎಂಬ ಹೆಸರಿನವನಾದ ನಾನು, ಭಾರತ ದೇಶದ ಪ್ರಜೆಯಾಗಿ, ಭಾರತದ ಘನ ಸಂವಿಧಾನ ನನಗೆ ನೀಡಿರುವ ಹಕ್ಕು ಹಾಗೂ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
ನನ್ನ ಪರ್ಯಾಲೋಚನೆಗೆ ಬರತಕ್ಕ ಯಾವುದೇ ದೇಶವಿರೋಧಿ, ಸಮಾಜ ವಿರೋಧಿ, ಕಾನೂನು ವಿರೋಧಿ ಕೃತ್ಯಗಳನ್ನು ಮಾಡುವುದಿಲ್ಲ.
ದೇಶದ ಪ್ರಧಾನಿಯನ್ನಾಗಿ ಮೋದಿಯವರನ್ನು ಆರಿಸಿ ಕಳುಹಿಸಿದ್ದೇವೆ. ನೀವು ದೇಶಕ್ಕೆ ಕೀರ್ತಿ ತರುವ ರೀತಿಯಲ್ಲಿ ಉತ್ತಮ ಆಡಳಿತ ನೀಡುವ ಹಾದಿಯ ಈ ಸತ್ಕಾರ್ಯದಲ್ಲಿ ನಾವೂ ಸಹ ಮೋದಿಯವರೊಂದಿಗೆ ಸದಾ ಇರುತ್ತೇನೆ.
ಶತ್ರುಗಳಿಂದ ದೇಶವನ್ನು ರಕ್ಷಿಸುವ ಮಹತ್ಕಾರ್ಯದ ಯಾವುದೇ ಹಂತದಲ್ಲಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆಗೆ ಬೆಂಬಲವಾಗಿ ನಿಲ್ಲುತ್ತೇನೆ.
ದೇಶದ ಒಳಿತಿಗಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲ ಉತ್ತಮ ನಿರ್ಧಾರಗಳಿಗೆ ಪೂರಕವಾಗಿ, ನಿಸ್ವಾರ್ಥತೆಯಿದ ನಡೆದುಕೊಳ್ಳುತ್ತೇನೆ.
ಸರ್ಕಾರದ ಯಾವುದೇ ನಿರ್ಧಾರ ಜನವಿರೋಧಿ ಎನಿಸಿದರೆ ಅದನ್ನು ಬದಲಾವಣೆ ಮಾಡುವಂತೆ ಅತ್ಯಂತ ಉತ್ತಮ ರೀತಿಯಲ್ಲಿ ಸರ್ಕಾರಕ್ಕೆ ತಿಳಿಸುತ್ತೇವೆ.
ದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಿಯವರು ಕೈಗೊಳ್ಳುವ ಯಾವುದೇ ಕಠಿಣ ನಿರ್ಧಾರದಿಂದ ನನಗೆ ವೈಯಕ್ತಿಕ ತೊಂದರೆಯಾದರೂ ಅದನ್ನು ಸಹಿಸಿಕೊಂಡು, ದೇಶಕ್ಕಾಗಿ ತ್ಯಾಗ ಮಾಡುತ್ತೇನೆ.
ದೇಶವಾಸಿಗಳು ಹಿತಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿ, ಜಾರಿಗೊಳಿಸುವ ಯಾವುದೇ ಯೋಜನೆಗಳನ್ನು ನನ್ನ ಕೈಲಾದಷ್ಟರ ಮಟ್ಟಿಗೆ ಜನರಿಗೆ ತಲುಪಿಸುವ ಕಾರ್ಯವನ್ನು ಸ್ವಯಂ ಪ್ರೇರಿತನಾಗಿ ಮಾಡುತ್ತೇನೆ.
ಕೇಂದ್ರ ಸರ್ಕಾರದ ಯಾವುದೇ ನಿರ್ಧಾರದಿಂದ ಸಮಾಜಕ್ಕೆ ತೊಂದರೆಯಾದರೆ ಅದನ್ನು ಕಾನೂನಾತ್ಮಕವಾಗಿ ವಿರೋಧಿಸಿ ಹೋರಾಡುತ್ತೇನೆಯೇ ವಿನಾ ನನ್ನ ವೈಯಕ್ತಿಕ ಸ್ವಾರ್ಥಕ್ಕಾಗಿ ಪ್ರಜೆಗಳಿಗೆ ತೊಂದರೆ ನೀಡುವುದಿಲ್ಲ.
ಅಂತಿಮವಾಗಿ 2024ರ ಚುನಾವಣೆಯಲ್ಲೂ ಸಹ ನರೇಂದ್ರ ಮೋದಿ ಅವರನ್ನೇ ಪ್ರಧಾನಿಯನ್ನಾಗಿಸಲು ಈ ಕ್ಷಣದಿಂದಲೇ ನನ್ನ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಯತ್ನಗಳನ್ನು ಮಾಡುತ್ತೇನೆ. 
ನಾನು ಇಷ್ಟ ಪಟ್ಟು ಆಯ್ಕೆ ಮಾಡಿರುವ ವ್ಯಕ್ತಿ ದೇಶದ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಪಡೆಯುತ್ತಿರುವ ಈ ಸಂದರ್ಭದಲ್ಲಿಯೇ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ನಾನೂ ಸಹ ಈ ಮೇಲಿನ ವಾಗ್ದಾನಗಳಿಗೆ ಬದ್ಧನಾಗಿ ನಡೆದುಕೊಳ್ಳುತ್ತೇನೆ ಎಂದು ಈ ಶುಭ ಮುಹೂರ್ತದಲ್ಲಿ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. 
ಜೈ ಹಿಂದ್
ಭಾರತ್ ಮಾತಾ ಕೀ ಜೈ
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಈ ರೀತಿ ಪ್ರಮಾಣವಚನ ಸ್ವೀಕರಿಸಬಹುದು:
................. ಎಂಬ ಹೆಸರಿನವನಾದ ನಾನು, ಭಾರತ ದೇಶದ ಪ್ರಜೆಯಾಗಿ, ಭಾರತದ ಘನ ಸಂವಿಧಾನ ನನಗೆ ನೀಡಿರುವ ಹಕ್ಕು ಹಾಗೂ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
ನನ್ನ ಪರ್ಯಾಲೋಚನೆಗೆ ಬರತಕ್ಕ ಯಾವುದೇ ದೇಶವಿರೋಧಿ, ಸಮಾಜ ವಿರೋಧಿ, ಕಾನೂನು ವಿರೋಧಿ ಕೃತ್ಯಗಳನ್ನು ಮಾಡುವುದಿಲ್ಲ.
ಅತ್ಯುತ್ತಮ ವ್ಯಕ್ತಿ ಪ್ರಧಾನಿಯಾಗಲು ಬಿಜೆಪಿ ನಾಯಕ/ಕಾರ್ಯಕರ್ತನಾಗಿ ತಿಂಗಳುಗಳ ಕಾಲ ಶ್ರಮಿಸಿರುವ ನಾನು ಇನ್ನು ಮುಂದೆಯೇ ಮೋದಿಯವರ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ನಡೆದುಕೊಳ್ಳುತ್ತೇನೆ.
ಮೋದಿಯವರು ಕೈಗೊಳ್ಳುವ ಯಾವುದೇ ಜನಪರ ಯೋಜನೆಗಳನ್ನು ನನ್ನ ಕಾರ್ಯಕ್ಷೇತ್ರ ವ್ಯಾಪ್ತಿಯ ಕಟ್ಟಕಡೆಯ ವ್ಯಕ್ತಿಗೂ ಸಹ ತಿಳಿಸಿಹೇಳುವ ಕಾರ್ಯವನ್ನು ನಿರಂತರವಾಗಿ ಮಾಡುತ್ತೇನೆ.
ಮೋದಿಯವರು ಕೈಗೊಳ್ಳುವ ಯಾವುದೇ ನಿರ್ಧಾರದಿಂದ ಸಾರ್ವಜನಿಕರಿಗೆ ತೊಂದರೆಯುಂಟಾದರೆ ಅದನ್ನು ಜನಸಾಮಾನ್ಯರಿಗೆ ತಿಳಿಸಿ ಹೇಳಿ, ಮನವೊಲಿಸುವ ಕಾರ್ಯವನ್ನು ಮಾಡುತ್ತೇನೆ.
ಕೇಂದ್ರ ಸರ್ಕಾರದಿಂದ ಜಾರಿಯಾಗುವ ಯಾವುದೇ ಯೋಜನೆಗಳ ಸಮರ್ಪಕ ಜಾರಿಗೆ ಸಂಪೂರ್ಣ ಸಹಕಾರ ನೀಡುವ ಜೊತೆಯಲ್ಲಿ ಆ ಯೋಜನೆಯ ದುರುಪಯೋಗ ಹಾಗೂ ಸ್ವಾರ್ಥ ಬಳಕೆಗೆ ನಾನು ಯತ್ನಿಸುವುದಿಲ್ಲ.
ದೇಶಾಭಿವೃದ್ಧಿಗಾಗಿ ಮೋದಿಯವರು ಎಂತಹ ಕಠಿಣ ನಿರ್ಧಾರ ಕೈಗೊಂಡು ಅದರಿಂದ ನನಗೆ ವೈಯಕ್ತಿಕವಾಗಿ ತೊಂದರೆಯುಂಟಾದರೂ ಸಹ ಅದರಿಂದಾಗಿ ನಾನು ಪಕ್ಷವನ್ನು ತೊರೆಯುವುದಿಲ್ಲ.
ಕೇಂದ್ರ ಸರ್ಕಾರದ ಯಾವುದೇ ನಿರ್ಧಾರದಿಂದ ಸಮಾಜಕ್ಕೆ ತೊಂದರೆಯಾದರೆ ಅದನ್ನು ಕಾನೂನಾತ್ಮಕವಾಗಿ ವಿರೋಧಿಸಿ ಹೋರಾಡುತ್ತೇನೆಯೇ ವಿನಾ ನನ್ನ ವೈಯಕ್ತಿಕ ಸ್ವಾರ್ಥಕ್ಕಾಗಿ ಪ್ರಜೆಗಳಿಗೆ ತೊಂದರೆ ನೀಡುವುದಿಲ್ಲ.
ಅಂತಿಮವಾಗಿ 2024ರ ಚುನಾವಣೆಯಲ್ಲೂ ಸಹ ನರೇಂದ್ರ ಮೋದಿ ಅವರನ್ನೇ ಪ್ರಧಾನಿಯನ್ನಾಗಿಸಲು ಈ ಕ್ಷಣದಿಂದಲೇ ನನ್ನ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಯತ್ನಗಳನ್ನು ಮಾಡುತ್ತೇನೆ. 
ನಾನು ಇಷ್ಟ ಪಟ್ಟು ಆಯ್ಕೆ ಮಾಡಿರುವ ವ್ಯಕ್ತಿ ದೇಶದ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಪಡೆಯುತ್ತಿರುವ ಈ ಸಂದರ್ಭದಲ್ಲಿಯೇ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ನಾನೂ ಸಹ ಈ ಮೇಲಿನ ವಾಗ್ದಾನಗಳಿಗೆ ಬದ್ಧನಾಗಿ ನಡೆದುಕೊಳ್ಳುತ್ತೇನೆ ಎಂದು ಈ ಶುಭ ಮುಹೂರ್ತದಲ್ಲಿ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. 
ಜೈ ಹಿಂದ್
ಭಾರತ್ ಮಾತಾ ಕೀ ಜೈ
ಪ್ರತಿಪಕ್ಷಗಳ ನಾಯಕರು/ಕಾರ್ಯಕರ್ತರೂ ಸಹ ಹೀಗೆ ಪ್ರಮಾಣವಚನ ಸ್ವೀಕರಿಸಬಹುದು:
................. ಎಂಬ ಹೆಸರಿನವನಾದ ನಾನು, ಭಾರತ ದೇಶದ ಪ್ರಜೆಯಾಗಿ, ಭಾರತದ ಘನ ಸಂವಿಧಾನ ನನಗೆ ನೀಡಿರುವ ಹಕ್ಕು ಹಾಗೂ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
ನನ್ನ ಪರ್ಯಾಲೋಚನೆಗೆ ಬರತಕ್ಕ ಯಾವುದೇ ದೇಶವಿರೋಧಿ, ಸಮಾಜ ವಿರೋಧಿ, ಕಾನೂನು ವಿರೋಧಿ ಕೃತ್ಯಗಳನ್ನು ಮಾಡುವುದಿಲ್ಲ.
ಜನಾದೇಶದಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರನ್ನು ವೈಯಕ್ತಿಕವಾಗಿ, ಕೀಳುಮಟ್ಟದಲ್ಲಿ ನಿಂದನೆ ಮಾಡುವುದಿಲ್ಲ.
ದೇಶಾಭಿವೃದ್ಧಿ ಹಾಗೂ ರಾಷ್ಟ್ರದ ಹಿತಕ್ಕಾಗಿ ಮೋದಿ ಸರ್ಕಾರ ಕೈಗೊಳ್ಳುವ ಯಾವುದೇ ಉತ್ತಮ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ.
ಸಣ್ಣಪುಟ್ಟ ವಿಚಾರಗಳಿಗೆ ಕೀಳುಮಟ್ಟದಲ್ಲಿ ಜರಿಯದೇ, ಗೌರವ ರೀತಿಯಲ್ಲಿ ತಿಳಿಹೇಳುತ್ತೇನೆ.
ಸರ್ಕಾರ ತಪ್ಪು ಮಾಡಿದೆ ಎಂದೆನಿಸಿದಾಗ ಅದಕ್ಕಾಗಿ ಅರ್ಥವಿಲ್ಲದ ಮಾರ್ಗದಲ್ಲಿ ಹೋರಾಟ ಮಾಡುವ ಬದಲಾಗಿ ರಚನಾತ್ಮಕ ಟೀಕೆ ಹಾಗೂ ಸಲಹೆಗಳ ಮೂಲಕ ತಿಳಿ ಹೇಳುವ ಪ್ರಯತ್ನ ಮಾಡುತ್ತೇನೆ.
ಸರ್ಕಾರದ ನಿರ್ಧಾರ ಸಮಾಜಕ್ಕೆ ಮಾರಕವಾಗಿದ್ದರೆ ಅದನ್ನು ಕಾನೂನಾತ್ಮಕವಾಗಿ ವಿರೋಧಿಸುತ್ತೇನೆಯೇ ಹೊರತು, ಅದಕ್ಕಾಗಿ ಬಂದ್, ಗಲಭೆಯಂತಹ ಕೃತ್ಯಕ್ಕೆ ಕೈ ಹಾಕಿ, ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟವುಂಟು ಮಾಡುವುದಿಲ್ಲ.
ದೇಶವಾಸಿಗಳ ತೆರಿಗೆ ಹಣದಿಂದ ನಡೆಯುವ ಸಂಸತ್ ಅಧಿವೇಶನದಲ್ಲಿ ಅನಾವಶ್ಯಕ ಗದ್ದವೆಬ್ಬಿಸಿ, ಸದನದ ಅಮೂಲ್ಯ ಸಮಯವನ್ನು ಹಾಳು ಮಾಡುವುದಿಲ್ಲ. ಬದಲಾಗಿ, ರಚನಾತ್ಮಕವಾಗಿ ಕೆಲಸ ಮಾಡುವ ಜೊತೆಯಲ್ಲಿ, ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕರ್ತವ್ಯ ನಿರ್ವಹಿಸುತ್ತೇವೆ.
ಸಂಸತ್ ಅಧಿವೇಶನದ ಸಂವಾದ ನನಗೆ ಇಷ್ಟವಿಲ್ಲದೇ ಇದ್ದಲ್ಲಿ ನಿದ್ಧೆ ಮಾಡುವುದಿಲ್ಲ. ಈ ಮೂಲಕ ಸದನಕ್ಕೆ ಅಗೌರವ ತರುವುದಿಲ್ಲ. 
ಭಾರತದ ಘನ ಸಂವಿಧಾನ ನೀಡಿರುವ ಜವಾಬ್ದಾರಿಗೆ ಧಕ್ಕೆ ಬಾರದಂತೆ, ಚುನಾವಣೆಯಲ್ಲಿ ಜನಾದೇಶ ನೀಡುವಂತೆ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ನಮ್ಮ ಕರ್ತವ್ಯವನ್ನು ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ, ಈ ಶುಭ ಮುಹೂರ್ತದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.
ಜೈ ಹಿಂದ್
ಭಾರತ್ ಮಾತಾ ಕೀ ಜೈ

-ಎಸ್.ಆರ್. ಅನಿರುದ್ಧ ವಸಿಷ್ಠ

Tags: BJPcongressConstitution of IndiaElection Result 2019IndiaKannada NewsLok Sabha election 2019Oath TakingPM Narendra Modiಪ್ರತಿಜ್ಞಾವಿಧಿಪ್ರಧಾನಿ ನರೇಂದ್ರ ಮೋದಿಪ್ರಮಾಣ ವಚನ
Share196Tweet123Send
Previous Post

ಚಳ್ಳಕೆರೆ: ಬಿಸಿಲ ಬೇಗೆ ತಣಿಸೋ ಕಲ್ಲಂಗಡಿ ಬರಗಾಲದಲ್ಲಿಯೂ ಬಂಪರ್ ಬೆಳೆ

Next Post

ದೈಹಿಕ ನ್ಯೂನ್ಯತೆಯ ನಡುವೆಯೂ ಬಳ್ಳಾರಿಯ ಈ ‘ಉತ್ತೇಜ್’ ಮಾಡಿದ ಸಾಧನೆ ಎಂತಹುದ್ದು ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ದೈಹಿಕ ನ್ಯೂನ್ಯತೆಯ ನಡುವೆಯೂ ಬಳ್ಳಾರಿಯ ಈ ‘ಉತ್ತೇಜ್’ ಮಾಡಿದ ಸಾಧನೆ ಎಂತಹುದ್ದು ಗೊತ್ತಾ?

ದೈಹಿಕ ನ್ಯೂನ್ಯತೆಯ ನಡುವೆಯೂ ಬಳ್ಳಾರಿಯ ಈ ‘ಉತ್ತೇಜ್’ ಮಾಡಿದ ಸಾಧನೆ ಎಂತಹುದ್ದು ಗೊತ್ತಾ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಸಂಗೀತ ಲೋಕದ ಧ್ರುವತಾರೆ, ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಸಂಗೀತ ಲೋಕದ ಧ್ರುವತಾರೆ, ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!