No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Sunday, August 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಯೋಗ ದಿನದ ಹಿಂದಿರುವ ಆ ಶಕ್ತಿಗೆ “ನಮೋ” ನಮಃ

ಅಂತರಾಷ್ಟ್ರೀಯ ಯೋಗ ದಿನ #YogaDay2019

kalpa News by kalpa News
June 21, 2019
in Special Articles
0
ಯೋಗ ದಿನದ ಹಿಂದಿರುವ ಆ ಶಕ್ತಿಗೆ “ನಮೋ” ನಮಃ
Share on FacebookShare on TwitterShare on WhatsApp

ಎಲ್ಲಿ ನೋಡಿದರೂ ಯೋಗ ಯೋಗ ಯೋಗ. ಯಾವ ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣಗಳ ನೋಡಿದರೂ ಜನ ಯೋಗದೆಡೆಗೆ ಮುಗಿ ಬಿದ್ದಿದ್ದಾರೆ. ಯೋಗದ ಹಿನ್ನೆಲೆ, ಪ್ರಯೋಜನಗಳು ಮತ್ತು ಸಾಧಕರ ಸಾಲು ಸಾಲು ಸುದ್ದಿಗಳು. ಮುಖ್ಯವಾದ ವ್ಯಕ್ತಿಯನ್ನು ಮರೆತಿದ್ದೇವೆ.

ಇವತ್ತು ಜಗತ್ತು ಈ ಪರಿ ಯೋಗದ ಆರಾಧನೆ ಮಾಡಲು ಯಾರು ಕಾರಣ? ಭಾರತೀಯ ಸನಾತನ ಧರ್ಮದ ಯೋಗವನ್ನು ಈ ದಿನ ವಿಶ್ವವೇ ಆಚರಿಸುತ್ತಿದೆ ಎಂದಾಗ ಹಿಂದಿರುವ ಆ ಶಕ್ತಿಗೆ ನಮೋ ನಮಃ ಎಂದು ಹೇಳದೇ ಬಿಟ್ಟರೆ ಹೇಗೆ? ಹಾಂ.. ನರೇಂದ್ರ ಮೋದಿಯವರು. ಭಾರತ ಕಂಡಂತಹ ಅದ್ವಿತೀಯ ಪ್ರಧಾನಿ.

ಫ್ರಾನ್ಸ್‌ನ ಐಫೆಲ್ ಟವರ್, ಒಪೆರಾ ಹೌಸ್ ಆಸ್ಟ್ರೇಲಿಯ, ಕಾಂಬೋಡಿಯಾದ ಆಂಗ್ಕೊರ್ ಟೆಂಪಲ್ ಮತ್ತು ಜಿಂಬಾಬ್ವೆಯ ವಿಕ್ಟೋರಿಯಾ ಫಾಲ್ಸ್ ಬ್ರಿಡ್ಜ್ ಸೇರಿದಂತೆ ಜಗತ್ಪ್ರಸಿದ್ಧ ಸ್ಥಳಗಳಲ್ಲಿ ಈ ವರ್ಷ ಜನರು ಯೋಗದ ಮುಂದೆ ತಲೆ ಬಾಗಲಿದ್ದಾರೆ. ಭಾರತದ ರಾಂಚಿಯಲ್ಲಿ ಅದ್ದೂರಿ ಯೋಗ ದಿನ ಆಚರಿಸಲಾಗುತ್ತದೆ. 1893 ರಲ್ಲಿ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಚಿಕಾಗೊದ ವಿಶ್ವಧರ್ಮ ಸಮ್ಮೇಳನದಲ್ಲಿ ಯೋಗದ ಕುರಿತು ಮಾಹಿತಿ ನೀಡಿದ್ದರು. ಆದರೆ 2015 ರ ತನಕವೂ ಭಾರತವನ್ನು ತಿಳಿದವರ ಹೊರತು ಪಡಿಸಿ ಅದು ಬಿಡಿ ಹೆಚ್ಚಿನ ಭಾರತೀಯರಿಗೂ ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳ ಮಹತ್ವ ತಿಳಿಸಲು ಯೋಗ ದಿನ ಬರಬೇಕಾಯಿತು.

ಸೆಪ್ಟೆಂಬರ್ 27, 2014ರ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗದ ದಿನದ ಪ್ರಸ್ತಾಪ ಮಾಡಿದ್ದರು. ಭಾರತದಲ್ಲಿ ಹುಟ್ಟಿದ ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಾಧನೆಯಾಗಿದ್ದು ಅದರ ಕುರಿತು ಅಧ್ಭುತವಾಗಿ ಅರಿವು ಮೂಡಿಸಿದರು. “ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ನೆರವೇರಿಕೆ; ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ; ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನ. ಇದು ವ್ಯಾಯಾಮದ ಬಗ್ಗೆ ಅಲ್ಲ, ನಿಮ್ಮೊಂದಿಗೆ, ಜಗತ್ತು ಮತ್ತು ಪ್ರಕೃತಿಯೊಂದಿಗೆ ಏಕತೆಯ ಭಾವವನ್ನು ಕಂಡುಹಿಡಿಯುವುದು. ನಮ್ಮ ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಮತ್ತು ಪ್ರಜ್ಞೆಯನ್ನು ಸೃಷ್ಟಿಸುವ ಮೂಲಕ, ಅದು ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ.

ಅಂತರರಾಷ್ಟ್ರೀಯ ಯೋಗ ದಿನವನ್ನು ಅಳವಡಿಸಿಕೊಳ್ಳಲು ನಾವು ಕೆಲಸ ಮಾಡೋಣ.” ಎಂದರು. ಮುಂದುವರಿದಂತೆ, ಯೋಗದ ಮೂಲ ಭಾರತದ ಪರಂಪರೆಗಳೊಂದಿಗೆ ಮಿಳಿತಗೊಂಡಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಪತಂಜಲಿ ಮಹರ್ಷಿಗಳನ್ನು ನಾವು ಯೋಗ ಪಿತಾಮಹ ಎಂದರೂ ಪುರಾಣಗಳಲ್ಲಿ ಆದಿಯೋಗಿ ಶಿವನ ಮತ್ತು ಯೋಗದ ಐತಿಹ್ಯವಿದೆ ಎಂದರು.

ಯಾವ ಪರಿಯಲ್ಲಿ ನರೇಂದ್ರ ಮೋದಿಯವರು ಮಾತುಗಳು ಪ್ರಭಾವ ಬೀರಿದವು ಎಂದರೆ ಅದೇ ವರ್ಷದ ಡಿಸೆಂಬರ್ 11ರಂದು ಭಾರತದ ಖಾಯಂ ಪ್ರತಿನಿಧಿ ಅಶೋಕ್ ಮುಖರ್ಜಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗ ದಿನದ ಕರಡು ನಿರ್ಣಯವನ್ನು ಪರಿಚಯಿಸಿದರು. ಕರಡು ಪ್ರತಿಗೆ 177 ಸದಸ್ಯ ರಾಷ್ಟ್ರಗಳಿಂದ ವ್ಯಾಪಕ ಬೆಂಬಲವನ್ನು ಸಿಕ್ಕಿತು. ಅದನ್ನು ಯಾವುದೇ ಆಕ್ಷೇಪಣೆ ಇಲ್ಲದೆ ಸ್ವೀಕರಿಸಲಾಯಿತು. ಸಹಿ ಹಾಕಿದ ಒಟ್ಟು 177 ರಾಷ್ಟ್ರಗಳು ಈ ನಿರ್ಣಯವನ್ನು ಸಹ-ಪ್ರಾಯೋಜಿಸಿದವು. ಇದು ವಿಶ್ವಸಂಸ್ಥೆಯ ಸಾಮಾನ್ಯಸಭೆಯ ನಿರ್ಣಯಕ್ಕೆ ಸಹ-ಪ್ರಾಯೋಜಕರಲ್ಲಿ ಇತಿಹಾಸದಲ್ಲಿ ಅತಿ ಹೆಚ್ಚು. ವಿಶ್ವಸಂಸ್ಥೆ ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಭಾರತದ ಹಲವಾರು ಆಧ್ಯಾತ್ಮಿಕ ಚಿಂತಕರು ಈ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇಶಾ ಫೌಂಡೇಶನ್ ಸ್ಥಾಪಕ, ಸದ್ಗುರು ಜಗ್ಗೀ ವಾಸುದೇವ್, “ಈ ಒಂದು ಅಡಿಪಾಯ ಒಂದು ರೀತಿಯ ಮಾನವ ಒಳ ಯೋಗಕ್ಷೇಮಕ್ಕೆ ವೈಜ್ಞಾನಿಕ ವಿಧಾನವನ್ನು ಮಾಡಲು ಆಗಿರಬಹುದು, ವಿಶ್ವಾದ್ಯಂತ ಪ್ರಚಂಡ ಹೆಜ್ಜೆ ಇಲ್ಲಿದೆ” ಎಂದರು. ಸ್ಥಾಪಕ ಆರ್ಟ್ ಆಫ್ ಲಿವಿಂಗ್, ರವಿಶಂಕರ್ ಮೋದಿ ಪ್ರಯತ್ನಗಳ ಕುರಿತು “ಆಡಳಿತದ ಪ್ರೋತ್ಸಾಹವಿಲ್ಲದೆ ಬದುಕಲು ಯಾವುದೇ ತತ್ವಶಾಸ್ತ್ರ, ಧರ್ಮ ಅಥವಾ ಸಂಸ್ಕೃತಿಗೆ ಬಹಳ ಕಷ್ಟ ಸಾಧ್ಯ. ಯೋಗ ಇಷ್ಟು ದಿನ ಅನಾಥ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿತ್ತು. ಈಗ, ವಿಶ್ವಸಂಸ್ಥೆಯ ಅಧಿಕೃತ ಮಾನ್ಯತೆ ಯೋಗದ ಪ್ರಯೋಜನವನ್ನು ಇಡೀ ಜಗತ್ತಿಗೆ ಮತ್ತಷ್ಟು ಹರಡುತ್ತದೆ” ಎಂದರು.

ಜೂನ್ 21 ಅನ್ನು ವಿಶ್ವ ಯೋಗದಿನದ ದಿನಾಂಕವೆಂದು ಪ್ರಸ್ತಾಪಿಸಲು ಕಾರಣ, ಈ ದಿನಾಂಕವು ಉತ್ತರ ಗೋಳಾರ್ಧದಲ್ಲಿ (ದಕ್ಷಿಣ ಗೋಳಾರ್ಧದಲ್ಲಿ ಕಡಿಮೆ) ವರ್ಷದ ಅತಿ ಉದ್ದದ ದಿನವಾಗಿದೆ. ಇದು ವಿಶ್ವದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಆದ್ದರಿಂದ ವಿಶ್ವ ಯೋಗ ದಿನ ಆಚರಿಸಲಾಗುತ್ತದೆ. ಇದರ ಸವಿ ನೆನಪಾಗಿ 2015 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹತ್ತು ರೂಪಾಯಿ ನಾಣ್ಯಗಳನ್ನು ಬಿಡುಗಡೆ ಮಾಡಿತು. ಜೂನ್ 21, 2015 ರಲ್ಲಿ ಮೊದಲ ಬಾರಿ ಯೋಗ ದಿನ ಭಾರತದಲ್ಲಿ ದೆಹಲಿಯ ರಾಜಪಥದಲ್ಲಿ ಆಚರಿಸಿದರು. ಆಯುಷ್ ಸಚಿವಾಲಯವು ಭಾರತದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿತು. 35.985 ಜನರು ಪಾಲ್ಗೊಂಡಿದ್ದರು. ನರೇಂದ್ರ ಮೋದಿಯವರು ಸೇರಿದಂತೆ ಮತ್ತು 84 ರಾಷ್ಟ್ರಗಳಿಂದ ಗಣ್ಯರು ಭಾಗವಹಿಸಿದ್ದರು. 21 ಆಸನಗಳನ್ನು 35 ನಿಮಿಷಗಳ ಕಾಲ ದೆಹಲಿಯ ರಾಜಪಥದಲ್ಲಿ ನಡೆಸಲಾಯಿತು. ಈ ದಿನವನ್ನು ವಿಶ್ವದಾದ್ಯಂತ ಲಕ್ಷಾಂತರ ಜನರು ಆಚರಿಸಿದರು.

ಎನ್‌ಸಿಸಿ ಕೆಡೆಟ್‌ಗಳು ಅನೇಕ ಸ್ಥಳಗಳಲ್ಲಿ ಪ್ರದರ್ಶನ ನೀಡುವ ಮೂಲಕ “ಏಕರೂಪದ ಯುವ ಸಂಘಟನೆಯಿಂದ ಏಕಕಾಲದಲ್ಲಿ ಅತಿದೊಡ್ಡ ಯೋಗ ಪ್ರದರ್ಶನಕ್ಕಾಗಿ” ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿದರು. ರಾಜಪಥದಲ್ಲಿ ನಡೆದ ಈ ಘಟನೆಯು ಆಯುಷ್ ಸಚಿವಾಲಯಕ್ಕೆ ನೀಡಲಾದ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿತು ಮತ್ತು ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಅವರಿಂದ ಸ್ವೀಕರಿಸಲ್ಪಟ್ಟಿತು. ಹೀಗೆ ಆರಂಭವಾದ ಯೋಗ ದಿನ ಈ ಈ ವರ್ಷ ಐದನೆಯ ಆವೃತ್ತಿಯಲ್ಲಿ “ಹೃದಯಕ್ಕಾಗಿ ಯೋಗ” ಎಂಬ ಥೀಮ್‌ನಡಿ ಜಾರ್ಖಂಡ್‌ ರಾಜ್ಯದ ರಾಂಚಿಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಜೂನ್ 5 ರಿಂದ #YogaDay2019 ಅಡಿ ಪ್ರತಿ ದಿನ ಯೋಗಾಸನಗಳ ಆ್ಯನಿಮೇಟೆಡ್ ವಿಡಿಯೋಗಳನ್ನು ಹಾಕುತ್ತಿದ್ದಾರೆ.

ಚುನಾವಣೆ, ರಾಜಕೀಯ ಎಲ್ಲದಕ್ಕೂ ಒಂದು ವಿರಾಮ ನೀಡಿದ ನರೇಂದ್ರ ಮೋದಿಯವರು ಅರಸಿ ಹೊರಟ್ಟದ್ದು ಧ್ಯಾನವನ್ನು. ಅವರಿಗೆ ಮನಸ್ಸಿನ ಶಾಂತಿಗೆ ವಿದೇಶಗಳಿಗೆ ಓಡುವ ಅವಶ್ಯಕತೆ ಇರಲಿಲ್ಲ. ಯೋಗದ ಹಿನ್ನೆಲೆಯನ್ನು ಅರಿತು ಈ ರೀತಿಯಲ್ಲಿ ಜಗತ್ತು ಆರಾಧಿಸಲು ಕಾರಣ ನಿಸ್ಸಂಶಯವಾಗಿ ಪ್ರಧಾನಿ ಮೋದಿಯವರು. ಬಡ ರಾಷ್ಟ್ರಗಳ ತುಳಿದು, ಸೇನಾ ದಾಳಿ ಮಾಡಿ, ಯಥೇಚ್ಛ ಸಾಲಗಳನ್ನು ನೀಡಿ ವಿಶ್ವದ ಹಿರಿಯ ಎನ್ನಿಸಿಕೊಳ್ಳುವ ಪರಂಪರೆ ಭಾರತದ್ದಲ್ಲ. ಹಿಂದೂಸ್ಥಾನ ಇದೇ ಹಾದಿಯಲ್ಲಿ ನಡೆಯಲಿದೆ. ನಮೋ ಅವರ ಬೆಂಗಾವಲಿನಲ್ಲಿ ವಿಶ್ವಗುರು ಆಗಲಿದೆ.

ವಿಶ್ವ ಯೋಗದಿನದ ಶುಭಾಶಯಗಳು

-ಲೇಖನ: ಸಚಿನ್ ಪಾರ್ಶ್ವನಾಥ್, 
 ಬ್ಯಾಕೋಡು, ಸಾಗರ(ತಾ.), ಶಿವಮೊಗ್ಗ

Tags: International Yoga DayKannada ArticlePatanjali MaharshiPM Narendra ModiSpecial ArticleYoga Day ArticleYogaDay2019ಅಂತಾರಾಷ್ಟ್ರೀಯ ಯೋಗ ದಿನಪತಂಜಲಿ ಮಹರ್ಷಿಪ್ರಧಾನಿ ನರೇಂದ್ರ ಮೋದಿಭಾರತೀಯ ರಿಸರ್ವ್ ಬ್ಯಾಂಕ್ವಿಶ್ವ ಯೋಗ ದಿನವಿಶ್ವಗುರುವಿಶ್ವಸಂಸ್ಥೆಹಿಂದೂಸ್ಥಾನ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಶ್ವಕ್ಕೆ ಭಾರತ ನೀಡಿದ ಅದ್ಬುತ ಕಾಣಿಕೆ ಯೋಗಾಭ್ಯಾಸ

Next Post

ಯೋಗ – ಸ್ವಸ್ಥ್ಯ ವಿಶ್ವಕ್ಕೆ ಭಾರತದ ಕೊಡುಗೆ

kalpa News

kalpa News

Next Post
ಯೋಗ – ಸ್ವಸ್ಥ್ಯ ವಿಶ್ವಕ್ಕೆ ಭಾರತದ ಕೊಡುಗೆ

ಯೋಗ - ಸ್ವಸ್ಥ್ಯ ವಿಶ್ವಕ್ಕೆ ಭಾರತದ ಕೊಡುಗೆ

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL