ಮುಂಬೈ: ವಾಣಿಜ್ಯ ನಗರಿಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅನಾಹುತಗಳು ಮುಂದುವರೆದಿದ್ದು, ಬೃಹತ್ ಗೋಡೆ ಕುಸಿದ ಪರಿಣಾಮ 13 ಮಂದಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
Mumbai: 13 dead after a wall collapsed on hutments in Pimpripada area of Malad East due to heavy rainfall today.NDRF Inspector Rajendra Patil says “In the search by advance equipment, canine search&physical search no more bodies were found so search operation is now being closed” pic.twitter.com/ACQl4mSF9v
— ANI (@ANI) July 2, 2019
ಮಲಾಡ್ ಪೂರ್ವ ಪ್ರದೇಶದ ಕುರಾರ್ ಪ್ರದೇಶದಲ್ಲಿ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿದ್ದ ಬೃಹತ್ ಗೋಡೆಯೊಂದು ಇದೇ ಇಳಿಜಾರಿನಲ್ಲಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳ ಮೇಲೆ ಕುಸಿದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಎನ್’ಡಿಆರ್’ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಈವರೆಗೂ ನಾಲ್ಕು ಮಂದಿಯನ್ನು ರಕ್ಷಿಸಲಾಗಿದೆ.
Mumbai: Indian Navy deploys various teams to provide assistance to rain hit and stranded people, in Kurla area following a request by BMC. About 1000 people have been shifted to safety with the help of NDRF, fire brigade, Naval teams as well as local volunteers. #MumbaiRains pic.twitter.com/udYAylTTx0
— ANI (@ANI) July 2, 2019
ಇನ್ನು ಕುಂಭದ್ರೋಣ ಮಳೆಯಿಂದಾಗಿ ಮುಂಬೈನ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಭಾರತೀಯ ನೌಕಾದಳದ ಸಿಬ್ಬಂದಿ ಎನ್’ಡಿಆರ್’ಎಫ್ ಯೋಧರು ರಕ್ಷಣಾ ಕಾರ್ಯಾಚರಣೆ ನಡೆಸಿ, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದ್ದಾರೆ.
Discussion about this post