ಬೆಂಗಳೂರು: ಕಳೆದ 24 ತಿಂಗಳಿನಿಂದ ವಿರೋಧದ ನಡುವೆಯೂ ಸರ್ಕಾರ ನಡೆಸಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕುಸಿದಿದ್ದು, ಮೂರು ತಿಂಗಳ ಹಿಂದೆ ನಟ ಹಾಗೂ ರಾಜಕಾರಣಿ ಜಗ್ಗೇಶ್ ನುಡಿದ ಮಾತು ಸತ್ಯವಾಗಿದೆ.
ಕಳೆದ ಮೂರು ತಿಂಗಳ ಹಿಂದೆ ರಾಜಕೀಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಜಗ್ಗೇಶ್ ಅವರು, ಮೂರೇ ತಿಂಗಳಲ್ಲಿ ರಾಜ್ಯ ಸರ್ಕಾರ ಪತನವಾಗದಿದ್ದರೆ ಬೃಂದಾವನದಲ್ಲಿ ರಾಯರೇ ಇಲ್ಲ. ಇಂತಹ ಭಾವನಾತ್ಮಕ ವಿಚಾರಧಾರೆ ಇದಾಗಿದೆ ಎಂದಿದ್ದರು.
ಚುನಾವಣೆಗೂ ಮುನ್ನ ಒಬ್ಬರಿಗೊಬ್ಬರು ಕಚ್ಚಾಡಿಕೊಂಡಿದ್ದನ್ನು ಇಡಿಯ ರಾಜ್ಯ ನೋಡಿದೆ. ಆದರೆ, ಯಾವ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡು ಆನಂತರ ಭಾಯ್ ಭಾಯ್ ಎಂದು ನೀವು ಒಟ್ಟಾಗಿ ಸರ್ಕಾರ ಮಾಡಿಕೊಂಡರೆ ಇದು ಶಾಶ್ವತವಲ್ಲ. ಯಧಾ ಯಧಾ ಹಿ ಧರ್ಮಸ್ಯ ಎಂಬಂತೆ ಅನ್ಯಾಯವನ್ನು ಕೊನೆಗಾಣಿಸಲು ಸರಿಯಾದ ವೇದಿಕೆ ಬಂದೇ ಬರುತ್ತದೆ ಎಂದು ಜಗ್ಗೇಶ್ ಹೇಳಿದ್ದರು.
ಆದರೆ, ಜಗ್ಗೇಶ್ ಅವರ ಈ ನುಡಿಗೆ ಹಲವು ಅಣಕಿಸಿದ್ದರು. ಆದರೆ, ಅಂದು ಜಗೇಶ್ ಅವರು ಭಾವನಾತ್ಮಕವಾಗಿ ನುಡಿದಿದ್ದ ಮಾತುಗಳು ಕೊಂಚ ತಡವಾದರೂ ಸಹ ಸತ್ಯವಾಗಿದೆ. ಸಮ್ಮಿಶ್ರ ಸರ್ಕಾರ ಪತನವಾಗಿದೆ.
Discussion about this post