ಭದ್ರಾವತಿ: ತುಳು ಸಾಹಿತ್ಯ ಆಕಾಡೆಮಿಯು ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಹಿನ್ನಲೆಯಲ್ಲಿಪ್ರತಿಷ್ಟಿತ ಭಾಷೆಗಳಲ್ಲಿ ಒಂದಾಗಿರುವುದು ಸಂತಸ ತಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ರಿಜಿಸ್ಟಾರ್ ಬಿ.ಚಂದ್ರಹಾಸ ರೈ ತಿಳಿಸಿದರು.
ನಗರದ ನ್ಯೂಟೌನ್ ಭಂಟರ ಭವನದಲ್ಲಿ ತುಳು ಕೂಟ ಹಾಗು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ತುಳು ಉತ್ಸವ 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಕಾಡೆಮಿಯ ನಿರಂತರ ಹೋರಾಟದ ಫಲವಾಗಿ ರಾಜ್ಯ ಸರಕಾರವು ಕಲಿಕಾ ಭಾಷೆಯ್ನನಾಗಿ ಮಾಡಿದ ಪರಿಣಾಮ 6 ನೇ ತರಗತಿಯಿಂದ ಸ್ನಾತಕೋತ್ತರ ಪದವಿ ತರಗತಿಯವರೆಗೆ ವಿದ್ಯಾರ್ಥಿಗಳು ತುಳು ಬಾಷೆಯನ್ನು ಅಭ್ಯಾಸಿಸುವಂತಾಗಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿ 900 ಕ್ಕೂ ಹೆಚ್ಚು ಹಾಗು ಸ್ನಾತಕೋತ್ತರ ಪದವಿ ತರಗತಿಗಳಲ್ಲಿ 90 ವಿಧ್ಯಾರ್ಥಿಗಳು ಭಾಷೆಯನ್ನು ಅಭ್ಯಾಸಿಸುತ್ತಿರುವುದು ಸರಕಾರ, ಜನ ಪ್ರತಿನಿಧಿಗಳು ಹಾಗು ಸಂಘ ಸಂಸ್ಥೆಗಳ ಸಹಕಾರ ಸ್ಮರಣಿಯವಾಗಿದೆ.
ತುಳು ಭಾಷಿಕರು ತಮ್ಮ ಭಾಷೆ, ಸಂಪ್ರದಾಯ, ಸಂಸ್ಕøತಿಯನ್ನು ಆರ್ಥೈಸಿಕೊಂಡು ಉಳಿಸಿ ಬೆಳಸಿ ಮುಂದಿನ ಪೀಳಿಗೆಯವರಿಗೆ ನೀಡಬೇಕು. ಇದರಿಂದ ಸಂಸ್ಕøತಿಯನ್ನು ಅರಿತುಕೊಳ್ಳುವುದರ ಜೊತೆಗೆ ಇತರೆ ಸಂಸ್ಕøತಿ ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದ್ದಲ್ಲಿ ಕಲಿಕೆಗೆ ಸುಲಭವಾಗಲಿದ್ದು ನಿಖರವಾಗಿ ಅರ್ಥೈಸಿಕೊಂಡು ಜ್ಞಾನಾರ್ಜನೆಗೆ ಅನುಕೂಲವಾಗಲಿದೆ. ಮಂಗಳೂರಿನಲ್ಲಿ ಸುಮಾರು ಐದು ಕೋಟಿ ರೂ ವೆಚ್ಚದಲ್ಲಿ ವಿಶಾಲ ಸಭಾಂಗಣ, ಗ್ರಂಥಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಸುಸಜ್ಜಿತ ತುಳು ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ತುಳುಕೂಟ ಹಿರಿಯ ಸದಸ್ಯರಾದ ಹೆಚ್.ಕೃಷ್ಣ ಹೆಗ್ಡೆ, ಶ್ಲಾಘನೀಯ ಸೇವೆ ಸಲ್ಲಿಸಿದ ಸುರೇಶ್‍ರಾವ್ ಅತ್ತೂರು ರವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗು ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಡಾ.ಯು.ಕರುಣಾಕರ್ ಶೆಟ್ಟಿ, ಡಾ.ಹರೀಶ್‍ದೆಲಂತ ಬೆಟ್ಟು, ಡಾ.ವೈ.ಆನಂದ್, ಪ್ರಕಾಶ್ ಪಿಂಟೊ, ಅಮರ್‍ನಾಥ್ ಶೆಟ್ಟಿ, ಶಾಮರಾಯ ಆಚಾರ್, ನಾರಾಯಣ ಪೂಜಾರ್, ಸುಬ್ಬಣ್ಣ ರೈ, ಸುಜಾತ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಂತರ ಸಾಂಸ್ಕ್ರತಿಕ ಕಾರ್ಯಕ್ರಮ ನೆರವೇರಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post