ನವದೆಹಲಿ: ಗೂಗಲ್ ಸರ್ಚ್ ಇಂಜಿನ್ ನಿಮಗೆ ಬೇಕಾದ ವಿಷಯಗಳನ್ನು ಸೆಕೆಂಡ್ ಲೆಕ್ಕದಲ್ಲಿ ಒದಗಿಸುವ ಪ್ರಪಂಚವೇ ಆಗಿರುವುದು ನಿಮಗೆಲ್ಲಾ ತಿಳಿದಿದೆ. ಇದೇ ಗೂಗಲ್ ಒದಗಿಸುವ ಮಾಹಿತಿಗಳು ಹಲವು ಬಾರಿ ಚರ್ಚೆಗೂ ಸಹ ಕಾರಣವಾಗಿದೆ.
ಈಗ ಈ ಗೂಗಲ್ ಸರ್ಚ್ ಇಂಜಿನ್’ನಲ್ಲಿ ಭಿಕಾರಿ ಎಂದು ಹುಡುಕಿದರೆ ಅಲ್ಲಿ ಬರುವ ಫೋಟೋ ಯಾರದ್ದು ಗೊತ್ತಾ? ಅದೇ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರದ್ದು.
ಮೋದಿ ಭಾರತದ ಪ್ರಧಾನಿಯಾದ ನಂತರ ಪಾಕ್ ವಿಚಾರದಲ್ಲಿ ಅವರ ನೀತಿಗಳಿಂದಾಗಿ ಆ ದೇಶ ನಿಜಕ್ಕೂ ಪಾಪರ್ ಆಗಿ ನಿಂತಿದೆ. ಅಲ್ಲಿನ ಆರ್ಥಿಕ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ಅಕ್ಷರಶಃ ಇನ್ನೊಂದು ದೇಶದ ಬಳಿ ಬೇಡಿ ತಿನ್ನುವ ಪರಿಸ್ಥಿತಿಗೆ ತಲುಪಿದೆ.
ಈ ನಡುವೆಯೇ, ಗೂಗಲ್ ಸರ್ಚ್‌ನಲ್ಲಿ ಭಿಕಾರಿ ಎಂದು ಹುಡುಕಿದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಬರುವುದು ನಿಜಕ್ಕೂ ಸೋಜಿಗದ ಸಂಗತಿಯಾಗಿದೆ. ಈ ವಿಚಾರ ಈಗ ನೆಟ್ಟಿಗರ ಹಾಸ್ಯಾಸ್ಪದ ವಿಷಯವಾಗಿದ್ದು, ತೀವ್ರ ವೈರಲ್ ಆಗಿದೆ.
Discussion about this post