ಬೆಂಗಳೂರು: ಅಂತೂ ಇಂತೂ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು, ಇಂದು 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪಥನಗೊಂಡ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತಾದರೂ, ಈವರೆಗೂ ಸಚಿವ ಸಂಪುಟ ವಿಸ್ತರಣೆಯಾಗದೇ ಏಕವ್ಯಕ್ತಿ ಸರ್ಕಾರವೇ ಆಡಳಿತದಲ್ಲಿತ್ತು. ಆದರೆ, ಈಗ ಸಂಪುಟ ವಿಸ್ತರಣೆಯಾಗುತ್ತಿದ್ದು, ಮೊದಲ ಹಂತದಲ್ಲಿ 17 ಮಂದಿ ಸಚಿವರಾಗಿ ಇಂದು ಮುಂಜಾನೆ 10.30ರಿಂದ 11.30ರವರೆಗೂ ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಲ್ಲಿದೆ ಅಂತಿಮ ಪಟ್ಟಿ:
Discussion about this post