ಚನ್ನಗಿರಿ: ಪ್ರಖ್ಯಾತ ಹಿರಿಯ ಲೇಖಕ ಹಾಗೂ ಛಾಯಾಗ್ರಹಣದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಶ್ರೀ ಡಾ.ಹನುಮಂತ ಜೋಯಿಸ್(82) ಅವರು ವಿಧಿವಶರಾಗಿದ್ದಾರೆ.
ಚನ್ನಗಿರಿ ಮೂಲದ ಇವರು, ವಯೋಸಹಜ ಅಸ್ವಸ್ಥತೆಯಿಂದ ಇಹಲೋಕ ತ್ಯಜಿಸಿದ್ದು, ಈ ಮೂಲಕ ಸಾಹಿತ್ಯ ಹಾಗೂ ಛಾಯಾಗ್ರಹಣ ಲೋಕದ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ.
ಡಾ.ಹನುಮಂತ ಜೋಯಿಸ್ ಅವರು ಭದ್ರಾವತಿ ಆಕಾಶವಾಣಿಯ ವಿಶ್ರಾಂತ ನಿಲಯ ನಿರ್ದೇಶಕ, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಹಿರಿಯ ಸಲಹಾ ಸಂಪಾದಕರಾದ ಶ್ರೀ ಡಾ.ಸುಧೀಂದ್ರ ಅವರ ಹಿರಿಯ ಸಹೋದರರಾಗಿದ್ದಾರೆ.
ಡಾ.ಹನುಮಂತ ಜೋಯಿಸ್ ಅವರ ಬಗ್ಗೆ:
ಚನ್ನಗಿರಿ ಮೂಲಕ ಡಾ.ಹನುಮಂತ ಜೋಯಿಸ್ ಅವರು, ಲೇಖಕರಾಗಿದ್ದು ಜೊತೆಯಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲೂ ಸಹ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದವರು.
ಇವರ ಸಾಧನೆಯನ್ನು ಗುರುತಿಸಿ ಪ್ರತೀ ವರ್ಷ ಆಗಸ್ಟ್ 19, ವಿಶ್ವ ಫೋಟೋಗ್ರಫಿ ದಿನ. ಸಾಂಕೇತಿಕವಾಗಿ ಇಂದು ನವದೆಹಲಿಯ ಇಂಡಿಯನ್ ಸ್ಕೂಲ್ ಆಫ್ ಫೋಟೋ ಟೆಕ್ನಿಕ್ ನೀಡುವ ಗೌರವ ಪ್ರಶಸ್ತಿಯನ್ನು ಇವರಿಗೆ ನೀಡಿ ಪುರಸ್ಕರಿಸಿದೆ.
ನವದೆಹಲಿಯ ಈ ಸಂಸ್ಥೆ ಹವ್ಯಾಸಿ ಮತ್ತು ವೃತ್ತಿಪರ ಛಾಯಾಗ್ರಾಹಕರ ಜೀವಮಾನ ಕೊಡುಗೆಯನ್ನು ಪರಿಶೀಲಿಸಿ ಪ್ರತಿಷ್ಠಿತ ಗೌರವವನ್ನು ನೀಡುವ ಪರಿಪಾಠ ಹೊಂದಿದೆ.
ಛಾಯಾಗ್ರಹಣ ವೃತ್ತಿಯನ್ನು ಆರಂಭಿಸಿದ ವೇಳೆಯಲ್ಲಿ ಇವರು ತಾವೇ ಸ್ವತಃ ತಮ್ಮ ಮನೆಯಲ್ಲಿಯೇ ರೋಲ್ ಫಿಲಂ ವಾಷಿಂಗ್, ಎನ್’ಲಾರ್ಜಿಂಗ್ ಹಾಗೂ ಪ್ರಿಂಟ್’ಗಳ ಕೆಲಸವನ್ನೂ ಸಹ ತಾವೇ ಮಾಡುತ್ತಿದ್ದರು.
ಇನ್ನು, ತಮ್ಮ ವೃತ್ತಿ ಜೀವನದಲ್ಲಿ ಜೋಯಿಸರು ಹಲವಾರು ದಿನಪತ್ರಿಕೆ, ನಿಯತಕಾಲಿಕೆಗಳಿಗೆ ಲೇಖನ ಬರೆದಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ಕೋಲ್ಕತ್ತಾದ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿಯೂ ಸಹ ತನ್ನ ಪ್ರಶಸ್ತಿ ನೀಡಿ ಗೌರವಿಸಿದೆ.
Discussion about this post