ಹೊಸನಗರ: ತಾಲೂಕಿನ ಬಟ್ಟೆ ಮಲ್ಲಪ್ಪ ಬಳಿ ನಿನ್ನೆ ರಾತ್ರಿ ಸಂಭವಿಸಿದ ಕಾರೊಂದು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಾರುತಿಪುರ ಕಡೆಯಿಂದ ಬಟ್ಟೆಮಲ್ಲಪ್ಪ ಕಡೆಗೆ ಅತಿ ವೇಗವಾಗಿ ಬಂದ ಕಾರೊಂದು ರಾಮಕೃಷ್ಣ ಶಾಲೆಯ ಬಳಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು, ಸರ್ಕಲ್ ಬಳಿಯಿದ್ದ ಬ್ಯಾರಿಕೇಟ್’ಗೆ ಡಿಕ್ಕಿ ಹೊಡೆದಿದೆ. ಆನಂತರ, ಸರ್ಕಲ್’ನಲ್ಲಿದ್ದ ಬೈಕ್’ಗೆ ಡಿಕ್ಕಿ ಹೊಡೆದು, ಹಾಲಿನ ಡೈರಿ ಸಮೀಪ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಲ್ಲಗೇ ನಿಲ್ಲದ ಕಾರು ಆಟೋವೊಂದಕ್ಕೂ ಸಹ ಡಿಕ್ಕಿ ಹೊಡೆದಿದ್ದು, ಆನಂತರ ಮೋರಿಗೆ ಡಿಕ್ಕಿ ಹೊಡೆದು ಪಕ್ಕಕ್ಕೆ ಉರುಳಿದೆ. ಪರಿಣಾಮ ಕಾರಿನ ಮುಂಭಾಗ ಸಂಫೂರ್ಣ ಜಖಂಗೊಂಡಿದೆ.
ಅತಿವೇಗವೇ ಈ ಸರಣಿ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
(ಮಾಹಿತಿ: ಮಹೇಶ್ ಹಿಂಡ್ಲುಮನೆ, ಹೊಸನಗರ)
Discussion about this post