ಭದ್ರಾವತಿ: ನಗರದ ಮುಖ್ಯ ಬಸ್ ನಿಲ್ದಾಣ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ವರನ್ನು ನ್ಯೂಟೌನ್ ಪೊಲೀಸರು ಬಂಧಿಸಿ ಅವರಿಂದ 1.27 ಲಕ್ಷ ರೂ ಬೆಲೆ ಬಾಳುವ 14 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಸುಧಾಕರ್ ಎಸ್. ನಾಯ್ಕ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯೂಟೌನ್ ಸಬ್’ಇನ್ಸ್ಪೆಕ್ಟರ್ ಸರ್ವಮಂಗಳ, ಸಿಬ್ಬಂದಿಗಳಾದ ವೆಂಕಟೇಶ್, ಅನಿಲ್’ಕುಮಾರ್, ಮಂಜುನಾಥ್, ಕುಮಾರ್, ಪಾಲಾಕ್ಷ, ನಾಗರಾಜ್, ಯಧುನಂದನ್, ನವೀನ್ ಪವಾರ್, ಅಜಿತ್, ಪ್ರಸನ್ನಸ್ವಾಮಿ, ತಮ್ಮಣ್ಣ, ಚಾಲಕ ಮಧುಸೂದನ್ ಈ ತಂಡವು ಕೆಎಸ್’ಆರ್’ಟಿಸಿ ಮುಖ್ಯಬಸ್ ನಿಲ್ದಾಣದಲ್ಲಿ ಗುರುವಾರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಎನ್. ಪ್ರಸಾದ್, ರಾಜು, ಭದ್ರಾವತಿಯ ಕೃಷ್ಣಪ್ಪ, ಆರ್.ಪ್ರಸಾದ್ ಎಂಬುವವರನ್ನು ಬಂಧಿಸಿದೆ. ಆನಂತರ ನಾಲ್ವರನ್ನು ವಿಚಾರಣೆಗೊಳಪಡಿಸಲಾಗಿ ವಿವಿದೆಢೆ ಕಳ್ಳತನ ಮಾಡಿರುವ ಪ್ರಕರಣಗಳು ಬಯಲಾಗಿದೆ. ಅವರಿಂದ 14 ಬೆಲೆ ಬಾಳುವ ಮೊಬೈಲ್’ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇತ್ತೀಚಿಗೆ ನಗರದೆಲ್ಲೆಡೆ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದುದ್ದರಿಂದ ಪತ್ತೆಹಚ್ಚಲು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್ ಮತ್ತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಎಚ್.ಟಿ. ಶೇಖರ್ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಪಿ. ಸುಧಾಕರ್ ಎಸ್. ನಾಯ್ಕ ನೇತೃತ್ವದಲ್ಲಿ ನಗರ ಸರ್ಕಲ್ ಇನ್ಸ್ಪೆಕ್ಟರ್ ಎನ್. ನಂಜಪ್ಪ ಮುಂದಾಳತ್ವದ ಪೊಲೀಸರ ತಂಡವನ್ನು ರಚನೆ ಮಾಡಲಾಗಿತ್ತು.
ಪ್ರಕರಣ ಪತ್ತೆ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post