ಭದ್ರಾವತಿ: ಅನುದಾನಿತ ಶಾಲಾ ಶಿಕ್ಷಕರ ವೇತನ ಪಾವತಿಗೆ ಲಂಚದ ಬೇಡಿಕೆಯಿಟ್ಟಿದ್ದ ಇಲ್ಲಿನ ಬಿಇಒ ಆನಂದ್ ಅವರನ್ನು ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.
ತಾಲೂಕಿನ ಡಾ.ಬಿ.ಆರ್. ಅಂಬೇಡ್ಕರ್ ಮಲ್ನಾಡ್ ಅನುದಾನಿತ ಪ್ರೌಢಶಾಲೆಯ ಶಿಕ್ಷಕರ ವೇತನ ಪಾವತಿ ಮಾಡಲು 5 ಸಾವಿರ ರೂ.ಗಳ ಲಂಚಕ್ಕೆ ಬಿಇಒ ಬೇಡಿಕೆಯಿಟ್ಟಿದ್ದರು.
ಆದರೆ, ಲಂಚ ನೀಡದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳಿನಿಂದಲೂ ವೇತನ ಪಾವತಿ ಮಾಡಿರಲಿಲ್ಲ. ಹೀಗಾಗಿ, ಶಿಕ್ಷಕರು ಎಸಿಬಿಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ವೇತನ ಪಾವತಿಗಾಗಿ ಲಂಚದ ಹಣ ನೀಡುವ ವೇಳೆ ದಾಳಿ ನಡೆಸಿದ ಎಸಿಬಿ ಡಿವೈಎಸ್’ಪಿ ಸಿ. ವೇಣುಗೋಪಾಲ್ ನೇತೃತ್ವದ ಅಧಿಕಾರಿಗಳ ತಂಡ ಬಿಇಒ ಆನಂದ್ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಇನ್ಸ್’ಪೆಕ್ಟರ್’ಗಳಾದ ಎನ್. ವೀರೇಂದ್ರ, ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ವಸಂತ್, ನಾಗರಾಜ್, ಹರೀಶ್, ಸುರೇಂದ್ರ, ರಘುನಾಯ್ಕ್, ಯೋಗೀಶ್ವರಪ್ಪ ಹಾಗೂ ಶ್ರೀನಿವಾಸ್ ಅವರುಗಳು ಪಾಲ್ಗೊಂಡಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post