ಶಿವಮೊಗ್ಗ: ಅಖಿಲ ಭಾರತ ಬೆರಳುಮುದ್ರೆ ತಜ್ಞರ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಬೆರಳು ಮುದ್ರೆ (ಫಿಂಗರ್ ಪ್ರಿಂಟ್) ವಿಭಾಗದ ಕಾನ್ ಸ್ಟೇಬಲ್ ಬಿ.ಎಂ. ಕಿರಣ್ ರವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ಮೂಲಕ ರಾಷ್ಟ್ರ-ರಾಜ್ಯದ ಗಮನ ಸೆಳೆದಿದ್ದಾರೆ.
2-2-2019 ರಿಂದ 5-2-2019 ರವರೆಗೆ ನವದೆಹಲಿಯ ಎನ್‌ಸಿಆರ್’ಬಿ ಯಲ್ಲಿ ನಡೆದ ರಾಷ್ಟ್ರಮಟ್ಟದ ಬೆರಳುಮುದ್ರೆ ತಜ್ಞರ ಪರೀಕ್ಷೆಯಲ್ಲಿ ಬಿ.ಎಂ. ಕಿರಣ್ ಅವರು ಭಾಗವಹಿಸಿ, ಈ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ದೆಹಲಿಯ ಎನ್‌ಸಿಆರ್’ಬಿಯಲ್ಲಿ ನಡೆದ 20 ನೆಯ ಅಖಲಿ ಭಾರತ ಬೆರಳುಮುದ್ರೆ ಸಂಗ್ರಹಾಲಯಗಳ ನಿರ್ದೇಶಕರ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ಗೃಹ ಇಲಾಖೆ ರಾಜ್ಯ ಸಚಿವ ಕಿಶನ್ ರೆಡ್ಡಿಯವರು ಇವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಅಭಿನಂದಿಸಿದ್ದಾರೆ.
ದಾವಣಗೆರೆ ಬೆರಳುಮುದ್ರೆ ಘಟಕದ ಇನ್ಸ್’ಪೆಕ್ಟರ್ ರುದ್ರೇಶ್ ಅವರು, ತಜ್ಞರ ಪರೀಕ್ಷೆ ಎದುರಿಸುವ ಕುರಿತಂತೆ ಬಿ.ಎಂ. ಕಿರಣ್ ಅವರಿಗೆ ಸೂಕ್ತ ಸಲಹೆ-ಸೂಚನೆ ಹಾಗೂ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು. ಇವರ ಸಾಧನೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
(ಮಾಹಿತಿ: ಬಿ. ರೇಣುಕೇಶ್, ಶಿವಮೊಗ್ಗ)
Discussion about this post