ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ನ್ಯಾಯಾಲಯದ ಸೂಚನೆಯಂತೆ ರಾಮ ಮಂದಿರ ನಿರ್ಮಾಣ ಟ್ರಸ್ಟ್ ರಚನೆ ಪ್ರಕ್ರಿಯೆ ಆರಂಭವಾಗಿದೆ.
ಕೇಂದ್ರ ಸರ್ಕಾರ ಈ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದು, ಟ್ರಸ್ಟ್ ರಚನೆಗೂ ಮುನ್ನ ನಿಯೋಜಿತ ಹಿರಿಯ ಅಧಿಕಾರಿಗಳ ತಂಡ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿಯ ಪರಿಶೀಲನೆಯನ್ನು ಆರಂಭಿಸಿದೆ.
ಇನ್ನು, ರಾಮಮಂದಿರ ನಿರ್ಮಾಣ ಟ್ರಸ್ಟ್ ಕೇಂದ್ರ ಸರ್ಕಾರದ ಯಾವ ಸಚಿವಾಲಯದ ಅಡಿಯಲ್ಲಿ ರಚನೆಯಾಗಲಿದೆ ಎಂಬ ಸ್ಟಷ್ಪ ಮಾಹಿತಿ ಹೊರಬಿದ್ದಿಲ್ಲ.
Get In Touch With Us info@kalpa.news Whatsapp: 9481252093
















