ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಸರ್ವಜನೋಪಯೋಗಿ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ಜಾಲತಾಣ www.Srisamsthana.org ಲೋಕಾರ್ಪಣೆ ಕಾರ್ಯಕ್ರಮ ಈ ತಿಂಗಳ 24ರಂದು ಗಿರಿನಗರ ರಾಮಾಶ್ರಮ ಬಳಿಯ ಪುನರ್ವಸು ಸಭಾಭವನದಲ್ಲಿ ನಡೆಯಲಿದೆ.
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದು, ರಾಜ್ಯದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ವೆಬ್’ಸೈಟ್ ಲೋಕಾರ್ಪಣೆ ಮಾಡಲಿದ್ದಾರೆ.
ವಿಟಿಯು ವಿಶ್ರಾಂತ ಕುಲಪತಿ ಹಾಗೂ ಸುರತ್ಕಲ್ ಎನ್‌ಐಟಿಕೆ ಅಧ್ಯಕ್ಷ ಡಾ.ಬಲವೀರ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಖ್ಯಾತ ಚಿತ್ರನಟ ಅಜಯ್ ರಾವ್ ಮತ್ತು ಕನ್ನಡ ಕೋಗಿಲೆ ಸ್ಪರ್ಧಾ ವಿಜೇತೆ ಅರುಂಧತಿ ವಸಿಷ್ಠ ಭಾಗವಹಿಸುವರು ಎಂದು ಶ್ರೀಮಠದ ಜಾಲತಾಣ ವಿಭಾಗದ ಸಂಯೋಜಕ ಮಹೇಶ್ ಕೋರಿಕ್ಕಾರ್ ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
















