ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರತಿಭೆ ಅನ್ನೋದು ದೈವದತ್ತವಾಗಿ ಒಲಿದ ಒಂದು ಅಮೂಲ್ಯ ವರ… ಅದನ್ನು ಸದುಪಯೋಗ ಮಾಡಿಕೊಂಡು ಸೂಕ್ತ ವೇದಿಕೆಗಳನ್ನು ಅರಸಿಕೊಂಡು ಮುನ್ನಡೆಯುತ್ತಿರುವ ಅಂತರಾ ಕುಲಕರ್ಣಿ ಬಗ್ಗೆ ಒಂದೆರಡು ನುಡಿಗಳು….


ಪ್ರತಿವರ್ಷ ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟದ ಶಾಸ್ತ್ರೀಯ ಸಂಗೀತದ ಸ್ಪರ್ಧೆಯಲ್ಲಿ ಆರ್ಟ್ಸ್ ಸರ್ಕಲ್ ಮ್ಯೂಸಿಕ್ ಎಂಬ ಪ್ರಶಸ್ತಿಯು ಪ್ರತಿವರ್ಷವೂ ಇವರದೇ ಇವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಹಾಡುಗಾರಿಕೆಯನ್ನು ಆರಂಭಿಸಿದ್ದಾರೆ. ಬೆಳಗಾವಿಯಲ್ಲಿ ಮತ್ತು ಬೆಳಗಾವಿಯ ಹೊರವಲಯದಲ್ಲಿ ಹಲವಾರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು, ಹಲವಾರು ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳು ಇವರ ಮುಡಿಗೇರಿವೆ.
ರಾಜ್ಯ ಸರ್ಕಾರವು ನಡೆಸುತ್ತಿರುವ ಪ್ರತಿಭಾ ಕಾರಂಜಿಯ ಹಾಡುಗಾರಿಕೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಕೂಡ ಲಭಿಸಿದೆ. ಎಂಟನೆಯ ವಯಸ್ಸಿನಲ್ಲಿಯೇ ಸ್ಥಳೀಯ ದೃಶ್ಯ ಮಾಧ್ಯಮವಾದ ಹಾಥ್ವೆ ಆಯೋಜಿಸಿದ ವಾಯ್ಸ್ ಆಫ್ ಬೆಳಗಾಂ ಸ್ಪರ್ಧೆಯಲ್ಲಿ ಈಕೆಗೆ ಈ ಪ್ರಶಸ್ತಿ ದೊರಕಿದೆ.

ಸ್ವರನೀಶ್ ಅಕಾಡೆಮಿ ಪುಣೆ ಈತರ ಯುಟ್ಯೂಬ್ ಚಾನೆಲ್’ನಲ್ಲಿ ಎರಡು ಆಲ್ಬಂ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ರಾಷ್ಟ್ರಮಟ್ಟದ ಹಾಡುಗಾರಿಕೆ ಸ್ಪರ್ಧೆಯಲ್ಲಿ ಎರಡನೆಯ ಸ್ಥಾನ ದೊರೆತಿದ್ದು, ನಾಲ್ಕು ಭಾಷೆಗಳಲ್ಲಿ ಅಂದರೆ ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲೀಷ್’ನಲ್ಲಿ ಹಾಡಬಲ್ಲ ಚತುರೆ ಇವರು. ಅಮ್ಮ ನಾನು ದೇವರಾಣೆ ಎಂಬ ಭಾವಗೀತೆಯನ್ನು ರಾಪ್ ಸಾಂಗ್ ಮಾಡಿದ ಹೆಗ್ಗಳಿಕೆ ಇವರದ್ದಾಗಿದ್ದು, ಹಲವಾರು ವಿಧಾನಗಳ ಪದಗಳನ್ನು ರಾಪ್ ಸಾಂಗ್ ಆಗಿ ಪರಿವರ್ತಿಸುವ ಕಲೆ ಇವರಲ್ಲಿದೆ.
ಒಂದು ಹಾಡನ್ನು ಹತ್ತು ಭಾಷೆಗಳಲ್ಲಿ ಹಾಡುವ ಕಲೆಗಾರಿಕೆ ಇವರಲ್ಲಿದ್ದು, ಈಗಾಗಲೇ ಒಂದು ಹಾಡನ್ನು ಹಾಡಿ ಮುಗಿಸಿದ್ದಾರೆ. ಕನ್ನಡ ಕೋಗಿಲೆ ಸೀಸನ್ 2 ರಲ್ಲಿ ಕ್ವಾಟರ್ ಫೈನಲ್’ಗೆ ಮೂರು ಜನ ತೀರ್ಪುಗಾರರ ಮೆಚ್ಚುಗೆ ಯೊಂದಿಗೆ ತಲುಪಿರುತ್ತಾರೆ.
ಇನ್ನು ಪ್ರತಿಭೆಗಳ ಗಣಿಯಾಗಿರುವ ಈಕೆ ಮೂಗಿನಲ್ಲಿ ಶಹನಾಯಿ ಸ್ವರ ನುಡಿಸುತ್ತಾಳೆ.
ಅಲ್ಲದೇ, ಹಲವಾರು ವಿವಿಧ ಹಕ್ಕಿಗಳ ದನಿಯನ್ನು ಬಾಯಿಂದ ನುಡಿಸುವ ಈ ಬಾಲೆ ನೃತ್ಯ ಮಾಡುವುದು ಮೃತ್ಯ ಸಂಯೋಜಿಸುವುದು ಇವರ ಅಭಿರುಚಿಗಳಲ್ಲಿ ಒಂದಾಗಿದ್ದು, ಕರಾಟೆಯಲ್ಲಿ ಆರೆಂಜ್ ಬೆಲ್ಟ್ ಇವರನ್ನು ಸೇರಿದೆ.


ಹೀಗೆ ತನ್ನಲ್ಲಿರುವ ಪ್ರತಿಭೆಗಳಿಂದ ಸಾಧನೆಯ ಹಣತೆ ಹಚ್ಚುತ್ತಿರುವ ಅಂತರಾಳಿಗೆ ಶುಭವಾಗಲಿ… ಈಕೆಯ ಕನಸುಗಳು ಈಡೇರಲಿ ಎಂಬುದು ನಮ್ಮೆಲ್ಲರ ಹಾರೈಕೆ…
Get in Touch With Us info@kalpa.news Whatsapp: 9481252093








Discussion about this post