ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತಾಲೂಕಿನ ಪುರದಾಳು ಗ್ರಾಮದ ಬಾಬು ಎಂಬುವರಗೆ ಸೇರಿದ ಹಸುವೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದ್ದು, ಪ್ರಕೃತಿಯೆಷ್ಟು ವಿಚಿತ್ರ ಎನಿಸುವಂತಾಗಿದೆ.
ಈ ಕರುವಿಗೆ ಎರಡು ಕಣ್ಣುಗಳು ಒಂದೇ ಕಡೆ ಇದ್ದು, ಇದಕ್ಕೆ ಮೂಗು ಸಹ ಇಲ್ಲ. ಇದಕ್ಕೆ ಮೂಗಿಲ್ಲದೇ ಇರುವುದರಿಂದ ನಾಲಿಗೆಯನ್ನು ಹೊರ ಚಾಚಿಕೊಂಡೇ ಇದೆ. ಇದರಿಂದ ಈ ಕರು ವಿಕಾರವಾಗಿ ಕಾಣುತ್ತಿದೆ.
ಇನ್ನು ಹಸು ಮತ್ತು ಕರು ಎರಡೂ ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ.
ಈ ವಿಚಿತ್ರ ಕರು ಹಾಗೂ ಹಸುವನ್ನು ನೋಡಲು ಸುತ್ತಮುತ್ತಲ ಗ್ರಾಮದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
Get in Touch With Us info@kalpa.news Whatsapp: 9481252093

















