No Result
View All Result
Mysuru say no to drugs walkathon dcp harsha students
English Articles

BEDA BRO Should Be Everyone’s Goal : Mysuru DCP Priyamvada calls for Drug-Free Society

by kalpa News
September 17, 2026
0

Kalpa Media House  |  Mysuru | Students have a crucial role to play in the fight against drug abuse, and...

Read moreDetails
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
  • Advertise With Us
  • Grievances
  • About Us
  • Contact Us
Thursday, September 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅದ್ಬುತ ಕಂಠಸಿರಿಯ ಗಾಯಕಿ ಜಯಶ್ರೀ ಧರಣೇಂದ್ರ ಜೈನ್ ಹೊರನಾಡು ರಾಜ್ಯದ ಹೆಮ್ಮೆ

kalpa News by kalpa News
December 5, 2019
in Special Articles
0
ಅದ್ಬುತ ಕಂಠಸಿರಿಯ ಗಾಯಕಿ ಜಯಶ್ರೀ ಧರಣೇಂದ್ರ ಜೈನ್ ಹೊರನಾಡು ರಾಜ್ಯದ ಹೆಮ್ಮೆ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಕ್ಕಳಿಗೆ ನೀಡುವ ಒಳ್ಳೆಯ ಸಂಸ್ಕಾರ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ ಎನ್ನುವುದಕ್ಕೆ ಜಯಶ್ರೀಯವರ ಸಂಗೀತ ಸಾಧನೆಯೇ ಸಾಕ್ಷಿ. ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲೂ ತಮ್ಮ ಗಾನ ಮಾಧುರ್ಯದಿಂದ ಚಿರಪರಿಚಿತರಾಗಿರುವ ಇವರು ಅತ್ಯಂತ ಸದ್ವಿನಿ ಮತ್ತು ಮೃದು ಸ್ವಭಾವದ ವ್ಯಕ್ತಿತ್ವದ ನಾರಿ. ಸಂಗೀತದಲ್ಲಿ ಆಸಕ್ತಿ ತೋರಿಸಿದವರನ್ನೆಲ್ಲಾ ಬೆಂಬಲಿಸಿ, ಪ್ರೋತ್ಸಾಹಿಸಿ ತಮ್ಮಿಂದಾದ ಸಹಕಾರ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ಸ್ಫೂರ್ತಿಯಾಗಿದ್ದಾರೆ.


ಜಯಶ್ರೀಯವರ ಬಾಲ್ಯ ಮತ್ತು ಕುಟುಂಬ
1975ರಲ್ಲಿ ಚಿಕ್ಕನ ಕೊಡಿಗೆಯ ದಿ. ಶಿವಯ್ಯ ಮತ್ತು ದೇವಿಯಮ್ಮನ ಐದನೆಯ ಮಗಳಾಗಿ ಜನಿಸಿ ತಮ್ಮ ಸಂಗೀತ ಕಂಠ ಸಿರಿಯಿಂದ ಬಾಲ್ಯದಲ್ಲೇ ಉತ್ತಮ ಶ್ರೇಷ್ಠ ಗಾಯಕಿ ಎನಿಸಿಕೊಂಡವರು. ಇವರ ಪ್ರಾಥಮಿಕ ಶಿಕ್ಷಣ ಚಿಕ್ಕನಗೂಡಿಗೆ, ಇರ್ವತೂರು ಹೊರನಾಡಿನಲ್ಲಿ ಮುಗಿಸಿದರೆ ಕಾರ್ಕಳದ ಶ್ರಾವಿಕಾಶ್ರಮ ಮತ್ತು ನೇಮಿರಾಜ ವರ್ಣೀಜಿಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಕಳಸದಲ್ಲಿ ಕಾಲೇಜು ಶಿಕ್ಷಣ ಮುಂದುವರೆಸಿದ ಇವರು ಶಿಕ್ಷಣದ ಜೊತೆ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಸಂಗೀತವನ್ನು ಶುಶ್ರಾವ್ಯವಾಗಿ ಹಾಡುತ್ತಿದ್ದರು.

ಡಿ.ಆರ್. ಧರಣೀಂದ್ರ ಜೈನ್ ಅವರನ್ನು ಬಾಳ ಸಂಗಾತಿಯಾಗಿ ಪಡೆದ ಮೇಲೆ ಇವರ ಪತಿಯ ಪ್ರೋತ್ಸಾಹ ಇವರ ಸಂಗೀತ ಸೇವೆಯಲ್ಲಿ ಇನ್ನು ಉನ್ನತ ಮಟ್ಟದ ಸಾಧನೆ ಮಾಡುವಂತಾಯಿತು. ಇವರು ಧೀರಜ್ ಮತ್ತು ಧನುಷ್ ಎನ್ನುವ ಇಬ್ಬರು ಸುಸಂಸ್ಕೃತ ಮಕ್ಕಳನ್ನು ಪಡೆದಿದ್ದಾರೆ. ಬಸದಿಯ ಪಂಚ ಕಲ್ಯಾಣ, ಬಾಹುಬಲಿ ಮಸ್ತಕಾಭಿಷೇಕ, ರಥೋತ್ಸವ, ಇಂಥಹ ಪುಣ್ಯ ಕಾರ್ಯಕ್ರಮಗಳಲ್ಲೂ 300ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿ ನಿರಂತರವಾಗಿ ಹಾಡುತ್ತಾ ಕೇಳುಗರೆಲ್ಲರಿಗೂ ಭಕ್ತಿ ರಸದಲ್ಲಿ ತಮ್ಮನ್ನೇ ಮೈ ಮರೆತು ಕೇಳುವಂತೆ ಮಾಡಿದ್ದಾರೆ. ಇವರ ಸಾಧನೆಗಳನ್ನು ತನ್ನ ಪತಿಯೇ ಬೆನ್ನೆಲುಬು ಮತ್ತು ಪತಿಯ ಕುಟುಂಬದ ನೆರವನ್ನು ಕೂಡಾ ನೆನೆಯಲು ಮರೆಯುವುದಿಲ್ಲ.


ಜಯಶ್ರೀಯವರ ಸಂಗೀತ ತರಬೇತಿ ಸೇವೆ
ಮದುವೆಯ ನಂತರ ಶಾಸ್ತ್ರೀಯ ಸಂಗೀತದ ಮುಂದಿನ ಭಾಗವನ್ನು ಅಭ್ಯಸಿಸಿದ ಇವರು ಶಾಸ್ತ್ರೀಯ ಸಂಗೀತ, ಆರಾಧನೆ, ಪಂಚಕಲ್ಯಾಣ ಮತ್ತು ಮಸ್ತಾಭಿಷೇಕ ಕಾರ್ಯಕ್ರಮಗಳಿಗೆ ಎಡೆಬಿಡದೇ ನಿರಂತರವಾಗಿ ಹಾಡಿದ್ದಾರೆ. ಇತ್ತೀಚೆಗೆ ನಡೆದ ಧರ್ಮಸ್ಥಳದ ಪಂಚ ಮಹಾ ವೈಭವದ ಸಮವಸರಣ ವೇದಿಕೆಯಲ್ಲಿ 200 ಕ್ಕೂ ಹೆಚ್ಚು ಜನರಿಂದ ಸಮೂಹ ಗಾನ ತರಬೇತಿಯ ನೇತೃತ್ವ ವಹಿಸಿರುವುದು ಇವರ ಸಂಗೀತ ಪ್ರೀತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.


ಅನಿತಾ ಸುರೇಂದ್ರ ಕುಮಾರ್ ರವರ ಜಿನ ಭಜನಾ ಕಾರ್ಯಕ್ರಮಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 20ಕ್ಕೂ ಹೆಚ್ಚು ತಂಡಗಳಿಗೆ ರಾತ್ರಿ-ಹಗಲು ಭೇದ ಮಾಡದೇ ತರಬೇತಿ ನೀಡುವ ಜಾಗಕ್ಕೆ ಹೋಗಿ ಮಕ್ಕಳು, ಹಿರಿಯರಿಗೆ ಹಾಗೂ ಕಿರಿಯರಿಗೂ ಸಂಗೀತ ತರಬೇತಿ ನೀಡಿದ್ದಾರೆ. ಈ ಪ್ರೋತ್ಸಾಹ ಮತ್ತು ಸಹಕಾರಕ್ಕೆ ಭಕ್ತಿಯ ಸಂಗೀತ ಲೋಕ ಇವರಿಗೆ ಹೃದಯಪೂರ್ವಕವಾಗಿ ಅಭಿನಂದಿಸಿದೆ.

ಜಯಶ್ರೀ ಧರಣೇಂದ್ರರವರ ಸಾಹಿತ್ಯ ಸೇವೆಯನ್ನು ಗಮನಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಹುಡುಕಿಕೊಂಡು ಬಂದಿದೆ. ಭಾರತೀಯ ಜೈನ್ ಮಿಲನ್ ಸಂಸ್ಥೆಯಿಂದ ಜಿನಗಾನ ವಿಧುಷಿ, ಮೇಗುಂದಾ ಜೈನ ಬಾಂಧವರಿಂದ ಗಾನವಾಣಿ ಅಭಿನಂದನಾ ಪತ್ರ ಹೀಗೆ ಹಲವಾರು ಸಂಘ-ಸಂಸ್ಥೆಗಳಿಂದಲೂ ಅಭಿನಂದನಾ ಪುರಸ್ಕಾರ ಲಭಿಸಿದೆ. ಅವರ ಸಾಹಿತ್ಯ ಕೆಲಸಗಳನ್ನು ಅವರ ಮಾತುಗಳಲ್ಲೇ ಹೀಗೆ ಹೇಳುತ್ತಾರೆ.


ಮೊದ ಮೊದಲೆಲ್ಲ ನಮಗೆ ಕಾರ್ಯಕ್ರಮ ನೀಡಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿ ಹತ್ತು ಹಲವು ವೇದಿಕೆ ಕಲ್ಪಿಸಿಕೊಟ್ಟವರು ಕಳಸದ ಶ್ರೀ ಆರ್.ಕೆ. ಬ್ರಹ್ಮದೇವರವರು ನಮ್ಮಲ್ಲಿ ಧೈರ್ಯ ತುಂಬಿ ಆತ್ಮಸ್ಥೈರ್ಯ ತುಂಬಿದವರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ದಂಪತಿಗಳು ನನ್ನ ಕಲೆಯನ್ನು ಮೆಚ್ಚಿ ತಮ್ಮಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಶ್ರೀ ಮೋಹನ್ ಆಳ್ವರವರು ತಮ್ಮ ವೇದಿಕೆಯಲ್ಲಿ ಸ್ಥಳ ಕಲ್ಪಿಸಿದ್ದು, ಇವೆಲ್ಲ ನನ್ನ ಕಲಾರಂಗದ ಹೆಜ್ಜೆ ಗುರುತುಗಳು.

ಇತ್ತೀಚೆಗೆ ಅನಿತಾ ಸುರೇಂದ್ರ ಕುಮಾರ್’ರವರ ಕಲ್ಪನೆಯ ಜಿನಭಜನಾ ಸ್ಪರ್ಧೆ ನನ್ನ ಆಸಕ್ತಿಯ ಕ್ಷೇತ್ರಕ್ಕೆ ಒಳ್ಳೆಯ ವೇದಿಕೆಯಾಯ್ತು. ಪ್ರತೀ ಬಾರಿಯೂ ಅನೇಕ ತಂಡಗಳನ್ನು ರಚಿಸಿ ಅವರಲ್ಲಿನ ಪ್ರತಿಭೆ ಆಸಕ್ತಿಗಳನ್ನು ಸ್ವಲ್ಪ ಮಟ್ಟಿಗೆ ಹೊರತರುವ ಕೆಲಸ ಆಗುತ್ತಿದೆ. ನನ್ನ ಕಡೆಯಿಂದ ತರಬೇತಿ ಪಡೆದ ತಂಡಗಳು ವೇದಿಕೆಯಲ್ಲಿ ಹಾಡುತ್ತಿದ್ದರೆ ಸಿಗುವ ಆತ್ಮ ತೃಪ್ತಿ ನಾ ಹಾಡುವಾಗ ಸಿಗಲ್ಲ. ಮೂರು ವರ್ಷದಲ್ಲಿ ಹೆಚ್ಚಿನ ಬಾರಿ ನಾನು ರಚಿಸಿದ ಸಾಹಿತ್ಯ, ಜಿನಗೀತೆಗಳಿಗೆ ಬಹುಮಾನ ದೊರೆತಿದೆ. ಐದಾರು ತಂಡಗಳು ಫೈನಲ್ ವೇದಿಕೆಗೆ ಹೋಗಿವೆ. ಎರಡು ಬಾರಿ ಪ್ರಥಮ, ಎರಡು ಬಾರಿ ದ್ವಿತೀಯ ಸ್ಥಾನ ಗಳಿಸಿದಾಗ ಹೆಮ್ಮೆಯೆನಿಸಿದೆ. ಈ ಸಾರಿ 18 ತಂಡಗಳು ನನ್ನ ತರಬೇತಿಯಲ್ಲಿ ಒಳಗೊಂಡಿದೆ.


ಹೊಸ ಹೊಸ ಪರಿಕಲ್ಪನೆಗಳನ್ನು ಮಾಡುತ್ತಾ ನಮ್ಮಲ್ಲಿ ಪ್ರೋತ್ಸಾಹ ನೀಡುವಲ್ಲಿ ಎನ್’ಆರ್ ಪುರ ಶ್ರೀಗಳು ಪ್ರಮುಖರು. ತಾವೇ ಎಲ್ಲಾ ಜವಾಬ್ದಾರಿ ತೆಗೆದುಕೊಂಡು ನಮ್ಮಿಂದ 3 ಸಿಡಿ ಮಾಡಿಸಿಕೊಂಡು ಬಿಡುಗಡೆ ಮಾಡಿಸಿದರು. ವರ್ಷದಲ್ಲಿ 15 ರಿಂದ 20 ಕಾರ್ಯಕ್ರಮಗಳನ್ನು ತಮ್ಮ ಕ್ಷೇತ್ರದಲ್ಲಿ ನಮ್ಮಿಂದ ನಡೆಸುತ್ತಾರೆ. ಬೆಳಕಿನ ದಾರಿಯನ್ನು ತೋರಿಸಿದ ಮಹಾನ್ ಶಕ್ತಿ ಅವರು. ಶ್ರವಣಬೆಳಗೊಳಕ್ಕೂ ನಮ್ಮ ಪರಿಚಯ ಮಾಡಿಸಿ, ಶ್ರೀ ಗಳಿಂದ ಮೆಚ್ಚುಗೆಯಾಗುವಂತೆ ಕಾರ್ಯಕ್ರಮ ಕೊಡಿಸಿದ್ದಾರೆ. ಬೃಹತ್ ಸಿದ್ಧಚಕ್ರಾರಾಧನೆಯನ್ನು ಈ ಕ್ಷೇತ್ರದಲ್ಲಿ ನಮ್ಮ ಸಂಗೀತದಲ್ಲೇ ನಡೆಸಲು ಅವಕಾಶ ಕೊಟ್ಟಾಗ ಬಹಳ ಖುಷಿ ಆಯಿತು. ಬೆಳ್ಳೂರಿನಲ್ಲಿ ನಡೆದ ಬೃಹತ್ ಇಂದ್ರಧ್ವಜ ಆರಾಧನೆಯಲ್ಲಿ ನಮಗೂ ಅವಕಾಶ ಕೊಡಿಸಿದ್ದಾರೆ.


ಮುಂಬೈ ನಗರಿಯಲ್ಲಿ ಕರ್ನಾಟಕ ಜೈನ ಸಮುದಾಯದವರು ಬೃಹತ್ ಭಕ್ತಾಮರ ಆರಾಧನೆಯನ್ನು ನಡೆಸಿದಾಗ ನಮಗೆ ಅವಕಾಶ ಕೊಟ್ಟಿದ್ದರು. ದಕ್ಷಿಣ ಕನ್ನಡದ ಜೈನ ಸಮಾಜದವರು ನಮ್ಮನ್ನು ಬೆಳೆಸಿದವರು. ನೂರಾರು ಕಾರ್ಯಕ್ರಮಗಳು ದಕ್ಷಿಣ ಕನ್ನಡ ಭಾಗದಲ್ಲೇ ನಡೆದಿದೆ. 8-10 ದಿನಗಳ ಕಾಲ ದಿನದಲ್ಲಿ 7-8 ಗಂಟೆ ನಿರಂತವಾಗಿ ಹಾಡುವ ಶಕ್ತಿಯನ್ನು ದೇವರು ಕರುಣಿಸಿದ್ದಾನೆ. ಈ ಭಾಗದ ಜೈನ ಸಮಾಜಕ್ಕೆ ಯಾವುದೇ ಪಂಚಕಲ್ಯಾಣ ಮಸ್ತಕಾಭಿಷೇಕ, ಆರಾಧನೆ, ವಿಧಾನಗಳಿರಲಿ ಉತ್ತರದಿಂದ ಬಂದ ಸಂಗೀತದವರು ಗುರುಗಳು ಪುರೋಹಿತ ವರ್ಗದವರು ಸೇರಿ ನಡೆಸುತ್ತಿದ್ದರು. ಈಚೆಗೆ ಇವೆಲ್ಲ ಕಾರ್ಯಕ್ರಮಗಳಲ್ಲಿ ನಮಗೂ ಹಾಡಲು ಸಿಗುತ್ತಿರುವುದು ಖುಷಿಯ ಸಂಗತಿ. ಹೆಚ್ಚಿನ ಕಾರ್ಯಕ್ರಮಗಳನ್ನು ಸೇವೆಯಾಗಿಯೇ ಮಾಡುವುದು ನಮಗೆ ದೊರೆತ ಪುಣ್ಯ ಸುಯೋಗ.

ನಮ್ಮನ್ನು ಟಿವಿ ಪರದೆಯಲ್ಲಿ ಬರಲು ಕಾರಣರಾದ ಮಕ್ಕಿಮನೆ ಕಲಾವೃಂದ, ಸುಧೇಶ್ ಜೈನ್ ಮಕ್ಕಿಮನೆ, ವೈಶಾಲಿ, ಜ್ವಾಲಾಮಾಲಾ ನ್ಯೂಸ್’ರವರಿಗೆ ಮನತುಂಬಿದ ಧನ್ಯವಾದಗಳು. ಒಟ್ಟಿನಲ್ಲಿ ನಮ್ಮನ್ನು ಬೆಳೆಸಿದ ಎಲ್ಲಾ ಸಂಗೀತ ಪ್ರಿಯರಿಗೆ ಅನಂತ ಕೃತಜ್ಞತೆಗಳು.
ಜಯಶ್ರೀ ಧರಣೀಂದ್ರ ಸದಾ ಹಸನ್ಮುಖಿ. ಪ್ರತಿಭಾನ್ವಿತರಲ್ಲಿ ಸಣ್ಣ ಮಟ್ಟದ ಪ್ರತಿಭೆ ಕಂಡರೂ ಅದನ್ನು ಬೆಂಬಲಿಸಿ ಪ್ರೋತ್ಸಾಹಿಸಿ ಅವರ ಸಂಗೀತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಶ್ರೇಷ್ಠ ಮಟ್ಟದ ತರಬೇತಿ ಕೊಟ್ಟು ಮಾನಸಿಕವಾಗಿಯೂ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಯಾವ ಕಾರ್ಯಕ್ರಮವಿದ್ದರೂ ಸಹ ಎಡೆಬಿಡದೆ ನಿರಂತರವಾಗಿ ತಮ್ಮನ್ನು ತಾವೇ ಮರೆತು ಹಾಡುತ್ತಾ ಪ್ರತಿಯೊಬ್ಬ ಯುವ ಸಂಗೀತಗಾರರಿಗೂ ಸ್ಪೂರ್ತಿಯಾಗಿದ್ದಾರೆ. ಪ್ರಶಸ್ತಿ ಸನ್ಮಾನ, ಬಿರುದುಗಳೆಂದರೆ ಅತ್ಯಂತ ದೂರ ಉಳಿಯುವ ಜಯಶ್ರೀಯವರ ಅದ್ಭುತ ಸಂಗೀತ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳಗಲಿ ಎಂದು ಹಾರೈಸುತ್ತಿದ್ದೇವೆ.


Get in Touch With Us info@kalpa.news Whatsapp: 9481252093

Tags: HoranaduJayashree Dharendra Jain HoranaduKannada ArticleKarnataka SingerMalnad ArticleSangeethaSingerSouth Kendraಕಂಠಸಿರಿಕಾರ್ಕಳಗಾಯಕಿಜಯಶ್ರೀ ಧರಣೇಂದ್ರ ಜೈನ್ ಹೊರನಾಡುಶಾಸ್ತ್ರೀಯ ಸಂಗೀತಸಂಗೀತಹೊರನಾಡು
Share250Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ತನ್ನ ಅಂಗವಿಕಲ ಮಗನನ್ನು ಪ್ರತಿದಿನವೂ ಭುಜದ ಮೇಲೆ ಹೊತ್ತು ಶಾಲೆಗೆ ಬಿಡುವ ಈ ತಾಯಿಯ ಕುರಿತು ನೀವು ತಿಳಿಯಲೇಬೇಕು

Next Post

ಹುಟ್ಟು ಹೋರಾಟಗಾರ ಬಿಎಸ್’ವೈ ಕೈ ಹಿಡಿಯುತ್ತಾರೆಯೇ 15 ಕ್ಷೇತ್ರದ ಮತದಾರರು?

kalpa News

kalpa News

Next Post
ಹುಟ್ಟು ಹೋರಾಟಗಾರ ಬಿಎಸ್’ವೈ ಕೈ ಹಿಡಿಯುತ್ತಾರೆಯೇ 15 ಕ್ಷೇತ್ರದ ಮತದಾರರು?

ಹುಟ್ಟು ಹೋರಾಟಗಾರ ಬಿಎಸ್’ವೈ ಕೈ ಹಿಡಿಯುತ್ತಾರೆಯೇ 15 ಕ್ಷೇತ್ರದ ಮತದಾರರು?

Leave a Reply Cancel reply

Your email address will not be published. Required fields are marked *

No Result
View All Result
Mysuru say no to drugs walkathon dcp harsha students
English Articles

BEDA BRO Should Be Everyone’s Goal : Mysuru DCP Priyamvada calls for Drug-Free Society

by kalpa News
September 17, 2026
0

Kalpa Media House  |  Mysuru | Students have a crucial role to play in the fight against drug abuse, and...

Read moreDetails
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL