ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರವಿಗೆ ಇದು ಕೇತುಗ್ರಹಣ. ಅಂದರೆ ಭೂಮಿ ಮತ್ತು ರವಿಯ ಮಧ್ಯೆ ಚಂದ್ರನು ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯ ಗ್ರಹಣದಲ್ಲಿ ರವಿಯ ಕಿರಣಗಳು ಕೆಲ ಘಂಟೆಗಳವರೆಗೆ ಭೂಮಿಯ ಕಡೆ ಪ್ರತಿಫಲನ ಆಗುವುದಿಲ್ಲ. ಈ ಸಲ ಕೇವಲ ರವಿ ಮಾತ್ರವಲ್ಲ. ಅವನ ಜತೆ ಗುರುವೂ ಅಸ್ತನಾಗಿ, ಶನಿ ಬುಧ ಯುತಿಯೂ ಇದ್ದು ಗ್ರಹಣ ಸಂಭವಿಸುತ್ತದೆ. ಆಗ ಭೂಮಿಗೆ ರವಿ ಕಾರಕತ್ವ, ಗುರು ಕಾರಕತ್ವ, ಶನಿ ಕಾರಕತ್ವ, ಬುಧ ಕಾರಕತ್ವಗಳು ಕೆಲ ಹೊತ್ತು ನಿಂತು ಹೋಗುತ್ತದೆ. ಯಾವುದೇ ಗ್ರಹರ ಕಾರಕತ್ವಗಳು ಭೂಮಿಯ ಮೇಲೆ ನಿರಂತರ ಪರಿಣಾಮ ಬೀರುತ್ತಿರಬೇಕು. ಕೆಲಕ್ಷಣ ಅದು ವಂಚಿತವಾದರೂ ಅಪಾಯವೇ.
ರವಿಯಿಂದ ತಾಮ್ರ ಲೋಹ, ಕೆಂಪು ವರ್ಣ, ಖಾರ ರಸ, ಇತ್ಯಾದಿ ಕಾರಕತ್ವಗಳು ಭೂಮಿಗೆ ಬರುತ್ತದೆ. ಇನ್ನೊಂದೆಡೆ ಇದರ ಪರಿಣಾಮವು ಕಣ್ಣು, ರೂಪ, ತೇಜಸ್ಸು, ದಾಹ, ಮನೋಮಯ, ಬೆವರು, ನಿದ್ರೆ, ವ್ಯಾನ ವಾಯು, ಪಾದಗಳು, ಆಲಸ್ಯ ಇತ್ಯಾದಿಗಳಿಗೆ ಪರಿಣಾಮ ಬೀರುತ್ತಿರುತ್ತದೆ. ಹಾಗಾದರೆ ರಾತ್ರಿ ಸೂರ್ಯನಿರುವುದಿಲ್ಲವಲ್ಲಾ ಎಂಬ ತಿಳುವಳಿಕೆ ಇಲ್ಲದ ಪ್ರಶ್ನಕರು ಇರುತ್ತಾರೆ. ಭೂಮಿಗೆ ಯಾವುದೇ ಭಾಗದಿಂದಾದರೂ ರವಿಯ ಸಂಪರ್ಕ ಬೇಕೇಬೇಕು.
ಆದರೆ ಗ್ರಹಣ ಕಾಲದಲ್ಲಿ ಇದು ವಂಚಿತವಾಗುತ್ತದೆ. ಅದರಲ್ಲೂ ಈ ಸಲದ ಗ್ರಹಣದಲ್ಲಿ 91 ಭಾಗದ ರವಿಯ ಕಿರಣಗಳು ಸುಮಾರು 2.59 ಗಂಟೆಗಳ ಕಾಲ ಭೂಮಿಗೆ ಸಿಗುವುದಿಲ್ಲ. ಇದು ಭೂಮಿಯ ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಭೂಮಿಯಲ್ಲಿದ್ದ ಸಕಲ ಜೀವರಾಶಿಗೂ ಮಾರಕವೆ. ಅದರಲ್ಲೂ ಕೆಲ ರಾಶಿ, ಕೆಲ ಜನನ ಲಗ್ನದ ಮನುಷ್ಯರಿಗೆ ಇದರ ದುಷ್ಪರಿಣಾಮ ಹೆಚ್ಚು. ಯಾವ ಯಾವ ರಾಶಿಗೆ ರವಿಯು ಯೋಗ ಕಾರಕನೋ, ಯಾವ ಯಾವ ರಾಶಿಗೆ ಮಾರಕನೋ ಆ ರಾಶಿಯವರಿಗೆ ದುಷ್ಪರಿಣಾಮ ಇದೆ.
ಬುಧನು ಯುವರಾಜ, ಚತುರತೆ, ಚರ್ಮ ಇತ್ಯಾದಿಗೆ ಕಾರಕನು. ವಿಟಾಮಿನ್ C ಇವನ ಕಾರಕತ್ವ. ಶನಿಗೆ Hemoglobin ಅಂದರೆ ಕಬ್ಬಿಣಾಂಶ. ಅಂದರೆ ಧಾರಣಾ ಶಕ್ತಿ. ಗುರುವಿಗೆ ಜ್ಞಾನ ಕಾರಕತ್ವ.
ಈ ಗ್ರಹಣ ಕಾಲವು ಷಡ್ ಗ್ರಹ ಯೋಗದಿಂದ ಕೂಡಿರುತ್ತದೆ. ಈ ಹೊತ್ತಿನಲ್ಲಿ ಈ ಕೇತುವನ್ನು ಬಿಟ್ಟು ಉಳಿದ ಪಂಚಗ್ರಹಗಳ ಕಾರಕತ್ವ ದುರ್ಬಲವಾಗುತ್ತದೆ. ಆಗ ಇದನ್ನು ರವಿಯಿಂದ D ವಿಟಾಮಿನ್ ಕೊರತೆ, ಗುರುವಿನಿಂದ A ವಿಟಾಮಿನ್ ಕೊರತೆ, ಬುಧನಿಂದ C ವಿಟಾಮಿನ್ ಕೊರತೆ, ಚಂದ್ರನಿಂದ ಕಾರ್ಬೋ ಹೈಡ್ರೇಟ್ ಕೊರತೆ, ಶನಿಯಿಂದ hemoglobin ಕೊರತೆಗಳಾಗುತ್ತದೆ ಎಂದು ಹೇಳಬೇಕಾಗುತ್ತದೆ.
ಯಾವ ಯಾವ ರಾಶಿಗಳವರಿಗೆ-
ಧನು, ಮಕರ, ವೃಷಭ, ಕರ್ಕಾಟಕ ರಾಶಿಯವರಿಗೆ ದುಷ್ಪರಿಣಾಮ ಆಗಬಹುದು. ಅಲ್ಲದೇ ಮೇಷ, ಮಿಥುನ, ಸಿಂಹ, ಕನ್ಯಾ, ವೃಶ್ಚಿಕ, ರಾಶಿಯವರ ಮೇಲೂ ದುಷ್ಪರಿಣಾಮ ಆಗಲಿದೆ. ಇದರಲ್ಲಿ ತುಲಾ, ಕುಂಭ, ಮೀನ ರಾಶಿಯವರಿಗೆ ದುಷ್ಪಲ ಇಲ್ಲ.
ತನು ಕಾರಕೋ ರವಿಃ ಎಂಬಂತೆ ದೇಹಕ್ಕೆ ಮುಖ್ಯ ಕಾರಕನೇ ರವಿ.ಇಂತಹ ದೇಹಕ್ಕೇ ದುಷ್ಪರಿಣಾಮ ಬೀರಿದರೆ ಇನ್ನೆಲ್ಲಿ ಸೌಖ್ಯ?
ಯಾರ ದೇಹದಲ್ಲಿ ಸಾಕಷ್ಟು ಪ್ರಮಾಣದ ವಿಟಾಮಿನ್ ಪೋಷಕಾಂಶಗಳು ಇರುತ್ತದೋ ಅವರಿಗೆ ದುಷ್ಪರಿಣಾಮಗಳ ಅನುಭವ ಸಿಗದು. ಆದರೂ ಎಲ್ಲೋ ಒಂದು ಕಡೆ damage ಆಗಿಯೇ ಆಗುತ್ತದೆ.
ಇದೇ ರೀತಿ ಭೂಮಿಯ ವಿಚಾರಕ್ಕಾಗುವಾಗ ಇದರ ಪರಿಣಾಮದ ರೂಪವೇ ಬೇರೆ. ಎಲ್ಲಾ ಗ್ರಹ ನಕ್ಷತ್ರಗಳಿಗೂ ನಿಯಮ ಬದ್ಧವಾಗಿ ಭ್ರಮಣ ಮಾಡಲು ಕಾಂತತ್ವ ಬೇಕು. ಅಂದರೆ ಅಯಸ್ಕಾಂತೀಯ(magnetic power) ಶಕ್ತಿ. ಅದು ಸಿಗುವುದು ರವಿಯಿಂದ ಮಾತ್ರ. ಇದು ಸರಿಯಾಗಿ ಸಂಯೋಜನೆ(charge) ಆಗದೆ ಹೋದಾಗ ಭೂಮಿಯು ತನ್ನ ಭ್ರಮಣದಲ್ಲಿ ವ್ಯತ್ಯಾಸ ಮಾಡಿಕೊಳ್ಳುತ್ತದೆ. ಈ ವ್ಯತ್ಯಾಸವು ಭೂಮಿಯೊಳಗಿನ plating ಮೇಲೆ ದುಷ್ಪರಿಣಾಮ ಬೀರಿ ಭೂ ಕಂಪನಗಳಾಗಬಹುದು. ಇದರ ಪರಿಣಾಮ ಚಂಡ ಮಾರುತ, ಸುನಾಮಿಗಳು ಏಳಬಹುದು. ಉಲ್ಕಾ ಪಾತಗಳು ಉಂಟಾದೀತು. ಹೇಗೆ ದೇಹ ಸ್ಥಿತಿಯೋ ಹಾಗೆಯೇ ಭೂಮಿಯ ಸ್ಥಿತಿ. ದೇಹ ಸ್ಥಿತಿ ಹಾಳಾದಾಗ ರೋಗ, ಕಾಯಿಲೆ ಎನ್ನುತ್ತೇವೆ. ಭೂಮಿಯ ಸ್ಥಿತಿ ಹಾಳಾದಾಗ ವಿಕೋಪ ಎನ್ನುತ್ತೇವೆ.
ಪರಿಹಾರ:
ಶಾಸ್ತ್ರಗಳಲ್ಲಿ ಉಪರಾಗ ಶಾಂತಿ, ಗ್ರಹಶಾಂತಿ, ಜಪ, ಧ್ಯಾನಾದಿಗಳನ್ನು ಹೇಳಿದೆ. ಘಟ(ಉದರ) ಕಾಲಿಯಾಗಿಡಿ(ಉಪವಾಸ) ಎಂದು ಪ್ರಾಜ್ಞರು ತಮ್ಮ ಅನುಭವದಲ್ಲಿ ತಿಳಿಸಿದ್ದಾರೆ. ಹಿಂದಿನ ದಿನ ರಾತ್ರಿ ಭೋಜನ ನಿಷಿದ್ಧ. ಮರುದಿನ ಗ್ರಹಣಾ ನಂತರ ಆರು ಘಂಟೆಯ ಬಳಿಕ ಆಹಾರ ಸೇವಿಸಬಹುದು. ರೋಗಿಗಳಿಗೆ, ಮಕ್ಕಳಿಗೆ, ವೃದ್ಧರಿಗೆ ಆದಷ್ಟು ಕನಿಷ್ಟವಾದ ದ್ರವ ರೂಪದ ಆಹಾರ ಕೊಡಬೇಕು. ಇದು ಅನಿವಾರ್ಯವಾದದ್ದರಿಂದ ಕೊಡಬಹುದು ಎಂದಿದ್ದಾರೆ.
ಕುರುಕ್ಷೇತ್ರದಲ್ಲಿ ಅಶ್ವತ್ಥಾಮ ನಾರಾಯಣಾಸ್ತ್ರವನ್ನು ಪ್ರಯೋಗಿಸಿದ. ಅದನ್ನು ತಡೆಯುವ ಸಾಮರ್ಥ್ಯ ಯಾರಿಗೂ ಇಲ್ಲ. ಕೃಷ್ಣನಿಗೂ ಇಲ್ಲ. ಆದರೆ ನಾರಾಯಣಾಸ್ತ್ರದ ಗುಣ ಏನು ಎಂದರೆ ಯಾರು ಶರಣಾಗಿ ನಿಶ್ಯಸ್ತ್ರಧಾರಿಗಳಾಗುತ್ತಾರೋ ಅವರನ್ನು ಬಾಧಿಸುವುದಿಲ್ಲ. ಈ ವಿಚಾರ ಕೃಷ್ಣನಿಗೆ ಮಾತ್ರ ಗೊತ್ತಿತ್ತು. ತಕ್ಷಣವೇ ಪಾಂಡವ ಸೈನ್ಯವನ್ನು ಶಸ್ತ್ರ ಕೆಳಗಿಟ್ಟು ನಾರಾಯಣ ನಾಮೋಚ್ಛರಣೆಗೆ ಆದೇಶಿಸಿದ. ಆಗ ಆ ಅಸ್ತ್ರವು ನೇರವಾಗಿ ಕೃಷ್ಣನಲ್ಲಿ ಐಕ್ಯವಾಗುತ್ತದೆ. ಅದೇ ರೀತಿ ಸೂರ್ಯನಿಗೆ ಗ್ರಹಣ ಬಂದಾಗ ಯಾವ ಪ್ರತ್ಯಸ್ತ್ರವೂ ನಿಷ್ಪ್ರಯೋಜಕ. ಅದು ಗ್ರಹಣ ನಿಯಮ ಉಲ್ಲಂಘನೆ ಮಾಡಿದವರಿಗೆ ಮಾತ್ರ ಬಾಧೆ ಕೊಡುತ್ತದೆ. ’ಲಂಘನಂ ಪರಮೌಷಧಂ ಎಂಬಂತೆ ಗ್ರಹಣ ಕಾಲದಲ್ಲಿ ಘಟಶುದ್ದಿ ಮಾಡಿಕೊಂಡು, ಉಪವಾಸ ಇದ್ದರೆ ಅಪಾಯಗಳಿರದು.
ನಮ್ಮ ನಮ್ಮ ಆಯುರಾರೋಗ್ಯವು ನಮ್ಮ ನಮ್ಮ ನಿಯಮಬದ್ಧವಾದ ಗುಣ ನಡತೆಗಳಲ್ಲೇ ಇರುತ್ತದೆಯೇ ವಿನಃ ದೇವರು ಕೊಡುವುದಲ್ಲ. ಒಳ್ಳೆಯ ನಿಯಮ ಪಾಲನೆಯನ್ನೇ ದೇವರು ಎಂದರು.
Get in Touch With Us info@kalpa.news Whatsapp: 9481252093
Discussion about this post