ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಚಿಂತಕ ಹಾಗೂ ಹಿರಿಯ ಮುತ್ಸದ್ಧಿ ಪ್ರೊ ಎಲ್.ಎಸ್. ಶೇಷಗಿರಿ ರಾವ್(95) ಇಂದು ಇಹಲೋಕ ತ್ಯಜಿಸಿದ್ದಾರೆ.
ತಾವು ರಚಿಸಿದ ನಿಘಂಟುವಿನಿಂದಲೇ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿನ ಬೆಳಕಾಗಿದ್ದ ಅವರು ಹಲವು ದಿನಗಳಿಂದ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಇಂಗ್ಲಿಷ್ ಸಾಹಿತ್ಯ ಚರಿತ್ರೆ ಕೃತಿಗಾಗಿ ರಾವ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಸಂದಿದ್ದು, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಂತ ಪ್ರತಿಷ್ಠಿತ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನು ಗೌರವಿಸಿತ್ತು.
ಎಲ್ ಎಸ್ ಎಸ್ ಅವರ ಕೃತಿಗಳು
ಸಣ್ಣಕಥೆಗಳ ಸಂಕಲನಗಳು:
*ಇದು ಜೀವನ.
*ಜಂಗಮಜಾತ್ರೆಯಲ್ಲಿ.
* ಮುಟ್ಟಿದ ಗುರಿ ಮತ್ತು ಇತರ ಕಥೆಗಳು.
* ಮುಯ್ಯಿ.
ಸಾಹಿತ್ಯ ವಿಮರ್ಶೆ
*ಕಾದಂಬರಿ-ಸಾಮಾನ್ಯಮನುಷ್ಯ.
* ಆಲಿವರ್ ಗೋಲ್ಡ್ ಸ್ಮಿತ್,
* ಮಾಸ್ತಿ ವೆಂಕಟೇಶ ಐಯ್ಯಂಗಾರ್.
* ಇಂಗ್ಲೀಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ.
ವಿಮರ್ಶೆ
* ಪಾಶ್ಚಾತ್ಯಸಾಹಿತ್ಯ ವಿಹಾರ.
* ಸಾಹಿತ್ಯ ವಿಶ್ಲೇಷಣೆ.
* ಹೊಸಗನ್ನಡ ಸಾಹಿತ್ಯ .
* ಫ್ರಾನ್ಸ್ ಕಾಫ್ಕಾ,
* ಗ್ರೀಕ್ ರಂಗಭೂಮಿ ಮತ್ತು ನಾಟಕ.
* ವಿಲಿಯಮ್ ಶೇಕ್ಸ್ ಪಿಯರ್,
* ಸಾಹಿತ್ಯ-ಬದುಕು,
* ಟಿ. ಪಿ. ಕೈಲಾಸಂ,
* ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ,
* ಮಾಸ್ತಿ : ಜೀವನ ಮತ್ತು ಸಾಹಿತ್ಯ,
* ಇಂಗ್ಲೀಷ್ ಸಾಹಿತ್ಯ ಚರಿತ್ರೆ,
* ಸಾಹಿತ್ಯದ ಕನ್ನಡಿಯಲ್ಲಿ,
* ಪಾಶ್ಚಾತ್ಯಸಾಹಿತ್ಯಲೋಕದಲ್ಲಿ,
* ಎಲ್. ಎಸ್. ಎಸ್. ಕಂಡ ತ. ರಾ. ಸು.
* ಮಹಾಭಾರತ( ನಾಲ್ಕು ಸಂಪುಟಗಳು).
ನಿಘಂಟುಗಳು
* ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲಿಷ್ ನಿಘಂಟು,
*. ಐ.ಬಿ.ಎಚ್ ಇಂಗ್ಲಿಷ್-ಕನ್ನಡ ನಿಘಂಟು,
*. ಐ. ಬಿ. ಎಚ್ ಕನ್ನಡ -ಕನ್ನಡ ನಿಘಂಟು,
* ಸುಭಾಶ್ ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು,
* ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲಿಷ್-ಕನ್ನಡ್ ನಿಘಂಟು,
* ಸುಲಭ ಇಂಗ್ಲಿಷ್
ಪ್ರಶಸ್ತಿ, ಪುರಸ್ಕಾರಗಳು
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
* ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
* ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ.
* ವರ್ಧಮಾನ ಪ್ರಶಸ್ತಿ.
* ಡಾ. ಅ.ನ.ಕೃ. ಪ್ರಶಸ್ತಿ.
* ಬಿ.ಎಂ.ಶ್ರೀ ಪ್ರಶಸ್ತಿ.
* ಬಿ.ಎಂ.ಇನಾಮದಾರ ಪ್ರಶಸ್ತಿ.
* ಕಾವ್ಯಾನಂದ ಪ್ರಶಸ್ತಿ.
* ದೇವರಾಜ ಬಹಾದ್ದೂರ ಪ್ರಶಸ್ತಿ.
* ಮಾಸ್ತಿ ಪ್ರಶಸ್ತಿ.
ಈ ಪ್ರಮುಖ ಪುರಸ್ಕಾರಗಳು ಸಂದಿವೆ.
Get in Touch With Us info@kalpa.news Whatsapp: 9481252093
Discussion about this post