ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕನ್ನಡ ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಗಳನ್ನು ನೀಡಿರುವ ಹಿರಿಯ ಸಾಹಿತಿ ಡಾ.ಚಿದಾನಂದ ಮೂರ್ತಿ ಅವರ ಈ ಚರಿತ್ರಾರ್ಹ ಸಾಧನೆಯನ್ನು ಮುಂದಿನ ಸಾವಿರ ವರ್ಷಗಳಾದರೂ ಸ್ಮರಿಸಬೇಕಾದ ಹಾಗೂ ಮುಂದಿನ ಪೀಳಿಗೆಗೆ ರವಾನೆ ಮಾಡಬೇಕಾದ ಅಗತ್ಯವಿದೆ.
ಹೌದು… ಕನ್ನಡ ಭಾಷೆಗಾಗಿಯೇ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂಬ ಕೂಗು ಎತ್ತಿದ ಚಿಮೂ, ಇದಕ್ಕಾಗಿ 1985ರಲ್ಲಿಯೇ ಬೆಂಗಳೂರಿನಿಂದ ಹಂಪಿಗೆ ಕಾಲ್ನಡಿಗೆ ಯಾತ್ರೆ ಕೈಗೊಂಡು, ಇದನ್ನು ರಾಜ್ಯವ್ಯಾಪಿ ಹರಡಿದರು. ಮಾತ್ರವಲ್ಲ, ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವ ಸಂಪುಟ, ಶಾಸಕರ ಮೇಲೆ ಒತ್ತಾಯ ತಂದರು. ಇದರ ಫಲವಾಗಿ, 1991ರಲ್ಲಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಆರಂಭವಾಯಿತು.
ಕರ್ನಾಟಕದ ಭಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ, ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು.
ಕನ್ನಡ ಭಾಷೆಗಾಗಿ ಇಂತಹ ಒಂದು ಅದ್ಬುತ ಹಾಗೂ ಚರಿತ್ರಾರ್ಹ ಸಾಧನೆಗೆ ಕಾರಣರಾದ ಚಿಮೂ ಅವರು ಪ್ರತಿ ಕನ್ನಡಿಗರಿಗೂ ಪ್ರಾರ್ಥಸ್ಮರಣೀಯರು.
Get in Touch With Us info@kalpa.news Whatsapp: 9481252093
Discussion about this post