ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಸಮಾಜ ಸುಧಾರಣೆಯನ್ನೇ ತಮ್ಮ ಮುಖ್ಯ ಧ್ಯೇಯಗಳಲ್ಲಿ ಒಂದಾಗಿಸಿಕೊಂಡಿದ್ದ ಬೃಂದಾವನಸ್ಥ ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೆ ಇಂದು ಭಟ್ಕಳದ ಮುಸ್ಲಿಂ ಮುಖಂಡರು ಪೇಜಾವರ ಮಠದಲ್ಲಿಯೇ ನಮನ ಸಲ್ಲಿಸಿದರು.
ಹೌದು… ಇಂದು ಶ್ರೀಮಠಕ್ಕೆ ಆಗಮಿಸಿದ್ದ ಭಟ್ಕಳದ ಮುಸ್ಲಿಂ ಮುಖಂಡರು, ಇತ್ತೀಚೆಗೆ ಹರಿಪಾದ ಸೇರಿದ ಹಿರಿಯ ಶ್ರೀಗಳಿಗೆ ವಿಶೇಷ ನಮನ ಸಲ್ಲಿಸಿ, ಗುರುಗಳನ್ನು ನೆನೆದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ನಮ್ಮ ದುಃಖದ ಸಂದರ್ಭದಲ್ಲಿ ನೀವು ಭಾಗಿಯಾಗಿರುವುದು ನಮಗೆ ಒಂದಷ್ಟು ಸಮಾಧಾನ ತಂದಿದೆ. ದೇಶದಲ್ಲಿ ಶಾಂತಿ, ಸುಭಿಕ್ಷೆಯಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ, ಹಲವು ಅಶಾಂತಿಯುತ ಘಟನೆಗಳು ಇವುಗಳ ಮೇಲಿನ ನಂಬಿಕೆಯನ್ನು ಸಡಿಲಗೊಳಿಸುತ್ತಿದೆ. ಹೀಗಾಗಿ, ಇದನ್ನು ಹೋಗಲಾಡಿಸಿ, ಸಮಾಜವನ್ನು ಒಗ್ಗೂಡಿಸುವ ದಾರಿಗಳನ್ನು ಹುಡುಕಬೇಕಿದೆ ಎಂದರು.
ನಮ್ಮ ಧರ್ಮ ಹಾಗೂ ಆಚಾರ-ವಿಚಾರಗಳನ್ನು ನಡೆಸಿಕೊಂಡು ಬರುವ ಜೊತೆಯಲ್ಲಿ, ಇತರೆ ಧರ್ಮಗಳನ್ನೂ ಸಹ ಗೌರವಿಸಿದರೆ ಯಾವುದೇ ಸಮಸ್ಯೆ ಬರುವುದಿಲ್ಲ. ನಮ್ಮಗಳ ಉತ್ಸವಗಳಲ್ಲಿ ಪರಸ್ಪರ ಭಾಗವಹಿಸುವಿಕೆ ಇದರಲ್ಲಿ ಪ್ರಮುಖವಾದುದಾಗಿದೆ. ನಿಮ್ಮೊಂದಿಗೆ ನಾವು ಎಂದಿಗೂ ಇದ್ದೇವೆ ಎಂದರು.
ಯಾವುದೇ ಮಾರುಕಟ್ಟೆ, ಸಿನಿಮಾ ಹಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಾವು ಒಟ್ಟಾಗಿ ಇರುವುದು ಸಾಧ್ಯವಾಗುವುದಾದರೆ, ಧಾರ್ಮಿಕ ಸ್ಥಳಗಳಲ್ಲೂ ಸಹ ಇರುವುದು ಯಾಕೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಎಲ್ಲರೂ ಮುಕ್ತ ಮನಸ್ಸಿನಿಂದ ಇರಬೇಕು ಅಷ್ಟೇ ಎಂದು ಭಾವೈಕ್ಯತೆ ಹಿತನುಡಿ ಆಡಿದರು.
Get in Touch With Us info@kalpa.news Whatsapp: 9481252093
Discussion about this post