ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಪಂದ್ಯ ಕ್ರಿಕೆಟ್ ಪ್ರಿಯ ಕನ್ನಡಿಗರು ಹೆಮ್ಮೆ ಪಡುವಂತಿದೆ. ಕರ್ನಾಟಕದ ಕೆ ಎಲ್ ರಾಹುಲ್ ಕೇವಲ ಬ್ಯಾಟಿಂಗ್ ಒಂದೇ ಅಲ್ಲದೆ ವಿಕೆಟ್ ಕೀಪಿಂಗ್ ನಲ್ಲೂ ಮಿಂಚಿದರು.
ಜಾಗತಿಕ ಟಿ20 ಕ್ರಿಕೆಟ್’ನ ರೇಟಿಂಗ್’ನಲ್ಲಿ ಒಟ್ಟು 823 ಅಂಕಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೆ ನೋಡಿದರೆ ನಾಯಕ ಕೊಹ್ಲಿ 673, ರೋಹಿತ್ 622 ಅಂಕಗಳಿಂದ ಕ್ರಮವಾಗಿ 9 ಮತ್ತು 10 ನೇ ಸ್ಥಾನದಲ್ಲಿದ್ದಾರೆ.
ನ್ಯೂಜಿಲೆಂಡ್ ಪ್ರವಾಸ ರಾಹುಲ್ ಅವರಿಗೆ ಸುವರ್ಣಾವಕಾಶವನ್ನೇ ಕೊಟ್ಟಂತಾಗಿದೆ.
ಕೊನೆಯ ಟಿ20 ಪಂದ್ಯದಲ್ಲಿ ಗಾಯಾಳುವಾದ ನಾಯಕ ರೋಹಿತ್ ಅವರ ಬದಲಿಗೆ ನಾಯಕತ್ವ ರಾಹುಲ್ ಗೇ ಅರಸಿ ಬಂತು. ಸಿಕ್ಕ ಪುಟ್ಟ ಅವಕಾಶವನ್ನು ಅತ್ಯಂತ ಕೌಶಲದಿಂದಲೇ ನಿರ್ವಹಿಸಿದರು. ಭಾರತ ಏಳು ರನ್ ಅಂತರದಲ್ಲಿ ಮತ್ತೆ ಗೆಲ್ಲುವಂತೆ ಮಾಡಿದರು.
ಅಷ್ಟೇ ಅಲ್ಲ ಸರಣಿ ಶ್ರೇಷ್ಠ ಎಂಬ ಪುರಸ್ಕಾರಕ್ಕೂ ಪಾತ್ರರಾದರು.
Get in Touch With Us info@kalpa.news Whatsapp: 9481252093














