ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀನಗರ: ಪುಲ್ವಾಮಾದಲ್ಲಿ ನಡೆಸಿದ ದಾಳಿ ಮಾದರಿಯಲ್ಲೇ ದೇಶದ ಹಲವೆಡೆ ಭಾರೀ ವಿಧ್ವಂಸಕ ಕೃತ್ಯ ನಡೆಸಲು ನಿಷೇಧಿತ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಈ ಕುರಿತಂತೆ ಗುಪ್ತಚರ ಇಲಾಖೆಗಳು ಕೇಂದ್ರ ಸರ್ಕಾರ ಹಾಗೂ ಭದ್ರತಾ ಪಡೆಗಳನ್ನು ಎಚ್ಚರಿಸಿದ್ದು, ನಿಷೇಧಗೊಂಡಿರುವ ಜೈಷ್ ಉಗ್ರ ಸಂಘಟನೆ ಘಜ್ನವಿ ಫೋರ್ಸ್ ಎಂಬ ಹೊಸ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ನೂರಾರು ಉಗ್ರರಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗಿದೆ ಎಂದಿದೆ.
ಪಾಕಿಸ್ಥಾನದ ಕುಖ್ಯಾತ ಪತ್ತೇದಾರಿ ಸಂಸ್ಥೆ – ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಜೈಷ್ ಹೋರಾಟಗಾರರ ನೇತೃತ್ವದಲ್ಲಿ ಭಾರತದಲ್ಲಿ ಹೆಚ್ಚು ಮಾರಕ ಭಯೋತ್ಪಾದಕ ದಾಳಿಗಳನ್ನು ನಡೆಸುವ ವಿಸ್ತಾರವಾದ ಯೋಜನೆಯನ್ನು ರೂಪಿಸಿದೆ.
ಹೊಸದಾಗಿ ರಚಿಸಲಾದ ಸಶಸ್ತ್ರ ಗುಂಪನ್ನು ’ಘಜ್ನವಿ ಫೋರ್ಸ್’ ಎಂದು ಕರೆಯಲಾಗುತ್ತದ್ದು, ಇತರ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಎಲ್ಇಟಿ, ಹಿಜ್ಬುಲ್ ಮುಜಾಹಿದ್ದೀನ್, ಔಜಿಎಚ್ ಮತ್ತು ಅಲ್ ಬದ್ರ್ ಅನ್ನು ಒಳಗೊಂಡಿದೆ. ಈ ಗುಂಪಿಗೆ ಸೇರಿದ ಭಯೋತ್ಪಾದಕರು ಐಇಡಿಗಳನ್ನು ನೆಡುವ ಮೂಲಕ ಭದ್ರತಾ ಪಡೆಗಳು, ಅವರ ಬೆಂಗಾವಲುಗಳು, ಪ್ರಮುಖ ಸ್ಥಾಪನೆಗಳು ಮತ್ತು ಗಡಿ ಹೊರಠಾಣೆಗಳನ್ನು ಗುರಿಯಾಗಿಸಲು ಪ್ರಯತ್ನಿಸಬಹುದು ಎಂದು ಏಜೆನ್ಸಿಗಳು ಎಚ್ಚರಿಸಿದೆ.
ಗುಪ್ತಚರ ಇಲಾಖೆ ಮಾಹಿತಿಯ ಪ್ರಕಾರ, ’ಘಜ್ನವಿ ಫೋರ್ಸ್’ನ ಜಿಹಾದಿಗಳು ಸ್ಫೋಟಕಗಳಿಂದ ತುಂಬಿದ ಟ್ರಕ್’ಗಳು, ಕಾಶ್ಮೀರ ಮತ್ತು ಗಡಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ವಾಹನಗಳನ್ನು ಸಹ ಬಳಸಬಹುದು ಎಂದು ಎಚ್ಚರಿಸಿದೆ.
ಈ ಮಾಹಿತಿಯ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಪಡೆಗಳನ್ನು ಜಾಗರೂಕರಾಗಿರಲು ಮತ್ತು ಎಚ್ಚರಿಕೆಯಿಂದ ಇರಲು ನಿರ್ದೇಶಿಸಲಾಗಿದೆ. ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಏಜೆನ್ಸಿಗಳನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ತಡೆದ ಒಳಹರಿವಿನ ನಿಖರ ಮತ್ತು ಸಮಯೋಚಿತ ವಿಶ್ಲೇಷಣೆಗಾಗಿ ಸಮನ್ವಯವನ್ನು ಹೆಚ್ಚಿಸಲು ಕೇಳಿಕೊಳ್ಳಲಾಗಿದೆ.
Get in Touch With Us info@kalpa.news Whatsapp: 9481252093
Discussion about this post