ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಗ್ರಾಮ ದೇವತೆ ಚಳ್ಳಕೆರೆಯಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 2ರಿಂದ ಆರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದ್ದು, ಇದಕ್ಕಾಗಿ ಭರದ ಸಿದ್ದತೆಗಳು ನಡೆದಿವೆ.
ಮಾರ್ಚ್ 2ರಂದು ಜಲಧಿ ಗಂಗಾಪೂಜೆ, ಶ್ರೀ ವೀರಭದ್ರ ಸ್ವಾಮಿಗೆ ವೀರಗಾಶಿ ನಡೆಯಲಿದ್ದು, ರಾತ್ರಿ ವೀರಭದ್ರ ಸ್ವಾಮಿ ಉತ್ಸವ, ಪುರಂತರ ವೀರನಾಟ್ಯ ನಡೆಯಲಿದೆ.
3ರಂದು ಬಲ ಕಳಶ, ಉಡಿ ತುಂಬುವುದು, ಅಮ್ಮನವರಿಗೆ ಮಾಂಗಲ್ಯಧಾರಣೆ, ಕೋಣನ ಉತ್ಸವ ನಡೆಯಲಿದ್ದು, 4ರಂದು ಹಿಟ್ಟಿನಾರತಿ, ಬೇವಿನ ಸೀರೆ ಉತ್ಸವ ನಡೆಯಲಿದೆ.
5ರಂದು ಮುಕ್ತಿ ಬಾವುಟ ಹರಾಜು, ಮಧ್ಯಾಹ್ನ 3.30ಕ್ಕೆ ಸಿಡಿ ಉತ್ಸವ, ವೀರ ನಾಟ್ಯ, ಕೀಲುಕುದುರೆ, ಮರಗಾಲು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
6ರಂದು ಮಧ್ಯಾಹ್ನ 3 ಗಂಟೆಗೆ ಗಾವು ಸಭೆ, ಪೋತರಾಜರ ವೀರನಾಟ್ಯ ನಡೆಯಲಿದ್ದು, 7ರಂದು ಸಂಜೆ 6 ಗಂಟೆಗೆ ಓಕಳಿ, ಶ್ರಿ ಚಳ್ಳಕೆರೆಯಮ್ಮನವರು, ಶ್ರೀ ಉಡುಸಲಮ್ಮನವರು ಹಾಗೂ ಶ್ರೀ ವೀರಭದ್ರ ಸ್ವಾಮಿಯವರು ಉತ್ಸವ ನಡೆಯಲಿದೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post